ಮೋದಿ ಸಭೆಗೆ ಹೋಗದ ದೀದಿ: ಕೋಲ್ಕತ್ತಾ ಫೋರ್ಟ್ ಟ್ರಸ್ಟ್‌ಗೆ ಶಾಮಾ ಪ್ರಸಾದ್ ಹೆಸರು!

Suvarna News   | Asianet News
Published : Jan 12, 2020, 06:57 PM IST
ಮೋದಿ ಸಭೆಗೆ ಹೋಗದ ದೀದಿ: ಕೋಲ್ಕತ್ತಾ ಫೋರ್ಟ್ ಟ್ರಸ್ಟ್‌ಗೆ ಶಾಮಾ ಪ್ರಸಾದ್ ಹೆಸರು!

ಸಾರಾಂಶ

ಮೋಧಿ ಕಾಣಿಸಿಕೊಂಡ ವೇದಿಕೆ ಹತ್ತಲು ಒಲ್ಲೆ ಎಂದ ದೀದಿ| ಕೋಲ್ಕತ್ತಾ ಪೋರ್ಟ್ 150ನೇ ವರ್ಷಾಚರಣೆ ಕಾರ್ಯಕ್ರಮ| ಟ್ರಸ್ಟ್‌ಗೆ ಶಾಮಾ ಪ್ರಸಾದ್ ಮುಖರ್ಜಿ ಹೆಸರು ಘೋಷಿಸಿದ ಪ್ರಧಾನಿ ಮೋದಿ| ಭಾರತದ ಬಂದರುಗಳು ಅಭಿವೃದ್ಧಿಯ ಬಾಗಿಲುಗಳು ಎಂದ ಮೋದಿ| ಮೋದಿ ಸಮಾರಂಭಕ್ಕೆ ಗೈರಾದ ಪ.ಬಂಗಹಾಳ ಸಿಎಂ ಮಮತಾ ಬ್ಯಾನರ್ಜಿ|

ನವದೆಹಲಿ(ಜ.12): ಪ್ರಧಾನಿ ಮೋದಿ ಭಾಗವಹಿಸಿದ್ದ ಕೋಲ್ಕತಾ ಪೋರ್ಟ್ ಟ್ರಸ್ಟ್'ನ 150ನೇ ವರ್ಷಾಚರಣೆ ಕಾರ್ಯಕ್ರಮಕ್ಕೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಗೈರು ಹಾಜರಾಗಿದ್ದಾರೆ.

ಕೋಲ್ಕತ್ತಾ ಪೋರ್ಟ್ ಟ್ರಸ್ಟ್‌ನ 150ನೆ ವರ್ಷಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನಿ ಮೋದಿ, ಟ್ರಸ್ಟ್‌ನ ಹೆಸರನ್ನು ಶಾಮಾ ಪ್ರಸಾದ್‌ ಮುಖರ್ಜಿ ಎಂದು ಮರುನಾಮಕರಣ ಮಾಡುವುದಾಗಿ ಘೋಷಿಸಿದರು.

ಪ.ಬಂಗಾಳವೂ ಸೇರಿದಂತೆ ಇಡೀ ಭಾರತದ ಔದ್ಯೋಗಿಕ ಕ್ಷೇತ್ರದ ಬೆಳವಣಿಗೆಗೆ ಅಡಿಪಾಯ ಹಾಕಿದ ಶಾಮಾ ಪ್ರಸಾದ್ ಮುಖರ್ಜಿಗೆ ಗೌರವಪೂರ್ವಕವಾಗಿ ಈ ಪೋರ್ಟ್‌ನ್ನು ಸಮರ್ಪಿಸುತ್ತಿರುವುದಾಗಿ ಪ್ರಧಾನಿ ಮೋದಿ ಹೇಳಿದರು.

ವಿರೋಧಿಗಳ ನೆಲದಲ್ಲಿ ಧೈರ್ಯವಾಗಿ ಸಿಎಎ ಸಮರ್ಥಿಸಿಕೊಂಡ ಧೀರ!

ಕೋಲ್ಕತ್ತಾದ ಬಂದರು ಕೇವಲ ವ್ಯಾವಹಾರಿಕ ಬಂದರಾಗಿ ಉಳಿದಿಲ್ಲ. ಈ ದೇಶದ ಒಂದು ಪೀಳಿಗೆಯ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿದ್ದು, ಇದರ ಅಭಿವೃದ್ಧಿ ನಮ್ಮೆಲ್ಲರ ಕರ್ತವ್ಯ ಎಂದು ಮೋದಿ ಈ ವೇಳೆ ನುಡಿದರು.

ಭಾರತದ ಬಂದರುಗಳು ದೇಶದ ಅಭಿವೃದ್ಧಿಯ ಬಾಗಿಲುಗಳಾಗಿದ್ದು, ಇದರ ಆಧುನಿಕರಣ ನವ ಭಾರತದ ನಿರ್ಮಾಣಕ್ಕೆ ನಾಂದಿಯಾಗಲಿ ಎಂದು ಮೋದಿ ಹಾರೈಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಮಮತಾ ಬ್ಯಾನರ್ಜಿ ಹಾಗೂ ಪ್ರಧಾನಿ ಮೋದಿ ಕಾಣಿಸಿಕೊಳ್ಳಲಿದ್ದಾರೆಂದು ಹೇಳಲಾಗುತ್ತಿತ್ತು. ಆದರೆ ಮಮತಾ ಸಮಾರಂಭದಿಂದ ದೂರ ಉಳಿದಿದ್ದು ಎದ್ದು ಕಾಣುತ್ತಿತ್ತು.

ದೀದಿ-ಮೋದಿ ಮುಲಾಖಾತ್: ಪಿಎಂ-ಸಿಎಂ ನಡುವೆ ಖಾಸ್‌ಬಾತ್!

ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಪ್ರಧಾನಿ ಮೋದಿ, ಪ.ಬಂಗಾಳ ಮಮತಾ ಬ್ಯಾನರ್ಜಿ, ರಾಜ್ಯಪಾಲ ಜಗದೀಪ್ ಧನಕರ್ ಹಾಗೂ ಕೇಂದ್ರ ಸಚಿವ ಮನ್ಸುಖ್ ಮಂಡವಿಯಾ ಅವರ ಹೆಸರನ್ನು ನಮೂದಿಸಲಾಗಿತ್ತು. ಮಮತಾ ಹೊರತಾಗಿ ಉಳಿದವರೆಲ್ಲರೂ ಭಾಗವಹಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!