Latest Videos

ಮಗಳು ಬಸ್ಸಿಂದ ಇಳಿವಾಗ ಲೈಂಗಿಕ ದೌರ್ಜನ್ಯ ಎಸಗಿದವಗೆ ಮೂಗಲ್ಲಿ ರಕ್ತ ಬರುವಂತೆ ಪಂಚ್ ಮಾಡಿದ ತಾಯಿ

By Reshma RaoFirst Published Jun 23, 2024, 5:11 PM IST
Highlights

ಕೊಚ್ಚಿಯಲ್ಲಿ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 59 ವರ್ಷದ ವ್ಯಕ್ತಿಗೆ ತಾಯಿ ಸರಿಯಾಗಿ ಪಂಚ್ ಮಾಡಿದ್ದು, ಆತನ ಮೂಗಿನಿಂದ ರಕ್ತ ಒಸರಿದೆ. 

ಕೊಚ್ಚಿಯಲ್ಲಿ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 59 ವರ್ಷದ ವ್ಯಕ್ತಿಗೆ ಬಾಲಕಿಯ ತಾಯಿ ಸರಿಯಾಗಿ ಪಂಚ್ ಮಾಡಿದ್ದು, ಆತನ ಮೂಗಿನಿಂದ ರಕ್ತ ಒಸರಿದೆ. ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಬಾಲಕಿ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ನೆಲ್ಲಿಮುಕಲ್ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದೆ.

ದೂರಿನ ಪ್ರಕಾರ, ಬಾಲಕಿ ಬಸ್ ಇಳಿಯುವಾಗ ವ್ಯಕ್ತಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಸ್ಸಿನಿಂದ ಕೆಳಗಿಳಿದ ಬಳಿಕ ನಡೆದ ಘಟನೆಯ ಬಗ್ಗೆ ಆಕೆ ತಾಯಿಗೆ ತಿಳಿಸಿದ್ದಾಳೆ. ಆಕೆಯ ತಾಯಿ ಕೂಡಲೇ ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಿಚಾರಣೆ ನಡೆಸಿದ್ದಾರೆ.

ಹೀಗೂ ಉಂಟಾ? ಈ ದೇಶಗಳು ನೀವು ಅಲ್ಲಿ ಹೋಗಿ ನೆಲೆಸೋಕೆ ಹಣ ಕೊಡ್ತಾವೆ..!
 

ಆದರೆ, ಮಹಿಳೆ ಎದುರಾದಾಗ ಪಿಳ್ಳೈ ಅವರ ಮೇಲೂ ಹಲ್ಲೆಗೆ ಯತ್ನಿಸಿದ್ದಾನೆ. ಆಕೆ ದಾಳಿಯನ್ನು ತಡೆದುಕೊಳ್ಳುವಲ್ಲಿ ಯಶಸ್ವಿಯಾರು ಮತ್ತು ಪಿಳ್ಳೈ ಅವರ ಮೂಗಿಗೆ ಹೊಡೆದರು. ಏತನ್ಮಧ್ಯೆ, ಏನಾತ್ ಪೊಲೀಸರು ಪಿಳ್ಳೈ ಅವರನ್ನು ವಶಕ್ಕೆ ತೆಗೆದುಕೊಂಡರು ಮತ್ತು ಅವರ ವಿರುದ್ಧ ಪೋಕ್ಸೊ ಪ್ರಕರಣವನ್ನು ದಾಖಲಿಸಲಾಗಿದೆ.

ಇದೀಗ ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಬಾಲಕಿಯ ತಾಯಿಯ ಮೇಲೂ ಪಿಳ್ಳೈ ಮೇಲೆ ಹಲ್ಲೆ ಪ್ರಕರಣ ದಾಖಲಾಗಿದೆ.

click me!