ಪುದುಚೇರಿ ರಾಜ್ಯಪಾಲ ಹುದ್ದೆಯಿಂದ ಕಿರಣ್ ಬೇಡಿ ವಜಾ!

By Suvarna NewsFirst Published Feb 16, 2021, 10:20 PM IST
Highlights

ಪುದುಚೇರಿ ಕಾಂಗ್ರೆಸ್ ಸರ್ಕಾರಕ್ಕೆ ಶಾಕ್ ಮೇಲೆ ಶಾಕ್ ನೀಡುತ್ತಿದ್ದ ರಾಜ್ಯಪಾಲೆ ಕಿರಣ್ ಬೇಡಿಗೆ ರಾಷ್ಟ್ರಪತಿ ಭವನ ಶಾಕ್ ನೀಡಿದೆ. 
 

ಪುದುಚೇರಿ(ಫೆ.16):  ರಾಜ್ಯ ಸರ್ಕಾರ ಹಾಗೂ  ಗರ್ವನರ್ ಜಟಾಪಟಿಗಳ ಪೈಕಿ ಪುದುಚೇರಿ ರಾಜ್ಯಪಾಲ ಕಿರಣ್ ಬೇಡಿ ಮುಂಚೂಣಿಯಲ್ಲಿದ್ದಾರೆ. ಒಂದಲ್ಲ ಒಂದು ಕಾರಣಗಳಿಂದು ಪುದುಚೇರಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಿದ್ದ ಲೆಫ್ಟಿನೆಂಟ್ ಗರ್ವನರ್ ಕಿರಣ್ ಬೇಡಿಯನ್ನು ವಜಾಗೊಳಿಸಲಾಗಿದೆ  

ಕಿರಣ್‌ ಬೇಡಿ ಗೋಬ್ಯಾಕ್: ಗವರ್ನರ್‌ ವಿರುದ್ಧವೇ ಮುಖ್ಯಮಂತ್ರಿ ಧರಣಿ!.

ರಾಷ್ಟ್ರಪತಿ ಭವನ ಅಧೀಕೃತ ಆದೇಶ ಹೊರಡಿಸಿದೆ. ಪುದುಚೇರಿ ರಾಜ್ಯಪಾಲ ಹುದ್ದೆಯಿಂದ ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿಯನ್ನು ವಜಾ ಮಾಡಲಾಗಿದೆ. ಹೊಸ ರಾಜ್ಯಪಾಲ ನೇಮಕವಾಗುವ ವರೆಗೆ ಆಂಧ್ರಪ್ರದೇಶದ ರಾಜ್ಯಪಾಲರಾದ ತಮಿಳುಸಾಯಿ ಸೌಂದರರಾಜನ್ ಅವರಿಗೆ ಹೆಚ್ಚುವರಿ ಹೊಣೆ ನೀಡಲಾಗಿದೆ

ಪುದುಚೇರಿ ಸಿಎಂ, ಗೌರ್ನರ್‌ ನಡುವೆ ಹೆಲ್ಮೆಟ್‌ ಜಟಾಪಟಿ

ಪುದುಚೇರಿ ವಿಧಾನಸಭಾ ಚುನಾವಣೆಗೆ ಕೆಲ ವಾರಗಳು ಬಾಕಿ ಇರುವಾಗಲೇ ರಾಜಕೀಯ ಜೋರಾಗಿದೆ. ಪುದುಚೇರಿ ಕಾಂಗ್ರೆಸ್ ಸರ್ಕಾರ ಪತನದತ್ತ ಸಾಗಿದೆ. ಇತ್ತ ಕೇಂದ್ರ ಸರ್ಕಾರ ಕಿರಣ್ ಬೇಡಿಯನ್ನು ರಾಜ್ಯಪಾಲ ಹುದ್ದೆಯಿಂದ ವಜಾ ಮಾಡಿದೆ. ಕಾಂಗ್ರೆಸ್ ಸರ್ಕಾರವನ್ನು ಇನ್ನಿಲ್ಲದಂತೆ ಕಾಡಿದ್ದ ಕಿರಣ್ ಬೇಡಿ ವಿರುದ್ಧ ಹಲವು ಭಾರಿ ಹೋರಾಟ ಮಾಡಿತ್ತು. ರಾಜ್ಯಪಾಲರ ಬದಲಾಯಿಸುವಂತೆ ಆಗ್ರಹಿಸಿತ್ತು.

click me!