ಅಮೆರಿಕದಲ್ಲೂ ರಾಯಭಾರ ಕಚೇರಿ ಮೇಲಿ ಖಲಿಸ್ತಾನಿಗಳ ದಾಳಿ, ಭಾರತ ಖಂಡನೆ!

Published : Mar 20, 2023, 11:12 PM IST
ಅಮೆರಿಕದಲ್ಲೂ ರಾಯಭಾರ ಕಚೇರಿ ಮೇಲಿ ಖಲಿಸ್ತಾನಿಗಳ ದಾಳಿ, ಭಾರತ ಖಂಡನೆ!

ಸಾರಾಂಶ

ಖಲಿಸ್ತಾನಿ ಪರ ಸಂಘಟನೆಗಳು ಸ್ಯಾನ್‌ ಫ್ರಾನ್ಸಿಸ್ಕೋದ ಕಾನ್ಸುಲೇಟ್‌ ಆವರಣದ ಎದುರು ಹಾಕಲಾಗಿದ್ದ ತಾತ್ಕಾಲಿಕ ತಡೆಗೋಡೆಗಳನ್ನು ಮುರಿದು, ಆವರಣದಲ್ಲಿ ಎರಡು ಖಲಿಸ್ತಾನಿ ಧ್ವಜಗಳನ್ನು ಹಾರಿಸಿದ್ದಾರೆ.

ನವದೆಹಲಿ (ಮಾ.20): ಖಲಿಸ್ತಾನಿ ಬೆಂಬಲಿಗರ ಪ್ರತಿಭಟನೆಯ ವೇಳೆ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ದಾಂಧಲೆ ಸೃಷ್ಟಿಸಿದ ಕಾರಣಕ್ಕೆ ಭಾರತ ಕಿಡಿಕಾರಿದೆ. ಸೋಮವಾರ ನಡೆದ ಘಟನೆಯ ಕುರಿತಾಗಿ ಭಾರತದಲ್ಲಿನ ಅಮೆರಿಕ ರಾಯಭಾರಿಗೆ ತನ್ನ ಆಕ್ರೋಶವನ್ನು ತೋಡಿಕೊಂಡಿದ್ದು, ಈ ಕುರಿತಾಗಿ ಶೀಘ್ರವಾಗಿ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾಗಿ ಮೂಲಗಳು ತಿಳಿಸಿವೆ.  "ನವದೆಹಲಿಯಲ್ಲಿ ಯುಎಸ್ ಚಾರ್ಜ್ ಡಿ ಅಫೇರ್ಸ್ ಜೊತೆಗಿನ ಸಭೆಯಲ್ಲಿ, ಸ್ಯಾನ್ ಫ್ರಾನ್ಸಿಸ್ಕೋದ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾದ ಆಸ್ತಿಯನ್ನು ಧ್ವಂಸಗೊಳಿಸಿದ ಬಗ್ಗೆ ಭಾರತವು ತನ್ನ ಬಲವಾದ ಪ್ರತಿಭಟನೆಯನ್ನು ತಿಳಿಸಿದೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.  "ಯುಎಸ್ ಸರ್ಕಾರಕ್ಕೆ ರಾಜತಾಂತ್ರಿಕ ಪ್ರಾತಿನಿಧ್ಯವನ್ನು ರಕ್ಷಿಸುವ ಮತ್ತು ಸುರಕ್ಷಿತಗೊಳಿಸುವ ತನ್ನ ಮೂಲಭೂತ ಬಾಧ್ಯತೆಯನ್ನು ನೆನಪು ಮಾಡಲಾಯಿತು. ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಖಲಿಸ್ತಾನಿ ಪರ ಹೋರಾಟಾರರು ಸ್ಯಾನ್‌ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತವಾಸ ಕಚೇರಿಯ ಎದುರಿನ ತಾತ್ಕಾಲಿಕ ಗೋಡೆಗಳನ್ನು ಮುರಿದು ಪ್ರವೇಶ ಪಡೆದಿದ್ದರೆ, ಎರಡು ಖಲಿಸ್ತಾನಿ ಧ್ವಜಗಳನ್ನು ಆವರಣದಲ್ಲಿ ಹಾಕಿದ್ದರು ಇದರ ಬೆನ್ನಲ್ಲಿಯೇ ಭಾರತ ತನ್ನ ಪ್ರತಿಭಟನೆಯನ್ನು ಅಮೆರಿಕದ ಮುಂದೆ ವ್ಯಕ್ತಪಡಿಸಿದೆ ಎಂದು ಪಿಟಿಐ ವರದಿ ಮಾಡಿದೆ. ತಕ್ಷಣವೇ ಈ ಧ್ವಜಗಳನ್ನು ದೂತವಾಸದ ಅಧಿಕಾರಿಗಳು ಕಿತ್ತುಹಾಕಿದ್ದಾರೆ. ಇದಲ್ಲದೆ, ಸಿಟ್ಟಿನಲ್ಲಿದ್ದ ಪ್ರತಿಭಟನಾಕಾರರು, ದೂತವಾಸದ ಆವರಣವನ್ನು ಪ್ರವೇಶಿಸಿದಲ್ಲದೆ, ಬಾಗಿಲುಗಳು, ಹಾಗೂ ಕಿಟಿಗಳಿಗೆ ಕಬ್ಬಿಣದ ರಾಡ್‌ಗಳಿಂದ ಬಡಿಯಲು ಆರಂಭಿಸಿದ್ದರು.

ಆತ್ಮಾಹುತಿ ದಾಳಿಕೋರರ ಸಜ್ಜುಗೊಳಿಸುತ್ತಿದ್ದ ಅಮೃತ್‌ಪಾಲ್‌: ಗುರುದ್ವಾರಗಳಲ್ಲಿ ಶಸ್ತ್ರಾಸ್ತ್ರ ಸಂಗ್ರಹ

ಲಂಡನ್‌ನಲ್ಲಿ ಭಾರತೀಯ ಹೈಕಮೀಷನ್‌ನ ಕಟ್ಟಡವನ್ನು ಏರಿದ್ದ ಖಲಿಸ್ತಾನಿ ಬೆಂಬಲಿಗರು, ಭಾರತದ ಧ್ವಜವನ್ನು ಇಳಿಸಿ ಖಲಿಸ್ತಾನಿ ಧ್ವಜಗಳನ್ನು ಹಾಕಲು ಪ್ರಯತ್ನಿಸಿದ ಘಟನೆಯ ಬೆನ್ನಲ್ಲಿಯೇ ಸ್ಯಾನ್‌ಫ್ರಾನ್ಸಿಸ್ಕೋದಿಂದ ಈ ಘಟನೆ ವರದಿಯಾಗಿದೆ. ಪಂಜಾನ್‌ ಪೊಲೀಸ್‌  ತೀವ್ರಗಾಮಿ ಬೋಧಕ ಅಮೃತಪಾಲ್ ಸಿಂಗ್‌ನನ್ನು ಸದೆಬಡಿಯಲು ಮುಂದಾಗಿರುವ ಖಲಿಸ್ತಾನಿ ಪ್ರತಿಭಟನೆಗಳು ಜೋರಾಗುತ್ತಿವೆ.

ಪರಾರಿಯಾದ ಖಲಿಸ್ತಾನಿ ನಾಯಕ ಅಮೃತ್‌ಪಾಲ್‌ ಸಿಂಗ್: ಪಂಜಾಬ್‌ ಹೈ ಅಲರ್ಟ್‌..!

ಇಂಗ್ಲೆಂಡ್‌ನಲ್ಲಿ ಈ ಘಟನೆ ಆದ ಬೆನ್ನಲ್ಲಿಯೇ ಭಾರತದಲ್ಲಿರುವ ಇಂಗ್ಲೆಂಡ್‌ನ ಹಿರಿಯ ರಾಜತಾಂತ್ರಿಕ ಅಧಿಕಾರಿಗಳಿಗೆ ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆಯು ಸಮನ್ಸ್‌ ಜಾರಿ ಮಾಡಿ ತನ್ನ ಪ್ರತಿಭಟನೆಯನ್ನು ದಾಖಲಿಸಿದೆ. ಖಲಿಸ್ತಾನಿ ಹೋರಾಟಗಾರರನ್ನು ಹೈಕಮೀಷನ್‌ ಆವರಣಕ್ಕೆ ಅನುಮತಿ ನೀಡಿದ್ದು ಹೇಗೆ? ಬ್ರಿಟಿಷ್‌ ಭದ್ರತಾ ಪಡೆಗಳ ವೈಫಲ್ಯದ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಲಾಯಿತು. ಅದರೊಂದಿಗೆ ವಿಯೆನ್ನಾ ಕನ್ವೆನ್ಷನ್ ಅಡಿಯಲ್ಲಿ ಯುಕೆ ಸರ್ಕಾರದ ಮೂಲಭೂತ ಕಟ್ಟುಪಾಡುಗಳ ನೆನಪಿಸಲಾಗಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್