ಚೌತಿಗೆ ಹಣ ಕಲೆಕ್ಷನ್‌: ಗಣೇಶನ ಐದು ಹೆಸರು ಹೇಳಲು ತಡಕಾಡಿದ ಮಕ್ಕಳು: ನಮ್ಮ ಮಕ್ಕಳಿಗೆ ನಾವೇನ್ ಕಲಿಸ್ತಿದ್ದೇವೆ?

Published : Aug 17, 2025, 09:11 AM IST
Lord Ganesha Ganesha Chaturthi

ಸಾರಾಂಶ

ಗಣೇಶ ಹಬ್ಬಕ್ಕೆ ಚಂದಾ ಕಲೆಕ್ಷನ್‌ಗೆ ಹೊರಟ ಮಕ್ಕಳಿಗೆ ಯುವಕರೊಬ್ಬರು ಗಣೇಶನ ಐದು ಹೆಸರು ಹೇಳಲು ಟಾಸ್ಕ್ ನೀಡಿದ್ದಾರೆ. ಹೆಸರು ಹೇಳಲು ಮಕ್ಕಳು ತಡಕಾಡಿದ್ದು, ಕೊನೆಗೂ ಹೇಳಿ ಚಂದಾ ಪಡೆದ ವಿಡಿಯೋ ವೈರಲ್ ಆಗಿದೆ. ಈ ವೀಡಿಯೋ ನೋಡಿದ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ದೇಶದ ಪ್ರತಿ ಬೀದಿ ಪ್ರತಿ ಗಲ್ಲಿಗಳಲ್ಲಿ ಪುಟ್ಟ ಮಕ್ಕಳಿಂದ ಹಿರಿಯರವರೆಗೆ ಆಚರಿಸುವ ಗಣೇಶ ಹಬ್ಬ ಇನ್ನೇನು ಬಂದೇ ಬಿಡ್ತು. ದೇಶದೆಲ್ಲೆಡೆ ಗಣೇಶ ಹಬ್ಬವನ್ನು ಹಲವು ದಿನಗಳವರೆಗೆ ಬಹಳ ವಿಜೃಂಭಣೆಯಿಂದ ನಡೆಸುತ್ತಾರೆ. ಸಣ್ಣ ಮಕ್ಕಳಿಂದ ದೊಡ್ಡವರವರೆಗೂ ಈ ವಿಘ್ನ ನಿವಾರಕನ ಹಬ್ಬಕ್ಕೆ ಚಂದ (ಹಣ) ಕಲೆಕ್ಷನ್‌ ಮಾಡುವುದಕ್ಕೆ ಶುರು ಮಾಡುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಪುಟ್ಟ ಮಕ್ಕಳ ಗುಂಪೊಂದು ಡಬ್ಬಿ ಹಿಡಿದು ಗಣೇಶ ಹಬ್ಬದ ಆಚರಣೆಗಾಗಿ ಬೀದಿಗಳಲ್ಲಿ ಹಣ ಸಂಗ್ರಹ ಮಾಡುವುದಕ್ಕೆ ಹೊರಟಿದ್ದಾರೆ. ಆದರೆ ಹೀಗೆ ಹಣ ಕಲೆಕ್ಷನ್ ಮಾಡುವುದಕ್ಕೆ ಬಂದ ಮಕ್ಕಳಿಗೆ ಒಬ್ಬರು ಒಂದು ಟಾಸ್ಕ್ ಕೊಟ್ಟಿದ್ದು ಆ ವಿಡಿಯೋ ಈಗ ಭಾರಿ ವೈರಲ್ ಆಗಿದೆ.

ಗಣೇಶನ 5 ಹೆಸರು ಹೇಳುವುದಕ್ಕೆ ತಡಕಾಡಿದ ಮಕ್ಕಳು

ನಮ್ಮ ಬಹುತೇಕ ಹಿಂದೂ ಸಮಾಜದ ಮಕ್ಕಳಿಗೆ ತಮ್ಮ ಕೆಲ ಹಬ್ಬಗಳ ಆಚರಣೆಯ ಹಿನ್ನೆಲೆ ಕತೆಗಳ ಬಗ್ಗೆ ಸ್ವಲ್ಪವೂ ಗೊತ್ತಿಲ್ಲ, ಮಕ್ಕಳಿಗೆ ಹೇಳಿಕೊಡುವುದಕ್ಕೆ ಪೋಷಕರಿಗೂ ತಿಳಿದಿಲ್ಲ, ನಮ್ಮ ಹಿಂದೂ ಪುರಾಣಗಳ ಬಗ್ಗೆ ನಮ್ಮವರೇ ತೋರುವ ನಿರ್ಲಕ್ಷ್ಯ ಇದಕ್ಕೆ ಕಾರಣ. ನಮಗಿಂತಲೂ ಚೆಂದ ನಮ್ಮ ಸಂಸ್ಕಾರ ಆಚರಣೆಗಳ ಬಗ್ಗೆ ನಮ್ಮ ಸಮುದಾಯದೊಂದಿಗೆ ಬೇರೆತ ಬೇರೆ ಧರ್ಮದವರಿಗೆ ತಿಳಿದಿರುತ್ತದೆ. ಹೀಗಾಗಿಯೇ ನಮ್ಮ ಮಕ್ಕಳು ದೇವರ ಹತ್ತು ಹೆಸರು ಹೇಳಿ ಎಂದರೇ ಅತ್ತಿತ್ತ ತಡಕಾಡುತ್ತಾರೆ. ನಮ್ಮ ಮುಕ್ಕೋಟಿ ದೇವರನ್ನು ಹೊಂದಿರುವ ನಮ್ಮ ಪ್ರತಿ ದೇವರಿಗೂ ನೂರಾರು ಹೆಸರುಗಳಿವೆ. ಅದೇ ರೀತಿ ಇಲ್ಲೊಂದು ಕಡೆದ ಚಂದ ಕಲೆಕ್ಷನ್‌ಗಿಳಿದ ಮಕ್ಕಳ ಬಳಿ ಯುವಕರೊಬ್ಬರು ಗಣೇಶನ 5 ಹೆಸರು ಹೇಳ್ರಪ್ಪ ಐದು ಹೆಸರು ಹೇಳಿದರೆ ಚಂದ ಹಣ ನೀಡೋದಾಗಿ ಹೇಳಿದ್ದಾರೆ. ಈ ವೇಳೆ ಮಕ್ಕಳು ತಡಕಾಡುವ ರೀತಿ ನೋಡಿದರೆ ನಿಜಕ್ಕೂ ನಮ್ಮ ಮಕ್ಕಳಿಗೆ ನಾವು ನಮ್ಮ ಸಂಸ್ಕೃತಿ ಆಚರ ವಿಚಾರಗಳ ಬಗ್ಗೆ ಏನನ್ನೂ ಹೇಳಿಕೊಟ್ಟಿಲ್ಲ ಎಂಬುದು ತಿಳಿದು ಬರುತ್ತದೆ. ಕಡೆಗೂ ಮಕ್ಕಳು ಕಷ್ಟಪಟ್ಟು ಐದು ಹೆಸರು ಹೇಳುವಲ್ಲಿ ಯಶಸ್ವಿಯಾಗಿದ್ದಾರೆ.

ವೀಡಿಯೋದಲ್ಲಿ ಏನಿದೆ?

ಹುಡುಗನೋರ್ವ ಡಬ್ಬಿ ಹಿಡಿದುಕೊಂಡು ಗಣೇಶ ಹಬ್ಬಕ್ಕೆ ಹಣ ನೀಡುವಂತೆ ಕೇಳುತ್ತಾನೆ. ಇದಕ್ಕೆ 5 ಗಣಪನ ಹೆಸರು ಹೇಳಿದರೆ ಹಣ ನೀಡುವುದಾಗಿ ವ್ಯಕ್ತಿಯೊಬ್ಬರು ಹೇಳುತ್ತಾರೆ. ಆದರೆ ಮಕ್ಕಳಿಗೆ ಅವರು ಏನು ಕೇಳಿದ್ದಾರೆ ಎಂಬುದೇ ಸರಿಯಾಗಿ ಅರ್ಥವಾಗುವುದಿಲ್ಲ, ನಂತರ ಆ ವ್ಯಕ್ತಿ ಸ್ಪಷ್ಟವಾಗಿ ಗಣೇಶನ 5 ಹೆಸರು ಹೇಳುವಂತೆ ಮಕ್ಕಳನ್ನು ಕೇಳುತ್ತಾರೆ. ಈ ವೇಳೆ ಮಕ್ಕಳು ಗಣೇಶ, ವಿನಾಯಕ, ಗಜಮುಖ, ಏಕದಂತ ವಿಘ್ನೇಶ್ವರ ಹೀಗೆ ನಿಮಿಷಗಳ ಕಾಲ ತಡಕಾಡಿ ನಾಲ್ವರು ಮಕ್ಕಳು ಗಣೇಶನ ಹೆಸರನ್ನು ಹೇಳಿ ಆ ವ್ಯಕ್ತಿಯಿಂದ ಹಣ ವಸೂಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ವೀಡಿಯೋ ನೋಡಿದ ನೆಟ್ಟಿಗರು ಏನಂದರು?

ವೀಡಿಯೋ ನೋಡಿದ ಕೆಲವರು ಧರ್ಮದ ಬಗ್ಗೆ ತಿಳಿಸಿ ಕೊಟ್ಟಿದಕ್ಕೆ ತಮಗೆ ಧನ್ಯವಾದಗಳು ಎಂದಿದ್ದಾರೆ. Pubg, free fire ಆಡೋ ಈ ಕಾಲದಾಗ ಯಾರರ ಈ ತರ ಸಣ್ಣ ಹುಡುಗುರ ಬಂದ್ರ ಸಪೋರ್ಟ್ ಮಾಡ್ರಿ ಪಾ ಧರ್ಮೋ ರಕ್ಷತಿ ರಕ್ಷಿತಃ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮಕ್ಕ್ಳುಗೆ ಕೊನೆಗೂ ವಿನಾಯಕ ಕೃಪೆ ತೋರಿದ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ ಈ ವೀಡಿಯೋ ಮಾಡಿದವರು ಮಕ್ಕಳಿಗೆ ಕೇವಲ 20 ರೂಪಾಯಿ ಕೊಟ್ಟಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಷ್ಟು ವೀಡಿಯೋ ಮಾಡಿ ಇಷ್ಟೊಂದು ಟಾಸ್ಕ್ ನೀಡಿ ಬರೀ 20 ರೂಪಾಯಿ ಕೊಟ್ಟಿದ್ಯಲ್ಲಪ್ಪ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಆತ ನಾನು ಸಣ್ಣ ಕಂಟೆಂಟ್ ಕ್ರಿಯೇಟರ್, ಈ ವೀಡಿಯೋ ವೈರಲ್ ಆಗುತ್ತೆ ಅಂತ ಗೊತ್ತಿರಲಿಲ್ಲ, ಅವರನ್ನು ಮತ್ತೊಮ್ಮೆ ಹೋಗಿ ಭೇಟಿ ಮಾಡಿ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಇನ್ನು ಅನೇಕರು ಗಣೇಶನ ಹತ್ತು ಹಲವುರ ಹೆಸರುಗಳನ್ನು ಕಾಮೆಂಟ್‌ನಲ್ಲಿ ಹೇಳಿದ್ದಾರೆ. ಈ ವೀಡಿಯೋ ಬಗ್ಗೆ ನಿಮಗೇನನಿಸುತ್ತೆ ಕಾಮೆಂಟ್ ಮಾಡಿ.

ಇದನ್ನೂ ಓದಿ:ಅಮೆರಿಕಾದಲ್ಲಿ ಹಿಂದೂ ಪುರೋಹಿತನಾದ ಆಫ್ರಿಕನ್ ಪ್ರಜೆ: ಮಂತ್ರೋಚ್ಛಾರದ ವೀಡಿಯೋ ಭಾರಿ ವೈರಲ್
ಇದನ್ನೂ ಓದಿ: Rich Dad Poor Dadನಿಂದ ಪ್ರೇರಣೆ: ಅಪ್ಪನ ಬೆಂಬಲದಿಂದ ಉದ್ಯಮ ಆರಂಭಿಸಿದ 7 ವರ್ಷದ ಬಾಲಕಿ

ಮಕ್ಕಳು ಗಣೇಶ ಹಬ್ಬಕ್ಕೆ ಹಣ ಕಲೆಕ್ಷನ್ ಮಾಡ್ತಿರುವ ವೀಡಿಯೋ ಇಲ್ಲಿದೆ ನೋಡಿ
 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್