ಕೇರಳದ ಮೊಟ್ಟಮೊದಲ ತೃತೀಯ ಲಿಂಗಿ ವಕೀಲೆ ಎನಿಸಿದ ಪದ್ಮಲಕ್ಷ್ಮೀ!

By Santosh Naik  |  First Published Mar 20, 2023, 6:43 PM IST

ಮಾರ್ಚ್ 19 ರ ಭಾನುವಾರ ಬಾರ್ ಕೌನ್ಸಿಲ್ ಆಫ್ ಕೇರಳವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಾರ್ ದಾಖಲಾತಿ ಪ್ರಮಾಣಪತ್ರವನ್ನು ಹಸ್ತಾಂತರಿಸಿದ 1,500 ಕಾನೂನು ಪದವೀಧರರಲ್ಲಿ ತೃತೀಯ ಲಿಂಗಿ ಕಾನೂನು ಪದವೀಧರೆ ಪದ್ಮಾ ಲಕ್ಷ್ಮಿ ಕೂಡ ಒಬ್ಬರಾಗಿದ್ದಾರೆ.
 


ತಿರುವನಂತಪುರ (ಮಾ.20): ಪದ್ಮಾ ಲಕ್ಷ್ಮಿ ಕೇರಳದ ಮೊದಲ ತೃತೀಯ ಲಿಂಗಿ ವಕೀಲರೆನಿಸಿಕೊಂಡಿದ್ದಾರೆ. ಕೇರಳ ರಾಜ್ಯದ ಬಾರ್‌ ಕೌನ್ಸಿಲ್‌ನೊಂದಿಗೆ ವಕೀಲರಾಗಿ ದಾಖಲಾದ ಬಳಿಕ ಈ ಸಾಧನೆ ಮಾಡಿದ ಮೊದಲಿಗರೆನಿಸಿಕೊಂಡರು. ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಬಾರ್ ದಾಖಲಾತಿ ಪ್ರಮಾಣಪತ್ರವನ್ನು ಹಸ್ತಾಂತರಿಸಿದ 1,529 ಕಾನೂನು ಪದವೀಧರರಲ್ಲಿ ಅವರೂ ಕೂಡ ಒಬ್ಬರಾಗಿದ್ದರು. ಪದ್ಮ ಲಕ್ಷ್ಮಿ ಭೌತಶಾಸ್ತ್ರದಲ್ಲಿ ಪದವಿ ಪಡೆದ ನಂತರ ಎರ್ನಾಕುಲಂ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಎಲ್‌ಎಲ್‌ಬಿಗೆ ಸೇರಿಕೊಂಡರು. ಅಭ್ಯಾಸದ ನಂತರ ನ್ಯಾಯಾಂಗ ಸೇವಾ ಪರೀಕ್ಷೆಗಳಲ್ಲಿ ಪಾಸ್‌ ಆಗುವ ಗುರಿಯನ್ನು ಹೊಂದಿ ಆ ಕುರಿತಾಗಿ ಅಭ್ಯಾಸ ಮಾಡಿದ್ದರು. ರಾಜ್ಯದ ಕೈಗಾರಿಕಾ ಸಚಿವ ಪಿ ರಾಜೀವ್ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ವಕೀಲೆಯಾಗಿರುವ ಪದ್ಮಲಕ್ಷ್ಮೀ ಅವರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದರೊಂದಿಗೆ ಟ್ವಿಟರ್‌ ಹಾಗೂ ಫೇಸ್‌ಬುಕ್‌ ಪುಟದಲ್ಲಿ ಅವರನ್ನು ಅಭಿನಂದಿಸಿ ಸಾಕಷ್ಟು ಪೋಸ್ಟ್‌ಗಳನ್ನು ಹಾಕಲಾಗಿದೆ. "ಜೀವನದ ಎಲ್ಲಾ ಅಡೆತಡೆಗಳನ್ನು ಜಯಿಸಿ ಕೇರಳದಲ್ಲಿ ಮೊದಲ ತೃತೀಯ ಲಿಂಗಿ ವಕೀಲರಾಗಿ ದಾಖಲಾದ ಪದ್ಮಾ ಲಕ್ಷ್ಮಿ ಅವರಿಗೆ ಅಭಿನಂದನೆಗಳು. ಖಂಡಿತಾ  ಈ ಹಾದಿಯಲ್ಲಿ ಅಡೆತಡೆಗಳಿದ್ದವು. ಜನರ ಮೌನ ಮತ್ತು ನಿರುತ್ಸಾಹ ಗಳಿದ್ದವು. ಪದ್ಮಾ ಲಕ್ಷ್ಮಿ ಈ ಎಲ್ಲವನ್ನು ದಾಟುವ ಮೂಲಕ ಕಾನೂನು ವಿಭಾಗದಲ್ಲಿ ತಮ್ಮದೇ ಆದ ಇತಿಹಾಸ ಬರೆದಿದ್ದಾರೆ ಎಂದು ಸಚಿವ ರಾಜೀವ್ ಮಲಯಾಳಂನ ಬರೆದುಕೊಂಡಿದ್ದಾರೆ.

 

 
 
 
 
 
 
 
 
 
 
 
 
 
 
 

Tap to resize

Latest Videos

A post shared by P Rajeev (@prajeevofficial)

ಪದ್ಮ ಲಕ್ಷ್ಮಿ ಅವರ ಜೀವನವು ತೃತೀಯ ಲಿಂಗಿ ಸಮುದಾಯದಿಂದ ಹೆಚ್ಚಿನ ಜನರಿಗೆ ಕಾನೂನು ವೃತ್ತಿಯನ್ನು ಪ್ರವೇಶಿಸಲು ಪ್ರೇರೇಪಿಸುತ್ತದೆ ಎಂದು ಅವರು ಹೇಳಿದರು.

click me!