'ಮರಾಡು' ಧ್ವಂಸದ ಬೆನ್ನಲ್ಲೇ 7 ಸ್ಟಾರ್‌ ರೆಸಾರ್ಟ್‌ ಕೆಡವಲು ಸುಪ್ರೀಂ ಆದೇಶ!

Published : Jan 12, 2020, 04:37 PM IST
'ಮರಾಡು' ಧ್ವಂಸದ ಬೆನ್ನಲ್ಲೇ 7 ಸ್ಟಾರ್‌ ರೆಸಾರ್ಟ್‌ ಕೆಡವಲು ಸುಪ್ರೀಂ ಆದೇಶ!

ಸಾರಾಂಶ

ಕೇರಳದಲ್ಲಿ ಮರಾಡು ಬಳಿಕ 7 ಸ್ಟಾರ್‌ ರೆಸಾರ್ಟ್‌ ಕೆಡವಲು ಸುಪ್ರೀಂಕೋರ್ಟ್‌ ಆದೇಶ| ವೆಂಬನಾಡ್‌ ಸರೋವರದದ ಮೇಲಿರುವ 7 ಸ್ಟಾರ್‌ ಕಾಪಿಕೊ ಕೇರಳ ರೆಸಾರ್ಟ್‌ 

ನವದೆಹಲಿ[ಜ.12]: ಕೇರಳದ ಕೊಚ್ಚಿಯ ಮರಾಡು ಮಹಾನಗರ ಪಾಲಿಕೆ ಪ್ರದೇಶದಲ್ಲಿ ಅಕ್ರಮ ಅಪಾರ್ಟ್‌ಮೆಂಟ್‌ಗಳನ್ನು ನೆಲಸಮಗೊಳಿಸುವ ಕಾರ್ಯಕ್ಕೆ ಚಾಲನೆ ದೊರೆತ ಬೆನ್ನಲ್ಲೇ, ಕರಾವಳಿ ನಿಯಂತ್ರಣ ವಲಯದ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ಆಲಪ್ಪುಳದಲ್ಲಿ ವೆಂಬನಾಡ್‌ ಸರೋವರದದ ಮೇಲಿರುವ 7 ಸ್ಟಾರ್‌ ಕಾಪಿಕೊ ಕೇರಳ ರೆಸಾರ್ಟ್‌ ಅನ್ನು ಕೆಡವಲು ಸುಪ್ರೀಂಕೋರ್ಟ್‌ ಶುಕ್ರವಾರ ಆದೇಶಿಸಿದೆ.

ನಿಯಮ ಉಲ್ಲಂಘನೆ: 343 ಮನೆಗಳಿದ್ದ ಅಪಾರ್ಟ್‌ಮೆಂಟ್ಸ್‌ ಕ್ಷಣದಲ್ಲಿ ನೆಲಸಮ!

ಕೇರಳ ಹೈಕೋರ್ಟ್‌ 2013ರಲ್ಲಿ ರೆಸಾರ್ಟ್‌ ಕೆಡವಲು ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿದಿದೆ.ಬೋಸ್‌ ಮತ್ತು ವಿ. ರಾಮಸುಬ್ರಮಣಿಯನ್‌ ಅವರಿದ್ದ ಪೀಠ ಎತ್ತಿ ಹಿಡಿದಿದ್ದು, ರೆಸಾರ್ಟ್‌ ನೆಲಸಮಗೊಳಿಸಲು ಆದೇಶಿಸಿದ್ದಾರೆ.

ವೆಂಬನಾಡ್‌ ಸರೋವರ ಪ್ರದೇಶದಲ್ಲಿರುವ ವೆಟ್ಟಿಲಾ ತುರುತು ಮತ್ತು ನೆಡಿಯಾತುರುತು ಎಂಬ ಎರಡು ಹಿನ್ನೀರಿನ ದ್ವೀಪಗಳಲ್ಲಿ ರೆಸಾರ್ಟ್‌ ನಿರ್ಮಾಣಕ್ಕೆ ಹೈಕೋರ್ಟ್‌ ಅನುಮತಿ ನಿರಾಕರಿಸಿತ್ತು. ಈ ಪೈಕಿ ಕಾಪಿಕೋ ಗ್ರೂಪ್‌ ನೆಡಿಯಾತುರುತು ದ್ವೀಪದಲ್ಲಿ ರೆಸಾರ್ಟ್‌ ನಿರ್ಮಿಸಿತ್ತು. ಇನ್ನೊಂದು ದ್ವೀಪದಲ್ಲಿ ಗ್ರೀನ್‌ ಲಾಗೂನ್‌ ರೆಸಾರ್ಟ್‌ ನಿರ್ಮಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Viral Video: ಮಾಜಿ ಸಿಜೆಐ ಬಿಆರ್‌ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್‌ ಕಿಶೋರ್‌ಗೆ ಕೋರ್ಟ್‌ನಲ್ಲೇ ಚಪ್ಪಲಿಯಿಂದ ಹಲ್ಲೆ!
ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದು ಕೋಕಾ ಕೋಲಾ ಕಂಪನಿ ಚಾರ್ಟೆಡ್ ಅಕೌಂಟೆಂಟ್ ಹಠಾತ್ ಸಾವು