ಕೇರಳದಲ್ಲಿ ಅಮಿತ್ ಶಾ ಬಿರುಗಾಳಿ; ಪಿಣರಾಯಿ ವಿಜಯನ್‌ಗೆ ಪ್ರಶ್ನೆಗಳ ಸುರಿಮಳೆ!

By Suvarna NewsFirst Published Mar 7, 2021, 8:36 PM IST
Highlights

ಕೇರಳದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಪ್ರಯತ್ನದಲ್ಲಿರುವ ಬಿಜೆಪಿ ಸತತ ಸಮಾವೇಶ, ರ್ಯಾಲಿ ಆಯೋಜಿಸುತ್ತಿದೆ. ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ರ್ಯಾಲಿ ನಡೆಸಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹಾಗೂ ಸರ್ಕಾರದ ಭ್ರಷ್ಟಾಚಾರ, ಗೋಲ್ಡ್ ಸ್ಮಗ್ಲಿಂಗ್ ಸೇರಿದಂತೆ ಹಲವು ಅಕ್ರಮಗಳ ಕುರಿತು ಸರಣಿ ಸವಾಲು ಹಾಕಿದ್ದಾರೆ.

ತಿರುವನಂತಪುರಂ(ಮಾ.07):  ಕೇರಳದ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಭ್ರಷ್ಟಾಚಾರದಲ್ಲಿ ಕ್ರಾಂತಿ ಮಾಡಿದೆ. ಗೋಲ್ಡ್ ಸ್ಮಗ್ಲಿಂಗ್ ಕೇಸ್ ಸೇರಿದಂತೆ ಸರ್ಕಾರದ ಭ್ರಷ್ಟಾಚಾರದ ಪಟ್ಟಿ ದೊಡ್ದದಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಕೇರಳದ ತಿರುವನಂತಪುರಂದಲ್ಲಿ ಆಯೋಜಿಸಿದ್ದ ಕೇರಳ ವಿಜಯ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಅಮಿತ್ ಶಾ ಭರ್ಜರಿ ಪ್ರಚಾರ ನಡೆಸಿದ್ದಾರೆ.

ಚಿನ್ನ ಸ್ಮಗ್ಲಿಂಗ್‌ನಲ್ಲಿ ಕೇರಳದ ಸಿಎಂ ಭಾಗಿ, ಆರೋಪಿ ಸ್ವಪ್ನಾ ಸ್ಫೋಟಕ ಹೇಳಿಕೆ!.

ಕೇರಳ ಸಾಮಾಜಿಕ ಕ್ರಾಂತಿಯಿಂದಲೇ ಹೆಸರುವಾಸಿಯಾಗಿದೆ. ಆದರೆ ಇದೀಗ ಕೇರಳ ಭ್ರಷ್ಟಾಚಾರ, ರಾಜಕೀಯ ಹಿಂಸೆ ಮತ್ತು ಕೆಟ್ಟ ಆಡಳಿತಕ್ಕೆ ಗುರಿಯಾಗಿದೆ ಎಂದು ಅಮಿತ್ ಶಾ ಹೇಳಿದರು. ಕೇರಳ ಸಂಪೂರ್ಣ ಸಾಕ್ಷರತೆ ಹೊಂದಿದ ಮೊದಲ ರಾಜ್ಯವಾಗಿದೆ. ಆದರೆ ಇದೀಗ ಅಭಿವೃದ್ಧಿಯೇ ನಶಿಸಿಹೋಗಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

 

തിരുവനന്തപുരം ശംഖുമുഖത്ത് യുടെ സമാപന സമ്മേളനത്തെ അഭിസംബോധന ചെയ്യുന്നു. . Addressing the valedictory function of BJP Kerala’s Vijay Yatra in Shanghumugham, Thiruvananthapuram. https://t.co/ryWMobExQe

— Amit Shah (@AmitShah)

ಕೇರಳದಲ್ಲಿ ನಿಂತು ಅಮೇಥಿ, ಉತ್ತರ ಭಾರತ ತೆಗಳಿದ ರಾಹುಲ್ ಗಾಂಧಿಗೆ ಮಂಗಳಾರತಿ!

UDF ಅಧಿಕಾರಕ್ಕೆ ಬಂದಾಗ ಸೌರ ಹಗರಣ ಮಾಡಿತು,  LDF ಅಧಿಕಾರಕ್ಕೆ ಬಂದಾಗ ಗೋಲ್ಡ್ ಸ್ಮಗ್ಮಿಂಗ್, ಡಾಲರ್ ಹಗರಣ ಮಾಡುತ್ತಿದೆ. ಪೈಪೋಟಿಯಲ್ಲಿ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.

ಮೂಲಕ ಸೌಕರ್ಯ ಅಭಿವೃದ್ಧಿ ಹರಿಕಾರ, ಮೆಟ್ರೋಮ್ಯಾನ್ ಇ ಶ್ರೀಧರನ್ ಅಭಿವೃದ್ಧಿಗಾಗಿ ಬಿಜೆಪಿ ಆಯ್ಕೆ ಮಾಡಿಕೊಂಡಿದ್ದಾರೆ ಎಂದರು. ಇದರ ಜೊತೆಗೆ ಗೋಲ್ಡ್ ಸ್ಮಗ್ಮಿಂಗ ಕೇಸ್, ನಿಮ್ಮ ಕಚೇರಿಯಲ್ಲಿ ಈ ಭ್ರಷ್ಟಾಚಾರಕ್ಕೆ 3 ಲಕ್ಷ ವೇತನ ಬೇರೆ ನೀಡಿದ್ದೀರಾ? ಸೇರಿದಂತೆ ಹಲವು ಪ್ರಶ್ನೆಗಳನ್ನು ಪಿರಣರಾಯಿ ವಿಜಯನ್‌ಗೆ ಕೇಳಿದ್ದಾರೆ.

click me!