ವಿದೇಶಗಳಲ್ಲಿ ಖಲಿಸ್ತಾನಿ ಚಟುವಟಿಕೆ: ಇನ್ನೂ 19 ಖಲಿಸ್ತಾನಿ ಉಗ್ರರ ಆಸ್ತಿ ವಶಕ್ಕೆ ಸರ್ಕಾರ ಸಿದ್ಧತೆ

Published : Sep 25, 2023, 08:38 AM ISTUpdated : Sep 25, 2023, 08:54 AM IST
ವಿದೇಶಗಳಲ್ಲಿ ಖಲಿಸ್ತಾನಿ ಚಟುವಟಿಕೆ: ಇನ್ನೂ 19 ಖಲಿಸ್ತಾನಿ ಉಗ್ರರ ಆಸ್ತಿ ವಶಕ್ಕೆ ಸರ್ಕಾರ ಸಿದ್ಧತೆ

ಸಾರಾಂಶ

ಖಲಿಸ್ತಾನಿ ಉಗ್ರ ಗುರುಪತ್‌ವಂತ್‌ ಸಿಂಗ್‌ ಪನ್ನೂನ್‌ಗೆ ಸೇರಿದ್ದ ಭಾರತದಲ್ಲಿನ ಆಸ್ತಿಪಾಸ್ತಿಗಳನ್ನು ಎನ್‌ಐಎ ವಶಪಡಿಸಿಕೊಂಡ ಬಳಿಕ, ಇನ್ನೂ 19 ಖಲಿಸ್ತಾನಿ ಉಗ್ರರ ಭಾರತದ ಆಸ್ತಿ ವಶಕ್ಕೆ ಕೇಂದ್ರ ಸರ್ಕಾರ ಸಿದ್ಧತೆ ಆರಂಭಿಸಿದೆ.  

ನವದೆಹಲಿ: ಖಲಿಸ್ತಾನಿ ಉಗ್ರ ಗುರುಪತ್‌ವಂತ್‌ ಸಿಂಗ್‌ ಪನ್ನೂನ್‌ಗೆ ಸೇರಿದ್ದ ಭಾರತದಲ್ಲಿನ ಆಸ್ತಿಪಾಸ್ತಿಗಳನ್ನು ಎನ್‌ಐಎ ವಶಪಡಿಸಿಕೊಂಡ ಬಳಿಕ, ಇನ್ನೂ 19 ಖಲಿಸ್ತಾನಿ ಉಗ್ರರ ಭಾರತದ ಆಸ್ತಿ ವಶಕ್ಕೆ ಕೇಂದ್ರ ಸರ್ಕಾರ ಸಿದ್ಧತೆ ಆರಂಭಿಸಿದೆ.  ಈ 19 ಜನರೂ ವಿದೇಶದಲ್ಲಿ ವಾಸವಿದ್ದು, ಭಾರತ ವಿರೋಧಿ ಖಲಿಸ್ತಾನಿಗಳಿಗೆ ಬೆಂಬಲ ನೀಡುತ್ತಿದ್ದಾರೆ. ಇವರ ಆಸ್ತಿಪಾಸ್ತಿಗಳನ್ನು ಶೀಘ್ರವೇ ವಶಪಡಿಸಿಕೊಳ್ಳಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಬ್ರಿಟನ್‌(Britain), ಕೆನಡಾ (Canada), ಅಮೆರಿಕ (America), ಆಸ್ಟ್ರೇಲಿಯಾ, ದುಬೈ, ಪಾಕಿಸ್ತಾನದಲ್ಲಿ ಉಳಿದುಕೊಂಡಿರುವ ಈ 19 ಜನ ಖಲಿಸ್ತಾನಿ ಉಗ್ರರು, ಖಲಿಸ್ತಾನಿ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದ್ದಾರೆ. ಇವರ ವಿರುದ್ಧ ಎನ್‌ಐಎ, ಹಲವು ಕಾಯ್ದೆ ಹಾಗೂ ಭಯೋತ್ಪಾದನೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಗುರುತು ಪತ್ತೆಗೆ ಬಹುಮಾನ ಹಣ ಕೂಡ ನಿಗದಿಪಡಿಸಿದೆ.

ನಿಜ್ಜರ್‌ ಹತ್ಯೆ ಬಗ್ಗೆ ಭಾರತದ ವಿರುದ್ಧ ಕೆನಡಾಕ್ಕೆ ಮಾಹಿತಿ ನೀಡಿದ್ದು ಅಮೆರಿಕ! 

ಕೆನಡಾ ಬದಲು ಬೇರೆ ದೇಶಗಳಲ್ಲಿ ಓದಲು ಭಾರತೀಯ ವಿದ್ಯಾರ್ಥಿಗಳ ಚಿತ್ತ

ನವದೆಹಲಿ: ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಹಳಸಿರುವ ಬೆನ್ನಲ್ಲೇ ಕೆನಡಾದ ಬದಲು ಬೇರೆ ದೇಶಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸಲು ಭಾರತೀಯ ವಿದ್ಯಾರ್ಥಿಗಳು ಯೋಚಿಸುತ್ತಿದ್ದಾರೆ. ದೇಶ ತೊರೆಯುವಂತೆ ಕೆನಡಾಲ್ಲಿರುವ ಭಾರತೀಯರಿಗೆ ಖಲಿಸ್ತಾನಿ ಉಗ್ರರು ಇತ್ತೀಚೆಗೆ ಬೆದರಿಕೆ ಒಡ್ಡಿದ್ದರು. ಇದರ ಬೆನ್ನಲ್ಲೇ ಸುರಕ್ಷಿತವಾಗಿರುವಂತೆ ಭಾರತ ಇಲ್ಲಿರುವ ಜನರಿಗೆ ಎಚ್ಚರಿಕೆ ನೀಡಿತ್ತು. ಹೀಗಾಗಿ ವಿದ್ಯಭ್ಯಾಸಕ್ಕೆಂದು ಕೆನಡಾಗೆ ಬಂದಿರುವ ವಿದ್ಯಾರ್ಥಿಗಳು ಬೇರೆ ದೇಶಗಳಿಗೆ ತೆರಳುವ ಯೋಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ.

‘ಇಲ್ಲಿ ಸಾಕಷ್ಟು ಅನಿಶ್ಚಿತತೆ ಇದೆ. ನನ್ನ ಪೋಷಕರು ಹಾಗೂ ಕುಟುಂಬ ಗಾಬರಿಗೊಂಡಿದ್ದಾರೆ. ನಾನು ನನ್ನ ಕಾಲೇಜು ನೀಡುವ ಸಲಹೆಗಾಗಿ ಕಾಯುತ್ತಿದ್ದೇನೆ. ಈಗ ಆನ್‌ಲೈನ್‌ ತರಗತಿಗಳಿಗಾಗಿ ಬೇಡಿಕೆ ಇಟ್ಟಿದ್ದೇನೆ’ ಎಂದು ಸೆನೇಕಾ ಕಾಲೇಜು ವಿದ್ಯಾರ್ಥಿನಿ ಆಕಾಂಕ್ಷಾ ವೊಹ್ರಾ ಹೇಳಿದ್ದಾರೆ. ಎಂಬಿಎ ವಿದ್ಯಾಭ್ಯಾಸಕ್ಕಾಗಿ ಕೆನಡಾಕ್ಕೆ ಹೋಗಲು ಬಯಸಿದ್ದ ವಿದ್ಯಾರ್ಥಿ ಅಫಾನ್‌ ಸುಹೇಲ್‌, ‘ನನ್ನ ಅರ್ಜಿ ಸಲ್ಲಿಕೆ ಮತ್ತು ವೀಸಾ ಪ್ರಕ್ರಿಯೆಗಳು ಮುಗಿದಿವೆ. ಕೆನಡಾಗೆ ತೆರಳಲು ಈಗಾಗಲೇ 18 ಲಕ್ಷ ರು. ವೆಚ್ಚವಾಗಿದೆ. ಇದೀಗ ಉಂಟಾಗಿರುವ ಬಿಕ್ಕಟ್ಟು ನಮ್ಮನ್ನು ಗೊಂದಲಕ್ಕೆ ದೂಡಿದೆ. ಮುಂದೇನು ಮಾಡಬೇಕು ತಿಳಿಯದಾಗಿದೆ’ ಎಂದು ಹೇಳಿದ್ಧಾರೆ.

ಜೆ.ಕೆ. ವರ್ಮಾ ಎಂಬುವವರು ಮಾತನಾಡಿ, ‘ನನ್ನ ಮಗಳು ಮೊದಲು ಕೆನಡಾಗೆ ಹೋಗಬೇಕು ಎಂದುಕೊಂಡಿದ್ದಳು. ಆದರೆ ಅಲ್ಲಿ ಪರಿಸ್ಥಿತಿ ಸರಿಯಿಲ್ಲ. ಹೀಗಾಗಿ ಈಗ ಫ್ರಾನ್ಸ್‌ನಲ್ಲಿ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಮಾಡಬೇಕು ಎಂದುಕೊಂಡಿದ್ದಾಳೆ’ ಎಂದಿದ್ದಾರೆ.

ನಕಲಿ ವೀಸಾ ಮೂಲಕ ಬಂದಿದ್ದವನಿಗೆ ಕೆನಡಾ ಪೌರತ್ವ : ಜಿ-20 ವೇಳೆ ಪ್ರೆಸಿಡೆಂಟ್‌ ಸೂಟ್‌ ತಿರಸ್ಕರಿಸಿದ್ದ ಟ್ರಡೋ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

18 ದಿನದಲ್ಲಿ 10 ಲಕ್ಷ ಪ್ರಯಾಣಿಕರ ಇಂಡಿಗೋ ಟಿಕೆಟ್‌ ರದ್ದು
ಬೆಂಗ್ಳೂರಲ್ಲಿ ಸಿ-130 ವಿಮಾನ ವಿರ್ವಹಣಾ ಕೇಂದ್ರಕ್ಕೆ ಶಂಕು