
ಅಜ್ಮೀರ್: ರಾಜಸ್ಥಾನದ ಅಜ್ಮೀರ್‌ನಲ್ಲಿ (Ajmer, Rajasthan) ಪತ್ನಿಯನ್ನು ಕೊ*ಲೆ ಮಾಡಿದ ಪ್ರಕರಣದಲ್ಲಿ ಬಿಜೆಪಿ ನಾಯಕ (BJP Leader) ಮತ್ತು ಅವರ ಪ್ರೇಯಸಿಯನ್ನು ಬಂಧಿಸಲಾಗಿದೆ. ಪತ್ನಿ ಸಂಜುಳನ್ನು ಕೊ*ಲೆ ಮಾಡಿದ ಆರೋಪದ ಮೇಲೆ ಬಿಜೆಪಿ ನಾಯಕ ರೋಹಿತ್ ಸೈನಿ (Rohit Saini) ಮತ್ತು ಪ್ರೇಯಸಿ ರಿತು ಸೈನಿಯನ್ನು ಬಂಧಿಸಲಾಗಿದೆ. ಆಗಸ್ಟ್ 10 ರಂದು ಈ ಕೊ*ಲೆ ನಡೆದಿದೆ. ಕೆಲವು ಕಳ್ಳರು ಮನೆಗೆ ಪ್ರವೇಶಿಸಿ, ಸಂಜುನನ್ನು ಕೊಂದು ಅಮೂಲ್ಯ ಆಭರಣಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮುಂದೆ ಪ್ರಾಥಮಿಕ ಹೇಳಿಕೆಯನ್ನು ದಾಖಲಿಸಿದ್ದನು. ಪೊಲೀಸರು ಆಳವಾಗಿ ಪ್ರಶ್ನೆ ಮಾಡಲು ಪ್ರಾರಂಭಿಸಿದಾಗ ರೋಹಿತ್ ಸೈನಿ ಪದೇ ಪದೇ ತನ್ನ ಹೇಳಿಕೆಯನ್ನು ಬದಲಾಯಿಸುತ್ತಿದ್ದನು. ಇದರಿಂದ ಅನುಮಾನಗೊಂಡು ತೀವ್ರ ವಿಚಾರಣೆಗೆ ಒಳಪಡಿಸಿದಾಗ ರೋಹಿತ್ ಸೈನಿ ನಿಜಾಂಶ ಬಾಯ್ಬಿಟ್ಟಿದ್ದಾನೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಪ್ರೇಯಸಿಯ ಒತ್ತಾಯದ ಮೇರೆಗೆ ರೋಹಿತ್ ಸೈನಿ ಪತ್ನಿಯನ್ನು ಕೊ*ಲೆ ಮಾಡಿದ್ದು ಬೆಳಕಿಗೆ ಬಂದಿದೆ. ಆಗಸ್ಟ್ 10 ರಂದು ಸಂಜು ಶವ ಮನೆಯಲ್ಲಿ ಅನುಮಾನಸ್ಪಾದವಾಗಿ ಪತ್ತೆಯಾಗಿತ್ತು. ಅಪರಿಚಿತ ಕಳ್ಳರ ಗುಂಪೊಂದು ಕೊ*ಲೆ ಮಾಡಿದೆ ಎಂಬ ಸುದ್ದಿಯೇ ಎಲ್ಲಡೆ ಬಿತ್ತರವಾಗಿತ್ತು. ಆದರೆ ರೋಹಿತ್ ಸೈನಿ ಹೇಳಿಕೆಯಲ್ಲಿನ ವ್ಯತ್ಯಾಸಗಳನ್ನು ಗಮನಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ನಿಜಾಂಶ ಬಾಯ್ಬಿಟ್ಟಿದ್ದಾನೆ. ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರೇಯಸಿಗಾಗಿ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ರೋಹಿತ್ ಮತ್ತು ರಿತು ದೀರ್ಘಕಾಲದಿಂದಿ ಪ್ರೀತಿಸುತ್ತಿದ್ದರು. ಒಟ್ಟಿಗೆ ಬಾಳಲು ಸಂಜು ಅಡ್ಡಿಯಾಗಿದ್ದರಿಂದ ರಿತುಳ ಒತ್ತಾಯದ ಮೇರೆಗೆ ರೋಹಿತ್ ಕೊಲೆ ಮಾಡಿದ್ದಾನೆ. ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಈಗ ಆರೋಪಿಗಳಿಬ್ಬರನ್ನೂ ಕೂಲಂಕಷವಾಗಿ ವಿಚಾರಣೆ ನಡೆಸುತ್ತಿದ್ದು, ಈ ಘಟನೆಯಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.
ಆರೋಪಿ ರೋಹಿತ್ ಸೈನಿ ತನ್ನ ತಪ್ಪನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ರಿತು ಮತ್ತು ರೋಹಿತ್ ದೀರ್ಘ ಸಮಯದಿಂದ ರಿಲೇಶನ್‌ಶಿಪ್‌ನಲ್ಲಿದ್ದರು. ರಿತು ಜೊತೆ ಜೀವನ ನಡೆಸಲು ಪತ್ನಿ ಅಡ್ಡಿಯಾಗಿದ್ದಳು. ಆಕೆಯನ್ನು ಮುಗಿಸುವಂತೆ ರಿತು ಒತ್ತಡ ಹಾಕುತ್ತಿದ್ದಳು. ಈ ಒತ್ತಡದಲ್ಲಿ ಸಿಲುಕಿದ್ದ ರೋಹಿತ್ ಪತ್ನಿಯನ್ನು ಕೊ*ಲೆಗೈದು, ಕಳ್ಳತನ ಎಂದು ಬಿಂಬಿಸಲು ಪ್ಲಾನ್ ಮಾಡಿಕೊಂಡಿದ್ದನು. ಪ್ರಮುಖ ಆರೋಪಿ ರೋಹಿತ್ ಸೈನಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಈ ಸಂಬಂಧ ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಗ್ರಾಮೀಣ ಎಸ್‌ಪಿ ದೀಪಕ್ ಕುಮಾರ್ ಹೇಳಿದ್ದಾರೆ.
ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊ*ಲೆ ಮಾಡಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಾಚೋಹಳ್ಳಿ ಬಳಿಯ ಡಿಗ್ರೂಪ್ ಲೇಔಟ್‌ನಲ್ಲಿ ರಿಯಲ್ ಎಸ್ಟೇಟ್ ಮತ್ತು ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ವಿಜಯ್ ಕುಮಾರ್ (39) ಕೊ*ಲೆಯಾದ ದುರ್ದೈವಿ. ಮಾಗಡಿಯ ಸುಂಕದಕಟ್ಟೆಯ ನಿವಾಸಿಯಾಗಿದ್ದ ವಿಜಯ್‌ಕುಮಾರ್ 10 ವರ್ಷಗಳ ಹಿಂದೆ ಆಶಾಳನ್ನು ಮದುವೆಯಾಗಿದ್ದು ಕಾಮಾಕ್ಷಿಪಾಳ್ಯದಲ್ಲಿ ವಾಸವಾಗಿದ್ದರು.
ಆ ಸಂದರ್ಭದಲ್ಲಿ ಆಶಾಗೆ ತನ್ನ ಬಾಲ್ಯ ಸ್ನೇಹಿತ ಧನಂಜಯನ ಪರಿಚಯವಾಗಿದೆ. ತನ್ನ ಪತಿ ವಿಜಯ್ ಗೂ ಆತನನ್ನು ಪರಿಚಯ ಮಾಡಿಸಿದ್ದಾಳೆ. ತದ ನಂತರದಲ್ಲಿ ಪತ್ನಿ ಆಶಾ ಹಾಗೂ ಧನಂಜಯ ನಡುವಿನ ಅನೈತಿಕ ಸಂಬಂಧದವರೆಗೆ ಬೆಳೆದಿದೆ. ಅಲ್ಲದೇ ಇಬ್ಬರೂ ಒಟ್ಟಿಗಿರುವ ಫೋಟೋಗಳು ಸಿಕ್ಕಿಬಿದ್ದಿದ್ದರಿಂದ ಈ ವಿಷಯದ ಬಗ್ಗೆ ವಿಜಯ್ ಗಲಾಟೆಯನ್ನೂ ಮಾಡಿದ್ದ. ಈ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ