ಜೂನ್ ಮುಗಿದ್ರೂ ಹೊಲ ಒದ್ದೆಯಾಗಿಲ್ಲ, ಅಕ್ಕಿ ದ್ವಿದಳಧಾನ್ಯ ಸೇರಿ ಸೋಯಾಬೀನ್ ಬೆಳೆಯಲ್ಲಿ ಭಾರೀ ಇಳಿಕೆ

Published : Jun 30, 2026, 12:59 PM IST
Kharif crop

ಸಾರಾಂಶ

low monsoon :  ಮಳೆಗಾಲ ಶುರುವಾಗಿದೆ ಆದ್ರೆ ಮಳೆ ಇಲ್ಲ. ಆಗೋ ಈಗೋ ಬರುವ ಒಂದು ಮಳೆಗೆ ಹೊಲ ಸರಿಯಾಗಿ ಒದ್ದೆ ಕೂಡ ಆಗಿಲ್ಲ. ಇದ್ರಿಂದ ಬಿತ್ತನೆ ನಿಧಾನವಾಗಿದ್ದು, ಈ ಬಾರಿ ಬರಗಾಲದ ಭಯ ಶುರುವಾಗಿದೆ.  

ಈ ವರ್ಷ ಜೂನ್ ಮುಗಿದ್ರೂ ಮಳೆ ಬೀಳುವ ಲಕ್ಷಣ ಕಾಣ್ತಿಲ್ಲ. ಇದ್ರಿಂದ ರೈತರ ಕೆಲ್ಸ ಮುಂದೆ ಸಾಗ್ತಿಲ್ಲ. ಭತ್ತ ಸೇರಿದಂತೆ ಬೇಳೆ ಕಾಳುಗಳ ಬಿತ್ತನೆ ಅತಿ ಕಡಿಮೆ ಪ್ರಮಾಣದಲ್ಲಿ ಆಗಿದ್ದು, ಆಗೊಂದು ಈಗೊಂದು ಮಳೆ ಆಗ್ತಿರೋದ್ರಿಂದ ಬರಗಾಲದ ಭಯ ಶುರುವಾಗಿದೆ.

ಖಾರಿಫ್ ಬೆಳೆಯಲ್ಲಿ ಇಳಿಕೆ

 ನೈಋತ್ಯ ಮಾನ್ಸೂನ್ ಬಹಳ ನಿಧಾನವಾಗಿ ಮತ್ತು ದುರ್ಬಲವಾಗಿ ಪ್ರಾರಂಭವಾಗಿದೆ. ಖಾರಿಫ್ ಬೆಳೆಗಳ ಬಿತ್ತನೆ ಇದ್ರಿಂದ ನಿಧಾನಗೊಂಡಿದೆ. ಕೃಷಿ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ಜೂನ್ 25 ರ ಹೊತ್ತಿಗೆ ದೇಶಾದ್ಯಂತ ಒಟ್ಟು ಖಾರಿಫ್ ಬಿತ್ತನೆ ಪ್ರದೇಶವು ಕಳೆದ ವರ್ಷಕ್ಕಿಂತ ಸುಮಾರು 53.74 ಲಕ್ಷ ಹೆಕ್ಟೇರ್ ಕಡಿಮೆಯಾಗಿದೆ. ಕಳೆದ ವರ್ಷ ಈ ವೇಳೆಗೆ 236.46 ಲಕ್ಷ ಹೆಕ್ಟೇರ್ ಬಿತ್ತನೆಯಾಗಿತ್ತು. ಆದ್ರೆ ಈ ವರ್ಷ ಕೇವಲ 182.72 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಒಟ್ಟು ಬಿತ್ತನೆಯಲ್ಲಿ ಸರಿಸುಮಾರು ಶೇಕಡಾ 22.7 ರಷ್ಟು ನೇರ ಕುಸಿತವಾಗಿದೆ. ಅಲ್ಲಲ್ಲಿ ಹೊಲ ಒದ್ದೆಯಾಗಿದ್ದು ಬಿಟ್ರೆ ಜೂನ್ ತಿಂಗಳಿನಲ್ಲಿ ಮಳೆ ಬಹಳ ಕಡಿಮೆ ಬಿದ್ದಿದ್ದರಿಂದ ಗದ್ದೆ ಒಣಗಿತ್ತು. ಇದ್ರಿಂದ ಬಿತ್ತನೆ ಕಾರ್ಯ ಸಾಧ್ಯವಾಗ್ಲಿಲ್ಲ. ಅನೇಕ ಕಡೆ ಬಿತ್ತನೆ ಕೆಲ್ಸ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದು ರೈತರು ಮತ್ತು ಸರ್ಕಾರ ಇಬ್ಬರನ್ನೂ ಚಿಂತೆಗೀಡು ಮಾಡಿದೆ.

ಯುಪಿ ಕೋಟ್ಯಧಿಪತಿ ಮಗನ ಘರ್ ವಾಪ್ಸಿ: ಇಸ್ಲಾಂ ತೊರೆದು ಮತ್ತೆ ಹಿಂದೂ ಧರ್ಮಕ್ಕೆ

ಭತ್ತ ಮತ್ತು ದ್ವಿದಳ ಧಾನ್ಯಗಳ ಬಿತ್ತನೆ ಇಳಿಕೆ 

ಮಂದಗತಿಯ ಮಾನ್ಸೂನ್ ಖಾರಿಫ್ ಋತುವಿನ ಮುಖ್ಯ ಬೆಳೆಯಾದ ಅಕ್ಕಿಯ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ದತ್ತಾಂಶದ ಪ್ರಕಾರ, ಕಳೆದ ವರ್ಷ ಇದೇ ಅವಧಿಯಲ್ಲಿ 34.41 ಲಕ್ಷ ಹೆಕ್ಟೇರ್ಗಳಷ್ಟು ಭತ್ತವನ್ನು ಬಿತ್ತನೆ ಮಾಡಲಾಗಿತ್ತು. ಆದರೆ ಇಲ್ಲಿಯವರೆಗೆ ಕೇವಲ 25.75 ಲಕ್ಷ ಹೆಕ್ಟೇರ್ಗಳಲ್ಲಿ ಮಾತ್ರ ಭತ್ತ ಬಿತ್ತನೆ ಮಾಡಲಾಗಿದೆ. ಇದು 8.65 ಲಕ್ಷ ಹೆಕ್ಟೇರ್ಗಳಷ್ಟು ಅಥವಾ ಸರಿಸುಮಾರು ಶೇಕಡಾ 25.1 ರಷ್ಟು ಗಮನಾರ್ಹ ಇಳಿಕೆಯಾಗಿದೆ. ಆಹಾರದಲ್ಲಿ ಪ್ರಮುಖ ಬೆಳೆಗಳಲ್ಲಿ ಒಂದಾದ ದ್ವಿದಳ ಧಾನ್ಯ ಕೂಡ ಗಮನಾರ್ಹವಾಗಿ ಕುಸಿದಿದೆ. ಕಳೆದ ವರ್ಷ 21.46 ಲಕ್ಷ ಹೆಕ್ಟೇರ್ಗಳಷ್ಟಿದ್ದ ದ್ವಿದಳ ಧಾನ್ಯಗಳ ಒಟ್ಟು ವಿಸ್ತೀರ್ಣ ಈ ಬಾರಿ ಕೇವಲ 14.92 ಲಕ್ಷ ಹೆಕ್ಟೇರ್ಗಳಿಗೆ ಇಳಿದಿದೆ.ಅಗತ್ಯ ದ್ವಿದಳ ಧಾನ್ಯಗಳು, ವಿಶೇಷವಾಗಿ ಅರ್ಹರ್, ಉದ್ದು ಮತ್ತು ಹೆಸರುಕಾಳುಗಳ ಬಿತ್ತನೆಯಲ್ಲಿ ಸಾಕಷ್ಟು ಇಳಿಕೆಯಾಗಿದೆ.

ರಾಮಮಂದಿರ ಕಾಣಿಕೆ ಲೂಟಿ ಪ್ರಕರಣ: 17 ವರ್ಷದ ಬಳಿಕ RMO ವರ್ಗಾವಣೆ; ನೌಕರನ ಸ್ಯಾಲರಿ 20,000, ಆದ್ರೆ ಸಿಕ್ಕಿದ್ದು ಕೋಟಿ ಕೋಟಿ ಹಣ

ಎಣ್ಣೆಕಾಳುಗಳು –ಸೋಯಾಬೀನ್ ಕೊರತೆ 

ಮಾನ್ಸೂನ್, ಎಣ್ಣೆಕಾಳು ಬೆಳೆಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ. ಅವುಗಳ ವಿಸ್ತೀರ್ಣ ಅರ್ಧಕ್ಕಿಂತ ಹೆಚ್ಚು ಕಡಿಮೆಯಾಗಿದೆ. ಕಳೆದ ವರ್ಷ ಎಣ್ಣೆಬೀಜಗಳನ್ನು 36.41 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆ ಮಾಡಲಾಗಿತ್ತು. ಆದ್ರೆ ಈ ವರ್ಷ ಅದು ಕೇವಲ 16.99 ಲಕ್ಷ ಹೆಕ್ಟೇರ್ಗೆ ಕುಸಿದಿದೆ. ಸೋಯಾಬೀನ್ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ. ಸೋಯಾಬೀನ್ ವಿಸ್ತೀರ್ಣ 19.97 ಲಕ್ಷ ಹೆಕ್ಟೇರ್ನಿಂದ ಕೇವಲ 6.92 ಲಕ್ಷ ಹೆಕ್ಟೇರ್ಗೆ ಇಳಿದಿದೆ. ಕಡಲೆಕಾಯಿಯನ್ನು ಕಳೆದ ವರ್ಷ 15.29 ಲಕ್ಷ ಹೆಕ್ಟೇರ್ ನಲ್ಲಿ ಬೆಳೆಯಲಾಗಿತ್ತು. ಈ ವರ್ಷ ಕೇವಲ 8.87 ಲಕ್ಷ ಹೆಕ್ಟೇರ್ ನಲ್ಲಿ ಬೆಳೆಯಲಾಗ್ತಿದೆ. ಎಣ್ಣೆಬೀಜ ಬೆಳೆಗಳಲ್ಲಿನ ಈ ವಿಳಂಬ ದೇಶದ ಖಾದ್ಯ ತೈಲ ಉತ್ಪಾದನೆಗೆ ದೊಡ್ಡ ಹೊಡೆತ ನೀಡಲಿದೆ. ಇನ್ನು ಮಾನ್ಸೂನ್ ಕೈಕೊಟ್ಟಿದ್ದರಿಂದ ಹತ್ತಿ ಬಿತ್ತನೆ ಕೂಡ ತಡವಾಗ್ತಿದೆ. ಈ ವರ್ಷ ಹತ್ತಿ ಬಿತ್ತನೆ ಪ್ರದೇಶವು ಕಳೆದ ವರ್ಷದ 45.36 ಲಕ್ಷ ಹೆಕ್ಟೇರ್ಗಳಿಂದ 29.66 ಲಕ್ಷ ಹೆಕ್ಟೇರ್ಗಳಿಗೆ ಇಳಿದಿದೆ. ಖುಷಿ ವಿಷ್ಯ ಏನಂದ್ರೆ ಕಬ್ಬಿನ ಬಿತ್ತನೆ ಪ್ರದೇಶ ಕಳೆದ ವರ್ಷ 56.64 ಲಕ್ಷ ಹೆಕ್ಟೇರ್ಗಳಿತ್ತು. ಈ ವರ್ಷ 57.31 ಲಕ್ಷ ಹೆಕ್ಟೇರ್ಗಳಿಗೆ ಏರಿಕೆಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಯುಪಿ ಕೋಟ್ಯಧಿಪತಿ ಮಗನ ಘರ್ ವಾಪ್ಸಿ: ಇಸ್ಲಾಂ ತೊರೆದು ಮತ್ತೆ ಹಿಂದೂ ಧರ್ಮಕ್ಕೆ ಮರಳಿದ ಆಯುಷ್ ಮಲಿಕ್!
ಮಾರ್ಕ್ ಜುಕರ್‌ಬರ್ಗ್ ಕನಸು! WhatsApp ಬಳಕೆ ಮಾಡೋರು 79 ರೂಪಾಯಿ ಕೊಡ್ಬೇಕು; ಯಾಕೆ?