ಬಹುದೂರ ಜೀಪ್ ಚಾಲನೆ ಮಾಡಿ ಪ್ರತಿಭಟನೆ ಸೇರಿಕೊಂಡ 62ರ ಮಹಿಳೆ.. ಪೋಟೋ ವೈರಲ್!

By Suvarna NewsFirst Published Dec 23, 2020, 5:15 PM IST
Highlights

ರಾಷ್ಟ್ರೀಯ ರೈತ ದಿನ/ ರೈತರ ಪ್ರತಿಭಟನೆ ಕಾವು ನಿಂತಿಲ್ಲ/ ರೈತ ಮಹಿಳೆ ಜೀಪ್ ಚಾಲನೆ ಮಾಡುತ್ತಿರುವ ಪೋಟೋ ವೈರಲ್/ ಸೆಲೆಬ್ರಿಟಿಗಳಿಂದಲೂ ರಿಟ್ವೀಟ್/ ಸೋಶಿಯಲ್ ಮೀಡಿಯಾದಲ್ಲಿಯೂ ರಿಯಾಕ್ಷನ್

ನವದೆಹಲಿ (ಡಿ. 23)  ಕೇಂದ್ರ ಸರ್ಕಾರದ ಕೃಷಿ ಕಾಯಿದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದುಕೊಂಡೆ ಇದೆ.  ಹರ್ಯಾಣ, ಪಂಜಾಬ್, ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ಕಾವು ಜೋರಾಗಿಯೇ ಇದೆ. 

ರೈತ ದಿನಾಚರಣೆ ದಿನ ಒಂದು ಹೊತ್ತಿನ ಊಟವನ್ನು ತ್ಯಜಿಸಿ ಎಂದು  ಕಿಸಾನ್ ಏಕ್ತಾ ಮೋರ್ಚಾ ಕರೆ ಕೊಟ್ಟಿದೆ. ಮಾಜಿ ಪ್ರಧಾನಿ ಚರಣ್ ಸಿಂಗ್ ಅವರ ಜನ್ಮದಿನವನ್ನು ರಾಷ್ಟ್ರೀಯ ರೈತ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಕಿಸಾನ್ ಏಕ್ತಾ ಮೋರ್ಚಾ  ತನ್ನ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಪೋಟೋವೊಂದು ಇದೀಗ ವೈರಲ್ ಆಗಿದೆ.

ಐಐಟಿಯಿಂದ ಹೊಲದವರೆಗೆ... ಮೂರು ಕಾನೂನುಗಳ ಬಗ್ಗೆ ವಿವರ ಕೊಟ್ಟ ಸೂರ್ಯ

ರೈತರ ಪ್ರತಿಭಟನೆಗೆ ಸೇರಿಕೊಳ್ಳಲು ರೈತ ಮಹಿಳೆ ಪಟಿಯಾಲದಿಂದ ಸಿಂಧ್ ಗಡಿಯವರೆ ಐವರನ್ನು ಕೂರಿಸಿಕೊಂಡು ಜೀಪ್ ಚಾಲನೆ ಮಾಡಿಕೊಂಡು ಹೋಗಿದ್ದಾರೆ. ರೈತ ಮಹಿಳೆ 62  ವರ್ಷದ ಮಂಜೀತ್ ಕೌರ್ ಜೀಪ್ ಚಾಲನೆ ಮಾಡಿಕೊಂಡು ಬಂದಿದ್ದಾರೆ.  ಈ ಪೋಟೋ ವೈರಲ್ ಆಗಿದ್ದು ನಟಿ ತಪ್ಸಿ ಪನ್ನು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಶೇರ್ ಮಾಡಿಕೊಂಡಿದ್ದಾರೆ.

 

62 Year old Manjeet Kaur, drove from Patiala to to join protest. pic.twitter.com/jORrkE3O5Y

— Kisan Ekta Morcha (@KisanEktaMarch)
click me!