ಕೊರೋನಾ ನಡುವೆ ಬ್ಲಾಕ್ ಫಂಗಸ್ ಕಾಟ; ರಾಜ್ಯಗಳಿಗೆ ಮಹತ್ವದ ಸೂಚನೆ ನೀಡಿದ ಕೇಂದ್ರ!

By Suvarna News  |  First Published May 20, 2021, 5:53 PM IST
  • ಹಲವು ರಾಜ್ಯಗಳಲ್ಲಿ ಬ್ಲಾಕ್ ಫಂಗಸ್ ಕಾಯಿಲೆ ಹೆಚ್ಚಾಗಿ ಪತ್ತೆ 
  • ಫಂಗಸ್ ಕಾಟ ಹೆಚ್ಚಾಗುತ್ತಿದ್ದಂತೆ ಕೇಂದ್ರದಿಂದ ಮಹತ್ವದ ಸೂಚನೆ
  • ರಾಜ್ಯಗಳಿಗೆ ಸೂಚನೆ ಪಾಲಿಸಲು ಕೇಂದ್ರ ಸೂಚನೆ

ನವದೆಹಲಿ(ಮೇ.20): ಕೊರೋನಾ ವೈರಸ್ 2ನೇ ಅಲೆ ಎದುರಿಸುತ್ತಿರುವ ಭಾರತ ಈಗಾಗಲೇ ಸಾಕಷ್ಟು ಸಾವು ನೋವು ಅನುಭವಿಸಿದೆ. ಇದರ ನಡುವೆ ಬ್ಲಾಂಕ್ ಫಂಗಸ್ ಕಾಯಿಲೆ ಕಾಣಿಸಿಕೊಳ್ಳುತ್ತಿರುವುದು ಮತ್ತಷ್ಟು ಆತಂಕ ತಂದಿದೆ. ಹಲವು ರಾಜ್ಯಗಳಲ್ಲಿ ಬ್ಲಾಕ್ ಫಂಗಸ್ ಕಾಣಿಸಿಕೊಂಡಿದೆ.  ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಬ್ಲಾಕ್ ಫಂಗಸ್ ಸಾಂಕ್ರಾಮಿಕ ರೋಗ ಎಂದು ಪರಿಗಣಿಸಲು ರಾಜ್ಯಗಳಿಗೆ ಸೂಚನೆ ನೀಡಿದೆ.

ಮಾರಣಾಂತಿಕ ಬ್ಲಾಕ್ ಫಂಗಸ್ - ಸ್ಟಿರಾಯ್ಡ್ : ಮತ್ತೊಂದು ಮಹಾಮಾರಿ ಬಗ್ಗೆ ಎಚ್ಚರ..!

Tap to resize

Latest Videos

1987ರ ಸಾಂಕ್ರಾಮಿಕ ರೋಗ ಕಾಯ್ದೆ ಅಡಿಯಲ್ಲಿ ಮ್ಯೂಕೋರ್ಮೈಕೋಸಿಸ್(ಬ್ಲಾಕ್ ಫಂಗಸ್) ಅಧಿಸೂಚಿತ ರೋಗವನ್ನಾಗಿ ಮಾಡಲು ಕೇಂದ್ರ ಸರ್ಕಾರ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಸೂಚನೆ ನೀಡಿದ್ದಾರೆ.

ಮಾರಣಾಂತಿಕ ಬ್ಲ್ಯಾಕ್‌ ಫಂಗಸ್‌ಗೆ 3 ಲಕ್ಷ ರು.ನ ಉಚಿತ ಚಿಕಿತ್ಸೆ?

ಬ್ಲಾಕ್ ಫಂಗಸ್ ಅಥವಾ ಕಪ್ಪು ಶೀಲಿಂಧ್ರ ಸೋಂಕಿನ ಚಿಕಿತ್ಸೆಗೆ ಕಣ್ಣಿನ ಶಸ್ತ್ರಚಿಕಿತ್ಸಕರು, ENT ತಜ್ಞರು, ಜನರಲ್ ಸರ್ಜನ್, ನ್ಯೂರೋ ಸರ್ಜನ್ ಮತ್ತು ಡೆಂಟಲ್ ಮ್ಯಾಕ್ಸಿಲೊಫೇಶಿಯಲ್ ಸರ್ಜನ್  ಒಳಗೊಂಡಿರುವ ತಜ್ಞ ವೈದ್ಯರ ತಂಡದ ಅವಶ್ಯಕತೆ ಇದೆ. ಬ್ಲಾಕ್ ಫಂಗಸ್ ಕಾಣಿಸಿಕೊಂಡ ಕೋವಿಡ್ ಸೋಂಕಿತರಲ್ಲಿ ಸುದೀರ್ಘ ಕಾಲದ ಕಾಯಿಲೆಗಳು ಹಾಗೂ ಸಾವಿಗೂ ಕಾರಣವಾಗಲಿದೆ. ಹೀಗಾಗಿ ರಾಜ್ಯಗಳು ಬ್ಲಾಕ್ ಫಂಗಸ್ ಕಡೆಗಣಿಸಬಾರದು ಎಂದು ಪತ್ರದಲ್ಲಿ ಹೇಳಲಾಗಿದೆ.

 ಅತೀ ಹೆಚ್ಚು ಪ್ರಕರಣ ಪತ್ತೆಯಾದ ರಾಜಸ್ಥಾನ ಹಾಗೂ ತೆಲಂಗಾಣ ಸರ್ಕಾರ ಬ್ಲಾಕ್ ಫಂಗಸ್ ಕಾಯಿಲೆಯನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿದೆ. ಮಹಾರಾಷ್ಟ್ರ, ಗುಜರಾತ್, ಪಶ್ಚಿಮ ಬಂಗಾಳದಲ್ಲೂ ಬ್ಲಾಕ್ ಫಂಗಸ್ ತೀವ್ರವಾಗಿ ಹರಡುತ್ತಿದೆ.  ಇದೀಗ ಕೇಂದ್ರ ಅಧಿಸೂಚನೆ ಹೊರಡಿಸಿರುವ ಕಾರಣ ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳು ಬ್ಲಾಕ್ ಫಂಗಸ್ ಕಾಯಿಲೆಯನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಲಿದೆ.

click me!