ಭಾರತದ ಕೊರೋನಾ ಸಂಕಷ್ಟಕ್ಕೆ 18 ಕೋಟಿ ರೂಪಾಯಿ ನೆರವು ನೀಡಿದ ಕಿಂಬರ್ಲಿ ಕ್ಲಾರ್ಕ್!

Published : May 20, 2021, 07:29 PM IST
ಭಾರತದ ಕೊರೋನಾ ಸಂಕಷ್ಟಕ್ಕೆ 18 ಕೋಟಿ ರೂಪಾಯಿ ನೆರವು ನೀಡಿದ ಕಿಂಬರ್ಲಿ ಕ್ಲಾರ್ಕ್!

ಸಾರಾಂಶ

ಕೊರೋನಾ ವಿರುದ್ಧದ ಹೋರಾಟಕ್ಕೆ ನೆರವು 18 ಕೋಟಿ ರೂಪಾಯಿ ನೆರವು ನೀಡಿದ ಕಿಂಬರ್ಲಿ ಕ್ಲಾರ್ಕ್ ವೈದ್ಯಕೀಯ ಸಲಕರಣೆ ಖರೀದಿ ಸೇರಿದಂತೆ ಕೊರೋನಾ ಹೋರಾಟಕ್ಕೆ ನೆರವು

ನವದೆಹಲಿ(ಮೇ.20):  ಕೊರೋನಾ ವೈರಸ್ ವಿರುದ್ಧಧ ಭಾರತದ ಹೋರಾಟಕ್ಕೆ ಹಲವು ಕಂಪನಿಗಳು, ಉದ್ಯಮಗಳು ನೆರವು ನೀಡಿದೆ. ಇದೀಗ 2ನೇ ಅಲೆ ಎದುರಿಸಲು ಭಾರತಕ್ಕೆ 18 ಕೋಟಿ ರೂಪಾಯಿ ನೆರವನ್ನು ಕಿಂಬರ್ಲಿ ಕ್ಲಾರ್ಕ್ ಸಂಸ್ಥೆ ನೀಡಿದೆ. ಈ ತುರ್ತು ಪರಿಹಾರ ನಿಧಿಯನ್ನು ತನ್ನ ಪಾಲುದಾರ ಯೂನಿಸೆಫ್ ಮೂಲಕ ನೀಡಲಾಗುತ್ತಿದೆ.  ಆರೋಗ್ಯಸೇವೆಯ ಅಗತ್ಯಗಳಾದ ಮುಖ್ಯವಾಗಿ ಆಕ್ಸಿಜನ್ ಕಾನ್ಸೆಂಟ್ರೇಟರ್ಸ್, ಆಕ್ಸಿಜನ್ ಘಟಕಗಳ ಸ್ಥಾಪನೆ ಮತ್ತಿತರೆ ಅಗತ್ಯಗಳಿಗೆ ತಕ್ಷಣವೇ ಬಳಸಲಾಗುತ್ತದೆ. 

ಮಾಜಿ ಕ್ರಿಕೆಟರ್‌ ತಾಯಿ ಚಿಕಿತ್ಸೆಗೆ ವಿರಾಟ್ ಕೊಹ್ಲಿ 6.77 ಲಕ್ಷ ರೂ ನೆರವು

ಕಿಂಬರ್ಲಿ-ಕ್ಲಾರ್ಕ್ ಜಾಗತಿಕ ದೇಣಿಗೆ ಅಭಿಯಾನ ಪ್ರಾರಂಭಿಸಿದ್ದು ವಿಶ್ವದಾದ್ಯಂತ ತನ್ನ ಎಲ್ಲ ಉದ್ಯೋಗಿಗಳು ಭಾರತದಲ್ಲಿ  ಕೊರೋನಾ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಹಾಗೂ ಈ ಸನ್ನಿವೇಶ ನಿಭಾಯಿಸಲು ಕೊಡುಗೆ ನೀಡಲು ಮನವಿ ಮಾಡಿದೆ. ದಿ ಕಿಂಬರ್ಲಿ-ಕ್ಲಾರ್ಕ್ ಫೌಂಡೇಷನ್ ಭಾರತದ ಕೋವಿಡ್ ಹೋರಾಟಕ್ಕೆ ಸಂಗ್ರಹಿಸಲಾದ ನಿಧಿಯನ್ನು ನೀಡಲಿದೆ. 

ಸಾಂಕ್ರಾಮಿಕದ ವಿರುದ್ಧ ಹೋರಾಡಲು ನಮ್ಮ ಪ್ರಯತ್ನಗಳು ದೀರ್ಘಕಾಲೀನ, ಚಲನಶೀಲ ಮತ್ತು ಸಕಾಲಿಕವಾಗಿವೆ. ಭಾರತದಲ್ಲಿ ಎರಡನೆಯ ಅಲೆಯು ಅಸಾಧಾರಣವಾಗಿದ್ದು, ಮಾರಣಾಂತಿಕವಾಗಿ ಪರಿಣಮಿಸಿದೆ. ನಮಗೆ ಗೆಲ್ಲುವ ಏಕೈಕ ದಾರಿಯೆಂದರೆ ನಮ್ಮ ಎಲ್ಲ ಪ್ರಯತ್ನಗಳನ್ನೂ ಒಗ್ಗೂಡಿಸುವುದು. ಎಷ್ಟು ಸಾಧ್ಯವೋ ಅಷ್ಟು ಜೀವಗಳನ್ನು ಕಾಪಾಡುವುದು ಎಲ್ಲಕ್ಕಿಂತ ಪ್ರಮುಖ ಆದ್ಯತೆಯಾಗಿದೆ ಎಂದು ಕಿಂಬರ್ಲಿ-ಕ್ಲಾರ್ಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮೈನಕ್ ಧರ್ ಹೇಳಿದರು.

ಭಾರತಕ್ಕೆ 8 ಲಕ್ಷ ಕೋಟಿ ರೂಪಾಯಿ ಸಹಾಯ ಮಾಡಿದ ಈ ಹುಡುಗ ನಿಮಗೆ ಗೊತ್ತೆ?.

ಈ ಸಾಂಕ್ರಾಮಿಕವು ಊಹಿಸದ ರೀತಿಯಲ್ಲಿ ನಮ್ಮ ಪ್ರತಿಯೊಬ್ಬರನ್ನೂ ಬಾಧಿಸುತ್ತಿದೆ. ನಮ್ಮಲ್ಲಿ ಯಾರೂ ಏಕಾಂಗಿಯಾಗಿ ಇದನ್ನು ಎದುರಿಸಲು ಸಾಧ್ಯವಿಲ್ಲ. ಭಾರತದ ಜನರಿಗೆ ಜೀವ ಉಳಿಸುವ ಅಂತಹ ನೆರವು ನೀಡಲು ಅಂತಹ ಹೆಚ್ಚು ಹೂಡಿಕೆಗಳು ಅಗತ್ಯವಾಗಿವೆ. ಕಿಂಬರ್ಲಿ-ಕ್ಲಾರ್ಕ್‍ಗೆ ಅತ್ಯಂತ ಅಗತ್ಯವಾಗಿರುವ ಕಡೆಯಲ್ಲಿ ಅತ್ಯಂತ ಪ್ರಮುಖ ಪೂರೈಕೆಗಳನ್ನು ಒದಗಿಸುವಲ್ಲಿ ಯೂನಿಸೆಫ್‍ನೊಂದಿಗೆ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ. ಇದು ಹೆಚ್ಚು ಖಾಸಗಿ ವಲಯದ ಸಂಸ್ಥೆಗಳಿಗೆ ಮುಂದೆ ಬರಲು ಹಾಗೂ ಅತ್ಯಂತ ಅಗತ್ಯವಿರುವ ಮಕ್ಕಳಿಗೆ ಅವರ ಕೊಡುಗೆ ನೀಡಲು ಉತ್ತೇಜಿಸುತ್ತದೆ ಎಂಬ ಭರವಸೆ ನನ್ನದು ಎಂದು ಭಾರತದ ಯೂನಿಸೆಫ್ ಪ್ರತಿನಿಧಿಯಾಗಿರುವ ಡಾ.ಯಾಸ್ಮಿನ್ ಅಲಿ ಹಕ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್
India Latest News Live: ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್