
ಸಮರಖಂಡ್(ಸೆ.16): ಶಾಂಘೈ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ವಿಶ್ವದ ಪ್ರಬಲ ನಾಯಕರ ಮಾತುಕತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ನೆಮ್ಮದಿ ತರಿಸಿದೆ. ಇದಕ್ಕೆ ಕಾರಣ ಪುಟಿನ್ ಹೇಳಿದ ಮಾತುಗಳು. ಉಕ್ರೇನ್‌ನಲ್ಲಿ ಸಂಘರ್ಷದ ಬಗ್ಗೆ ನೀವು ತೋರಿಸುತ್ತಿರುವ ಕಾಳಜಿ ಬಗ್ಗೆ ನಮಗೆ ಅರಿವಿದೆ. ಭಾರತದ ಸ್ಥಾನದ ಬಗ್ಗೆಯೂ ತಿಳಿದಿದೆ. ಆದಷ್ಟು ಬೇಗ ಎಲ್ಲವೂ ಮುಗಿಯಲಿ ಎಂದು ನಾವು ಬಯಸುತ್ತೇವೆ. ಉಕ್ರೇನ್‌ನಲ್ಲಿ ಏನು ನಡೆಯುತ್ತಿದೆ ಅನ್ನೋದನ್ನು ನಾವು ನಿಮಗೆ ತಿಳಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿಗೆ ಪುಟಿನ್ ಹೇಳಿದ್ದಾರೆ. ಮಾತುಕತೆಯಲ್ಲಿ ಭಾರತದ ನಿಲುವು, ಯುದ್ಧ ಕೈಬಿಟ್ಟು ಶಾಂತಿ ಮಾತುಕತೆಗೆ ನೀಡಿರುವ ಆದ್ಯತೆಯನ್ನು ಪುಟಿನ್ ಸ್ಮರಿಸಿದ್ದಾರೆ. ಯುದ್ಧ ಅಂತ್ಯದ ಕುರಿತು ಪುಟಿನ್ ಆಡಿರುವ ಮಾತುಗಳು ಇದೀಗ ಹಲವು ದೇಶಗಳಿಗೆ ನೆಮ್ಮದಿ ತಂದಿದೆ.
ರಷ್ಯಾ ಉಕ್ರೇನ್(Russia Ukraine) ಯುದ್ಧದ ವೇಳೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ಶಾಂತಿ ಮಾತುಕತಗೆ ಆಗ್ರಹಿಸಿದ್ದರು. ಈ ವೇಳೆ ತಟಸ್ಥ ನಿಲುವು ತಾಳಿದ ಭಾರತ ಯುದ್ಧಕ್ಕಿಂತ ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಲು ಸೂಚಿಸಿತ್ತು. ಇಷ್ಟೇ ಅಲ್ಲ ರಷ್ಯಾ ದಾಳಿ ನಡುವೆ ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯಕನ್ನು ಸುರಕ್ಷಿತವಾಗಿ ಕರೆತರುವಲ್ಲಿ ಮೋದಿ ಯಶಸ್ವಿಯಾಗಿದ್ದರು. ಈ ವೇಳೆ ಮೋದಿಗೆ ರಷ್ಯಾ ಅಧ್ಯಕ್ಷ ಪುಟಿನ್(Vladimir Putin) ಎಲ್ಲಾ ಸಹಕಾರ ನೀಡಿದ್ದರು. ಬಳಿಕ ರಷ್ಯಾ ಜೊತೆ ತೈಲ ಒಪ್ಪಂದ ಸೇರಿದಂತೆ ಹಲವು ಒಪ್ಪಂದ ಮಾಡಿಕೊಂಡ ಭಾರತ ವಿಶ್ವದ ಪ್ರಬಲ ರಾಷ್ಟ್ರಗಳ ಆಕ್ರೋಶಕ್ಕೂ ಗುರಿಯಾಗಿತ್ತು. ಆದೆ ಕಠಿಣ ನಿಲುವಿನಿಂದ ಯಾವ ಆಕ್ರೋಶಕ್ಕೂ ಮಣಿಯದೆ ಒಪ್ಪಂದ ಮಾಡಿಕೊಂಡಿತ್ತು.
ಶಾಂಘೈ ಸಹಕಾರ ಶೃಂಗಕ್ಕಾಗಿ ಉಜ್ಬೇಕಿಸ್ತಾನ ತೆರಳಿದ ಮೋದಿ, ಕ್ಸಿ ಜತೆ ಮಾತುಕತೆ ಇಲ್ಲ
‘ಶಾಂಘೈ ಸಹಕಾರ ಶೃಂಗದಲ್ಲಿ ಪ್ರಾದೇಶಿಕ, ಅಂತಾರಾಷ್ಟ್ರೀಯ ವಿಚಾರಗಳು, ಶಾಂಘೈ ಸಹಕಾರ ಸಂಘದ ವಿಸ್ತರಣೆ, ಪರಸ್ಪರ ಪ್ರಯೋಜನಕಾರಿ ಸಹಭಾಗಿತ್ವವನ್ನು ಇನ್ನಷ್ಟುಬಲಪಡಿಸುವ ಕುರಿತು ಶಾಂಘೈ ಶೃಂಗಸಭೆಯಲ್ಲಿ ಮೋದಿ ಮಾತನಾಡಿದ್ದರು. ಇದಕ್ಕಾಗಿ ಮೋದಿ ಎರಡು ದಿನದ ಉಜ್ಬೇಕಿಸ್ತಾನ ಪ್ರವಾಸ ಕೈಗೊಂಡಿದ್ದಾರೆ. ಪುಟಿನ್ ಸೇರಿದಂತೆ ಶಾಂಘೈ ಶೃಂಗಸಭೆ(sco summit 2022) ಸದಸ್ಯ ರಾಷ್ಟ್ರಗಳ ಪ್ರಮುಖ ನಾಯಕರ ಜೊತೆ ಮೋದಿ ಚರ್ಚೆ ನಡೆಸಿದ್ದಾರೆ. ವಿವಿಧ ದೇಶದ ನಾಯಕರೊಂದಿಗೆ ವಲಯದ ಭದ್ರತೆ, ಭಯೋತ್ಪಾದನಾ ನಿಗ್ರಹ, ಸಹಕಾರ, ವ್ಯಾಪಾರ ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದ್ದಾರೆ.
ಶಾಂಘೈ ಶೃಂಗದ ವೇಳೆ ಪುಟಿನ್-ಜಿನ್‌ಪಿಂಗ್ ಮುಖಾಮುಖಿ ಮಾತುಕತೆ
ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ ಬಳಿದ ಮೊದಲ ಬಾರಿಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮುಖಾಮುಖಿ ಮಾತುಕತೆ ನಡೆಸಿದ್ದಾರೆ. ಉಜ್ಬೇಕಿಸ್ತಾನದಲ್ಲಿ ನಡೆಯುತ್ತಿರುವ ಶಾಂಘೈ ಶೃಂಗಸಭೆಯಲ್ಲಿ ಭಾಗಿಯಾಗಿರುವ ನಾಯಕರು ಪರಸ್ಪರ ಹಿತಾಸಕಸ್ತಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಮ್ಮ ಪ್ರಮುಖ ಹಿತಾಸಕ್ತಿಗಳಿಗೆ ಸಂಬಂಧಿಸಿದ ವಿಷಯದಲ್ಲಿ ರಷ್ಯಾಗೆ ಸದಾ ಬೆಂಬಲ ನೀಡುವುದಾಗಿ ಜಿನ್‌ಪಿಂಗ್ ಪುಟಿನ್ ಜೊತೆ ನಡೆಸಿದ ಸಭೆಯ ವೇಳೆ ಹೇಳಿದರು ಎಂದು ಚೀನಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಉಕ್ರೇನ್ ಮೇಲಿನ ದಾಳಿಯ ವೇಳೆಯೂ ಚೀನಾ ರಷ್ಯಾಗೆ ಬೆಂಬಲ ವ್ಯಕ್ತಪಡಿಸಿತ್ತು.
ದಸರಾಗೆ ಪ್ರಧಾನಿ ಬರುವ ಬಗ್ಗೆ ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ: ಪ್ರತಾಪ್ ಸಿಂಹ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ