ಕೆನಡಾ ಹಿಂದೂ ದೇಗುಲಕ್ಕೆ ಮತ್ತೆ ಖಲಿಸ್ತಾನಿ ದಾಳಿ: ಒಂದೇ ವರ್ಷದಲ್ಲಿ 4ನೇ ಘಟನೆ

Published : Aug 14, 2023, 06:53 AM IST
ಕೆನಡಾ ಹಿಂದೂ ದೇಗುಲಕ್ಕೆ ಮತ್ತೆ ಖಲಿಸ್ತಾನಿ ದಾಳಿ:  ಒಂದೇ ವರ್ಷದಲ್ಲಿ 4ನೇ ಘಟನೆ

ಸಾರಾಂಶ

ಕೆನಡಾದಲ್ಲಿ ಖಲಿಸ್ತಾನಿಗಳ ಭಾರತ ಮತ್ತು ಹಿಂದೂ ವಿರೋಧಿ ಕೃತ್ಯಗಳು ಹೆಚ್ಚಾಗುತ್ತಿದ್ದು ಇದೀಗ ಕೆನಡಾದ ಸರ್ರೆಯಲ್ಲಿರುವ ಲಕ್ಷ್ಮೇ ನಾರಾಯಣ ದೇವಸ್ಥಾನದ (Lakshminarayana Temple) ಮೇಲೆ ದಾಳಿ ನಡೆದಿದೆ.

ಟೊರಂಟೋ: ಕೆನಡಾದಲ್ಲಿ ಖಲಿಸ್ತಾನಿಗಳ ಭಾರತ ಮತ್ತು ಹಿಂದೂ ವಿರೋಧಿ ಕೃತ್ಯಗಳು ಹೆಚ್ಚಾಗುತ್ತಿದ್ದು ಇದೀಗ ಕೆನಡಾದ ಸರ್ರೆಯಲ್ಲಿರುವ ಲಕ್ಷ್ಮೇ ನಾರಾಯಣ ದೇವಸ್ಥಾನದ (Lakshminarayana Temple) ಮೇಲೆ ದಾಳಿ ನಡೆದಿದೆ. ದೇಗುಲದ ಗೋಡೆ ಮತ್ತು ದ್ವಾರ ಬಾಗಿಲುಗಳ ಮೇಲೆ ಖಲಿಸ್ತಾನಿ ಪರ ಪೋಸ್ಟರ್‌ಗಳನ್ನು ಅಂಟಿಸಿ ದೇವಾಲಯವನ್ನು ಶನಿವಾರ ರಾತ್ರಿ ಖಲಿಸ್ತಾನಿಗಳು ವಿರೂಪಗೊಳಿಸಿದ್ದಾರೆ.

ಖಲಿಸ್ತಾನಿ ಪ್ರತ್ಯೇಕವಾದಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ (hardeep singh nijjar) ಹತ್ಯೆಯಲ್ಲಿ ಭಾರತದ ಪಾತ್ರ ಇರುವುದರ ಬಗ್ಗೆ ಕೆನಡಾ ಸರ್ಕಾರ ತನಿಖೆ ಮಾಡಬೇಕು ಎಂದ ಆಗ್ರಹಿಸಿರುವ ಪೋಸ್ಟರ್‌ಗಳನ್ನು ದುಷ್ಕರ್ಮಿಗಳು ಅಂಟಿಸಿದ್ದಾರೆ. ದೇಶದಲ್ಲಿ ಒಂದೇ ವರ್ಷದಲ್ಲಿ ಖಲಿಸ್ತಾನಿಗಳು ದೇವಸ್ಥಾನವನ್ನು ವಿರೂಪಗೊಳಿಸಿದ 4ನೇ ಘಟನೆ ಇದಾಗಿದ್ದು ಕೆನಡಾದ ಹಿಂದೂಗಳು ಘಟನೆಯನ್ನು ಬಲವಾಗಿ ಖಂಡಿಸಿದ್ದಾರೆ. ಇಲ್ಲಿನ ಸರ್ರೆಯಲ್ಲಿರುವ ದೇವಸ್ಥಾನಕ್ಕೆ ಶನಿವಾರ ರಾತ್ರಿ ಮುಸುಕು ಧರಿಸಿ ಬಂದ ಇಬ್ಬರು ದುಷ್ಕರ್ಮಿಗಳು ಗೋಡೆ ಮತ್ತು ಗೇಟ್‌ಗಳ ಮೇಲೆ ಪೋಸ್ಟರ್‌ ಅಂಟಿಸುತ್ತಿರುವ ದೃಶ್ಯ ದೇವಾಲಯದ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.

ಭಾರತದ ಧ್ವಜ ಕೆಳಗಿಳಿಸಿದ ಖಲಿಸ್ತಾನ್‌ ಉಗ್ರರು: ಲಂಡನ್‌ನ ಭಾರತೀಯ ಹೈಕಮೀಷನ್‌ ಕಚೇರಿಯಲ್ಲಿ ಘಟನೆ

ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ (Indira Gandhi Murder) ದೃಶ್ಯವನ್ನು ಪ್ರತಿಕೃತಿ ಮಾಡಿ ವೈಭವೀಕರಿಸಿದ್ದ ಬೆನ್ನಲ್ಲೇ ಕಳೆದ ತಿಂಗಳು ಭಾರತದ ಹಲವು ಗಣ್ಯರನ್ನು ಕೊಲೆಗಾರರು ಎನ್ನು ಪೋಸ್ಟರ್‌ಗಳನ್ನು ಅಂಟಿಸಲಾಗಿತ್ತು. ಅಲ್ಲದೇ 3 ದೇವಸ್ಥಾನಗಳ ಮೇಲೆ ನಿರಂತರ ದಾಳಿ ನಡೆಸಿದ ಖಲಿಸ್ತಾನಿಗಳು ಭಾರತ ವಿರೋಧಿ ಬರಹಗಳನ್ನು ಗೀಚಿ ದೇವಸ್ಥಾನಗಳನ್ನು ಧ್ವಂಸಗೊಳಿಸಿದ್ದರು. ಈ ಘಟನೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಭಾರತ ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೆನಡಾ ಸರ್ಕಾರವನ್ನು ಕೇಳಿಕೊಂಡಿತ್ತು. ಇದಕ್ಕೆ ಅಲ್ಲಿನ ಆಡಳಿತವೂ ಸಮ್ಮತಿ ಸೂಚಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಭಾರತದ ಸೇಡು..ರಸ್ತೆ ಅಪಘಾತದಲ್ಲಿ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಸಾವು?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಹಬೂಬಾ...ಹಾಡಿಗೆ ನೃತ್ಯದ ವೇಳೆ ಗೋವಾ ಪಬ್‌ ದುರಂತ!
₹500 ಕೋಟಿ ಕೊಟ್ರೆ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ : ಸಿಧು ಪತ್ನಿ ಆರೋಪ