
ಕೋಲ್ಕತಾ(ಡಿ.23): ದೇಶದ ಉದ್ದಗಲಕ್ಕೂ ಮತಾಂತರ, ಲವ್ ಜಿಹಾದ್ ಭಾರಿ ಸದ್ದು ಮಾಡುತ್ತಿದೆ. ಈ ಕುರಿತು ಹಲವು ಪ್ರಕರಣಗಳು ದಾಖಲಾಗಿದೆ. ಇದೀಗ ಕೋಲ್ಕತಾ ಹೈಕೋರ್ಟ್ ಮದುವೆ ಹಾಗೂ ಮತಾಂತರ ಕುರಿತು ಮಹತ್ವದ ತೀರ್ಪು ಪ್ರಕಟಿಸಿದೆ. ವಯಸ್ಕ ಹೆಣ್ಣು ತನ್ನ ಇಚ್ಚೆಯಂತೆ ಮದುವೆ ಹಾಗೂ ಬಳಿಕ ಮತಾಂತರವಾದರೆ ಅದರ ಮಧ್ಯೆ ಕೋರ್ಟ್ ಪ್ರವೇಶಿಸುವುದಿಲ್ಲ ಎಂದು ಕೋಲ್ಕತಾ ಹೈಕೋರ್ಟ್ ಹೇಳಿದೆ.
ಪೋಷಕರ ಒಪ್ಪಿಗೆ ಮೇರೆಗೆ ನಡೆಯುತ್ತಿದ್ದ ಹಿಂದೂ-ಮುಸ್ಲಿಂ ಮದುವೆ ನಿಲ್ಲಿಸಿದ ಪೊಲೀಸ್!.
ಕೋಲ್ಕತಾದಲ್ಲಿ 19 ವರ್ಷದ ಯುವತಿ ಅನ್ಯ ಧರ್ಮದ ಪುರಷನನ್ನು ಮದುವೆಯಾಗಿದ್ದಾಳೆ. ಪೋಷಕರ ವಿರೋಧದ ನಡುವೆ ಮನೆ ಬಿಟ್ಟು ಹೋದ ಯುವತಿ ಮದುವೆಯಾಗಿದ್ದಾಳೆ. ಬಳಿಕ ಅನ್ಯ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ. ಹೀಗಾಗಿ ಯುವತಿ ತಂದೆ ಕೋರ್ಟ್ ಮೆಟ್ಟಿಲೇರಿದ್ದರು. ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ತನ್ನ ಮಗಳ ಮೇಲೆ ಒತ್ತಡ ಹಾಕಿ ಹೇಳಿಕೆ ನೀಡಲಾಗಿದೆ ಎಂದು ದೂರಿದ್ದರು.
ತಂದೆಯ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಇದೀಗ ತೀರ್ಪು ನೀಡಿದೆ. ವಯಸ್ಕ ಹೆಣ್ಣು ತನ್ನಿಷ್ಟದಂತ ಮದುವೆಯಾಗುವುದು, ಮದುವೆಯಾದ ಬಳಿಕ ಅನ್ಯ ಧರ್ಮಕ್ಕೆ ಮತಾಂತರವಾಗುವುದು ಹಾಗೂ ಆಕೆ ಇಚ್ಚಿಸದ ಹಾಗೆ ಜೀವನ ನಡೆಸುವುದು ಆಕೆಯ ಸ್ವಾತಂತ್ರ್ಯವಾಗಿದೆ. ಇದರ ಮಧ್ಯೆ ಕೋರ್ಟ್ ಪ್ರವೇಶಿಸುವುದಿಲ್ಲ ಎಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ