
ಹಲ್ಲುಜ್ಜುವ ಪೇಸ್ಟ್‌ನಲ್ಲಿ ಹಲವು ರೀತಿಯ ವೆರೈಟಿಗಳಿವೆ. ಬೇರೆ ಬೇರೆ ಕಂಪನಿಗಳ ಪೇಸ್ಟ್‌ಗಳಲ್ಲದೇ ಕೆಂಪು ನೀಲಿ ಬಿಳಿ, ಕಂದು ಅಂತ ಹಲವು ಬಣ್ಣಗಳ ಹಲವು ರುಚಿಗಳ ಪೇಸ್ಟನ್ನು ನೀವು ಬಳಸಿರಬಹುದು ನೋಡಿರಬಹುದು. ಲವಂಗ, ಏಲಕ್ಕಿ, ಲಿಂಬೆಯ ಅಂಶಗಳು ಪೇಸ್ಟ್‌ನಲ್ಲಿ ಸಾಮಾನ್ಯ ಆದರೆ ಬಹುರಾಷ್ಟ್ರೀಯ ಆಹಾರ ಸಂಸ್ಥೆ ಕೆಎಫ್‌ಸಿ ಈಗ ತನ್ನ ಪ್ರಸಿದ್ಧ ಉತ್ಪನ್ನಗಳಲ್ಲಿ ಒಂದಾದ ಕೆಂಟುಕಿ ಫ್ರೈಡ್ ಚಿಕನ್‌ನ ಫ್ಲೇವರ್(ಪರಿಮಳ)ನ ಹಲ್ಲುಜ್ಜುವ ಪೇಸ್ಟೊಂದನ್ನು ಸಿದ್ಧಪಡಿಸಿದ್ದು, ಅದನ್ನು ಗ್ರಾಹಕರೊಬ್ಬರು ಪ್ರಯತ್ನಿಸಿ ನೋಡಿದ್ದಾರೆ. ಅವರ ವೀಡಿಯೋ ಈಗ ವೈರಲ್ ಆಗಿದೆ.
ಯಾವುದೇ ಮಾಂಸಹಾರಿ ಆಹಾರಪ್ರಿಯರ ಫೇವರಿಟ್ ಆಹಾರದ ಲಿಸ್ಟ್‌ನಲ್ಲಿ ಕೆಎಫ್‌ಸಿ ಫ್ರೈಡ್ ಚಿಕನ್ ಇರುತ್ತದೆ. ಆದರೆ ಚಿಕನ್ ಪರಿಮಳದ ಪೇಸ್ಟ್ ಅಂದ್ರೆ ಯಾರಿಗಾದ್ರೂ ಇಷ್ಟವಾಗುತ್ತಾ? ಗೊತ್ತಿಲ್ಲ, ಆದರೆ ಕೆಎಫ್‌ಸಿ ತನ್ನ ಗ್ರಾಹಕರನ್ನು ಮೆಚ್ಚಿಸುವ ಸಲುವಾಗಿ ಈ ರೀತಿಯ ಕೆಎಫ್‌ಸಿ ಫ್ರೈಡ್ ಚಿಕನ್ ಪ್ಲೇವರ್‌ನ ಪೇಸ್ಟನ್ನು ಸಿದ್ಧಪಡಿಸಿದೆ. ಕೆಎಫ್‌ಸಿ ಹುರಿದ ಕೋಳಿಮಾಂಸದ ರುಚಿಯ ಟೂತ್‌ಪೇಸ್ಟ್ ಅನ್ನು ಪರಿಚಯಿಸಿದೆ ಮತ್ತು ಇದು ಕೆಎಫ್‌ಸಿಯ ಎಲ್ಲಾ 11 ಗಿಡಮೂಲಿಕೆಗಳು ಮತ್ತು ಮಸಾಲೆಗಳಿಂದ ಪ್ರೇರಿತವಾಗಿ ಸಿದ್ಧಗೊಂಡಿದೆ ಎಂದು ನ್ಯೂಯಾರ್ಕ್ ಪೋಸ್ಟ್ ಕೆಎಫ್‌ಸಿ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.
ಈಗ ಈ ಪೇಸ್ಟನ್ನು ಬಳಕೆದಾರರೊಬ್ಬರು ಪ್ರಯತ್ನಿಸಿದ್ದು, ತಮಗಾದ ಅನುಭವ ಹೇಳಿದ್ದಾರೆ. ಕೆಎಫ್‌ಸಿಯ ಫ್ರೈಡ್ ಚಿಕನ್ ಫ್ಲೇವರ್‌ನ ಟೂಥ್‌ಫೇಸ್ಟ್ ಅತ್ಯಂತ ವಿಚಿತ್ರವಾದ ಟೂಥ್‌ಪೇಸ್ಟ್ ಎಂದು ಅವರು ಹೇಳಿದ್ದಾರೆ. ಕೆಎಫ್‌ಸಿ ನಿಜವಾಗಿಯೂ ಫ್ರೈಡ್ ಚಿಕನ್-ಫ್ಲೇವರ್‌ನ ಟೂತ್‌ಪೇಸ್ಟ್ ಅನ್ನು ತಯಾರಿಸಿದೆ ನಾನು ಅದರಿಂದ ಹಲ್ಲುಜ್ಜಿದೆ ಎಂದು ಕೈಲ್ ಕ್ರೂಗರ್ ಎಂಬುವವರು ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ವೀಡಿಯೋದಲ್ಲಿ ಕಾಣಿಸುವಂತೆ ಅವರು, ಟೂತ್‌ಪೇಸ್ಟ್ ಮತ್ತು ಎಲೆಕ್ಟ್ರಿಕ್ ಟೂತ್‌ಬ್ರಶ್ ಕೆಎಫ್‌ಸಿ-ಬಕೆಟ್ ಶೈಲಿಯ ಪ್ಯಾಕೇಜಿಂಗ್‌ನಲ್ಲಿ ಬಂದವು. ನಾನು ಈಗಷ್ಟೇ ಕೆಂಟುಕಿ ಫ್ರೈಡ್ ಚಿಕನ್-ಫ್ಲೇವರ್ಡ್ ಟೂತ್‌ಪೇಸ್ಟ್ ಪಡೆದುಕೊಂಡಿದ್ದೇನೆ ಎಂದು ಅವರು ಕರ್ನಲ್ ಸ್ಯಾಂಡರ್ಸ್ ಮತ್ತು ಕೆಎಫ್‌ಸಿ ಲೋಗೋ ಹೊಂದಿರುವ ಟೂತ್ ಬ್ರಷ್ ಅನ್ನು ಹಿಡಿದುಕೊಂಡು ಹೇಳಿದ್ದಾರೆ. ಟೂತ್‌ಪೇಸ್ಟ್ ಫ್ರೈಡ್ ಚಿಕನ್‌ನಂತೆ ರುಚಿ ಇರುತ್ತದೆ ಎಂದು ನಾನು ಭಾವಿಸುತ್ತೇನೆ ಹೇಳಿದ್ದಾರೆ.
ಆದರೆ ಅದರಲ್ಲಿ ಹಲ್ಲುಜ್ಜಿದ ನಂತರ ಕ್ರೂಗರ್ ಅದು ಹೇಗಿದೆ ಎಂದು ಹೇಳುವಾಗ ಮುಖ ಕಿವುಚಿಕೊಂಡಿದ್ದಾರೆ. ಈ ಟೂಥ್‌ಪೇಸ್ಟ್ ಇನ್ನೂ ನನ್ನ ಬಾಯಲ್ಲಿ ಜಿಡ್ಡಿನ ರುಚಿಯಂತೆ ಉಳಿದಿದೆ ಎಂದು ಹೇಳಿದ್ದಾರೆ. ಕೆಎಫ್‌ಸಿ ಇದನ್ನು ಬಾಯಿಯ ಅರೈಕೆಯ ಬ್ರ್ಯಾಂಡ್ ಹಿಸ್ಮೈಲ್‌ನ ಸಹಯೋಗದೊಂದಿಗೆ ಬಿಡುಗಡೆ ಮಾಡಿದ್ದು, ಈ ಟೂತ್‌ಪೇಸ್ಟ್ ಸೀಮಿತ ಅವಧಿಗೆ ಲಭ್ಯವಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಕೆಎಫ್‌ಸಿ ಒರಿಜಿನಲ್ ರೆಸಿಪಿ ಚಿಕನ್‌ನ ಬಿಸಿ ಬಿಸಿಯಾದ, ರಸಭರಿತವಾದ ತುಂಡನ್ನು ಕಚ್ಚಿದಂತೆ, ಈ ಟೂತ್‌ಪೇಸ್ಟ್ ಅದ್ಭುತವಾಗಿದೆ, ನಿಮ್ಮ ಬಾಯಿಯನ್ನು ತಾಜಾ ಮತ್ತು ಸ್ವಚ್ಛವಾಗಿಡುವ ಮೊದಲು ನಿಮ್ಮ ಹಲ್ಲುಗಳಿಗೆ ಸುವಾಸನೆಯನ್ನು ನೀಡುತ್ತದೆ ಎಂದು ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
7ನೇ ಕ್ಲಾಸ್ ಹುಡ್ಗನಿಂದ ಟೀಚರ್ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ
ಹೈದರಾಬಾದ್: ಗುರುಗಳು ದೇವರ ಸಮಾನ ಎಂಬ ನಂಬಿಕೆ ಇದೆ. ದೇಶದ ನಾಳೆಯ ಪ್ರಜೆ ಎನಿಸುವ ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವ ಗುರುಗಳಿಗೆ ಸಮಾಜದಲ್ಲಿ ಉನ್ನತವಾದ ಗೌರವವಿದೆ. ಗುರುವಿನ ಪಾದ ಹಿಡಿದವನಿಗೆ ಕಷ್ಟಗಳಿಲ್ಲ ಎಂಬುದು ಹಿರಿಯರ ಮಾತು. ಆದರೆ ಇಲ್ಲೊಬ್ಬ 7ನೇ ಕ್ಲಾಸ್‌ನಲ್ಲಿ ಓದ್ತಿದ್ದ ವಿದ್ಯಾರ್ಥಿ ಪಾಠ ಹೇಳಿಕೊಟ್ಟ ಶಿಕ್ಷಕನಿಗೆ ಥಳಿಸಿದ್ದಾನೆ. 12 ವರ್ಷದ ಬಾಲಕನೋರ್ವ ಪರೀಕ್ಷೆಯಲ್ಲಿ ಶಿಕ್ಷಕರಿಗೆ ಸಿಕ್ಕಿಬಿದ್ದ, ನಂತರ ಕಬ್ಬಿಣದ ರಾಡ್‌ನಿಂದ ಶಿಕ್ಷಕನ ಮೇಲೆ ಹಲ್ಲೆ ಮಾಡಿದ್ದಾನೆ. ಇಂತಹ ಆಘಾತಕಾರಿ ಘಟನೆ ನೆರೆಯ ರಾಜ್ಯ ತೆಲಂಗಾಣದಲ್ಲಿ ನಡೆದಿದೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಯೊಬ್ಬ ಅಂತಿಮ ಪರೀಕ್ಷೆಯ ಸಮಯದಲ್ಲಿ ನಕಲು ಮಾಡುವಾಗ ಸಿಕ್ಕಿಬಿದ್ದಿದ್ದಾನೆ. ನಂತರ ಕಬ್ಬಿಣದ ರಾಡ್‌ನಿಂದ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದಾನೆ. ವಿದ್ಯಾರ್ಥಿ ಮಾಡಿದ ಹಲ್ಲೆಯಿಂದ ಶಿಕ್ಷಕನ ತಲೆಗೆ ಸಣ್ಣಪುಟ್ಟ ಗಾಯವಾಗಿದೆ ಆದರೆ ಅಪಾಯದಿಂದ ಪಾರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿ ವಿರುದ್ಧ ಹಲ್ಲೆ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ