ಭಾರತ ಸರ್ಕಾರ ವಿರುದ್ಧ ಕೆನಡಾದಲ್ಲಿ ಖಲಿಸ್ತಾನಿಗಳ ಪ್ರತಿಭಟನೆ: ಭಾರತದ ಧ್ವಜ, ಮೋದಿ ಫೋಟೋಕ್ಕೆ ಬೆಂಕಿ

Published : Sep 27, 2023, 07:19 AM IST
ಭಾರತ ಸರ್ಕಾರ ವಿರುದ್ಧ ಕೆನಡಾದಲ್ಲಿ ಖಲಿಸ್ತಾನಿಗಳ ಪ್ರತಿಭಟನೆ:  ಭಾರತದ ಧ್ವಜ, ಮೋದಿ ಫೋಟೋಕ್ಕೆ ಬೆಂಕಿ

ಸಾರಾಂಶ

ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆಯಲ್ಲಿ ಭಾರತ ಸರ್ಕಾರ ಕೈವಾಡವಿದೆ ಎಂದು ಆರೋಪಿಸಿ ಕೆನಡಾದ ಟೊರಂಟೋ, ಒಟ್ಟಾವ ಮತ್ತು ವ್ಯಾಂಕೋವರ್‌ನಲ್ಲಿನ ಭಾರತೀಯ ದೂತಾವಾಸ ಕಚೇರಿ (Indian Consulate) ಮುಂದೆ ಖಲಿಸ್ತಾನಿ ಬೆಂಬಲಿಗರು  ಪ್ರತಿಭಟನೆ ನಡೆಸಿದರು

ಟೊರೊಂಟೊ:. ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆಯಲ್ಲಿ ಭಾರತ ಸರ್ಕಾರ ಕೈವಾಡವಿದೆ ಎಂದು ಆರೋಪಿಸಿ ಕೆನಡಾದ ಟೊರಂಟೋ, ಒಟ್ಟಾವ ಮತ್ತು ವ್ಯಾಂಕೋವರ್‌ನಲ್ಲಿನ ಭಾರತೀಯ ದೂತಾವಾಸ ಕಚೇರಿ (Indian Consulate) ಮುಂದೆ ಖಲಿಸ್ತಾನಿ ಬೆಂಬಲಿಗರು  ಪ್ರತಿಭಟನೆ ನಡೆಸಿದರು ಮೂರೂ ನಗರಗಳ ಭಾರತೀಯ ರಾಯಭಾರ (Indian Embassy) ಕಚೇರಿ ಮುಂದೆ ನೆರೆದಿದ್ದ ಗುಂಪು, ಭಾರತದ ರಾಷ್ಟ್ರಧ್ವಜಕ್ಕೆ ಬೆಂಕಿ ಹಚ್ಚಿದ್ದಲ್ಲದೆ, ಮೋದಿ ಅವರ ಭಾವಚಿತ್ರಕ್ಕೆ ಶೂ ಹಾಕಿ ಅದಕ್ಕೆ ಬೆಂಕಿ ಹಚ್ಚಿ ದುಷ್ಕೃತ್ಯ ಮೆರೆದಿದೆ. ಅಲ್ಲದೆ ಖಲಿಸ್ತಾನಿಗಳ ಧ್ವಜ ಪ್ರದರ್ಶಿಸಿ ತಮ್ಮ ಉದ್ದೇಶ ತೋರಿಸಿದರು.

ಇದೇ ವೇಳೆ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ (Canadian Prime Minister Justin Trudeau) ಹೇಳಿಕೆಯನ್ನು ಬೆಂಬಲಿಸಿದ ಪ್ರತಿಭಟನಾಕಾರರು ಈ ವಿಷಯದಲ್ಲಿ ಪೂರ್ಣ ಪ್ರಮಾಣದ ತನಿಖೆಗೆ ಆಗ್ರಹಿಸಿದರು. ಕೆನಡಾದಲ್ಲಿ 7.70 ಲಕ್ಷ ಸಿಖ್ಖರು ವಾಸವಿದ್ದು, ಇದು ಪಂಜಾಬ್‌ ಹೊರತುಪಡಿಸಿ ಇಡೀ ವಿಶ್ವದಲ್ಲೇ ಸಿಖ್ಖರು ಅತಿ ಹೆಚ್ಚು ಸಂಖ್ಯೆಯಲ್ಲಿ ವಾಸ ಮಾಡುತ್ತಿರುವ ಸ್ಥಳವಾಗಿದೆ. 

 

ಫೇಮಸ್ ಆಗಲು ಪಿಎಫ್‌ಐ ದಾಳಿ ಕತೆ ಕಟ್ಟಿದ ಕೇರಳ ಯೋಧ, ಸ್ನೇಹಿತನ ಬಂಧನ

30 ದಿನಗಳಲ್ಲಿ ಭಾರತದ ರಾಜತಾಂತ್ರಿಕತೆ ಉತ್ತುಂಗಕ್ಕೆ: ಮೋದಿ

ನವದೆಹಲಿ: ಕಳೆದ 30 ದಿನಗಳಲ್ಲಿ ಭಾರತದ ರಾಜತಾಂತ್ರಿಕತೆ (, India's diplomacy) ಗಣನೀಯ ಎತ್ತರಕ್ಕೆ ಏರಿದೆ. ಅಲ್ಲದೇ ಜಿ20 ಶೃಂಗಸಭೆಯಲ್ಲಿ ತೆಗೆದುಕೊಂಡ ಹಲವು ನಿರ್ಧಾರಗಳು 21ನೇ ಶತಮಾನದಲ್ಲಿ ಭಾರತದ ದಿಕ್ಕು ಬದಲಿಸಲು ಶಕ್ತವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಹೇಳಿದ್ದಾರೆ.

ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜ ಹಾರಾಟ ತಡೆದರೆ 8 ಕೋಟಿ ನೀಡುವುದಾಗಿ ಘೋಷಿಸಿದ್ದ ಪನ್ನೂನ್

ಜಿ20 ಕುರಿತು ವಿಶ್ವವಿದ್ಯಾಲಯಗಳಲ್ಲಿ ನಡೆದ ಸಭೆಗಳ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳು ಮತ್ತು ವಿವಿ ಸಿಬ್ಬಂದಿ ಉದ್ದೇಶಿಸಿ ಮಾತನಾಡಿದ ಅವರು, ‘ಧ್ರುವೀಕರಣಗೊಂಡಿರುವ ಇಂದಿನ ಪ್ರಪಂಚದಲ್ಲಿ ಹಲವು ದೇಶಗಳನ್ನು ಒಂದೇ ವೇದಿಕೆಯಲ್ಲಿ ಕರೆತರುವುದು ಸುಲಭವಲ್ಲ. ಆದರೆ ದೆಹಲಿ ಶೃಂಗಸಭೆಯಲ್ಲಿ (Delhi Summit)ಇದಾಗಿದೆ’ ಎಂದು ಹೇಳಿದರು. ‘ನಾನು ಕಳೆದ 30 ದಿನಗಳ ರಿಪೋರ್ಟ್ ಕಾರ್ಡನ್ನು ನಿಮಗೆ ನೀಡಲು ಬಯಸುತ್ತೇನೆ. ಇದು ನವ ಭಾರತದ ವೇಗ ಮತ್ತು ವಿಸ್ತಾರವನ್ನು ನಿಮ್ಮ ಅರಿವಿಗೆ ತರಲಿದೆ. ಆ.23 ನಿಮಗೆ ನೆನಪಿರಬಹುದು. ಅಂದು ಭಾರತ ಚಂದ್ರನ ಮೇಲೆ ಕಾಲಿಟ್ಟಿತು ಎಂಬ ಧ್ವನಿಯನ್ನು ಇಡೀ ವಿಶ್ವವೇ ಕೇಳಿತ್ತು. ಇದರ ಯಶಸ್ಸಿನ ಬೆನ್ನಲ್ಲೇ ಭಾರತ ಸೌರಯಾನವನ್ನು ಕೈಗೆತ್ತಿಕೊಂಡಿತು’ ಎಂದು ಅವರು ಹೇಳಿದರು.

ಪೂಜೆ ನಂತರ ಭಾರತೀಯ ವಾಯುಪಡೆಗೆ ಸೇರ್ಪಡೆಯಾದ ಸಿ 295 ವಿಮಾನ

‘ಜಿ 20 ಸಭೆ (G20 meeting) ಕೇವಲ ದೆಹಲಿಯಲ್ಲಿನ ಅಧಿಕಾರಿಗಳ ಮಟ್ಟದಲ್ಲೇ ಮುಗಿಯಬಹುದಿತ್ತು. ಆದರೆ ಇದನ್ನು ಭಾರತ ಜನರು ಭಾಗಿಯಾಗುವ ರಾಷ್ಟ್ರೀಯ ಅಭಿಯಾನವನ್ನಾಗಿಸಿತು. ಭಾರತದ ಪ್ರಯತ್ನದಿಂದ 6 ರಾಷ್ಟ್ರಗಳು ಬ್ರಿಕ್ಸ್‌ ಕೂಟವನ್ನು ಸೇರಿಕೊಂಡವು. ಇಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡ ಹಲವು ನಿರ್ಧಾರಗಳು ಜಾಗತಿಕವಾಗಿ ಭಾರತದ ದಿಕ್ಕನ್ನು ಬದಲಾಯಿಸುವ ಶಕ್ತಿ ಹೊಂದಿದ್ದವು’ ಎಂದು ಅವರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸೌಟು, ಕುಕ್ಕರ್ ಹಿಡಿದು ನಿಲ್ಲಿ, SIR ವಿರುದ್ಧ ಹೋರಾಟಕ್ಕೆ ಮಹಿಳೆಯರಿಗೆ ಸಿಎಂ ಮಮತಾ ಬ್ಯಾನರ್ಜಿ ಕರೆ
ಮಧುಮೇಹ ಚಿಕಿತ್ಸೆಯಲ್ಲಿ ಹೊಸ ಕ್ರಾಂತಿ: AIIMS ವೈದ್ಯರಿಂದ ಅದ್ಭುತ ಸಾಧನೆ, ಈಗ ಕೇವಲ 2 ಗಂಟೆಯಲ್ಲಿ ಗುಣಪಡಿಸಬಹುದು!