ಕಾರಿಗೆ ಡಿಕ್ಕಿ ಹೊಡೆದು ಕಾಂಪೌಂಡ್‌ಗೆ ಗುದ್ದಿದ್ದ ಕೇರಳ ಸಾರಿಗೆ ಬಸ್: ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆ

By Anusha Kb  |  First Published Mar 12, 2023, 1:33 PM IST

ಕೇರಳ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದು ಭೀಕರ ಅಪಘಾತಕ್ಕೆ ಒಳಗಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಅಪಘಾತದ ಭೀಕರ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಭಯ ಮೂಡಿಸುತ್ತಿದೆ. 


ತಿರುವನಂತಪುರ: ಕೇರಳ ರಾಜ್ಯ ಸಾರಿಗೆ ಇಲಾಖೆಯ ಬಸ್‌ಗಳು ಅತೀವೇಗಕ್ಕೆ ಖ್ಯಾತಿ ಹಾಗೂ ಕುಖ್ಯಾತಿ ಪಡೆದಿವೆ. ಅಲ್ಲಿನ ಚಾಲಕರು ನಿರ್ವಾಹಕರು ಕೂಡ ಸಮಯದ ನಿರ್ವಹಣೆಗೆ ಖ್ಯಾತಿ ಪಡೆದಿದ್ದಾರೆ. ಇಂತಹ ಕೇರಳ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದು ಭೀಕರ ಅಪಘಾತಕ್ಕೆ ಒಳಗಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಅಪಘಾತದ ಭೀಕರ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಭಯ ಮೂಡಿಸುತ್ತಿದೆ. 

ಸುದ್ದಿಸಂಸ್ಥೆ ಎಎನ್‌ಐ ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದೆ. 37 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಮೊದಲಿಗೆ ವೇಗವಾಗಿ ಬರುತ್ತಿದ್ದ ಕೇರಳ ಸಾರಿಗೆ ಸಂಸ್ಥೆ ಬಸ್‌ ಹಾಗೂ ಕಾರಿನ ಮಧ್ಯೆ ಅಪಘಾತವಾಗಿದೆ. ಕಾರು ಹಾಗೂ ಬಸ್‌ ಎರಡು ವಾಹನಗಳು ಅತೀವೇಗದಲ್ಲಿ ಬಂದು ಮುಖಾಮುಖಿಯಾಗಿದ್ದು, ಕಾರಿಗೆ ಡಿಕ್ಕಿ ಹೊಡೆದ ನಂತರ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿ ಇದ್ದ ಚರ್ಚ್‌ನ ಕಾಂಪೌಂಡ್‌ಗೆ ಡಿಕ್ಕಿ ಹೊಡೆದಿದ್ದು, ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾಂಪೌಂಡ್ ಹಾಗೂ ಕಾಂಪೌಂಡ್ ಮೇಲೆ ನಿರ್ಮಿಸಿದ ಗೋಪುರದಂತಹ ರಚನೆ ಬಸ್ ಮೇಲೆ ಬಿದ್ದಿದೆ. ಈ ಅವಘಡದಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. 

Tap to resize

Latest Videos

Accident: ಮದುವೆ ಮುಗುಸಿ ಮನೆಗೆ ಹೊರಟಿದ್ದ ಮಿನಿ ಬಸ್‌ ಡಿಕ್ಕಿ: ಆಟೋದಲ್ಲಿದ್ದ ಮೂವರು ಸಾವು

ಶನಿವಾರ ಈ ದುರಂತ ನಡೆದಿದೆ. ಕೇರಳದ ಪತ್ತನತ್ತಿಟ್ಟ ಜಿಲ್ಲೆಯ (Pathanamthitta district) ಕಿಝವಲ್ಲೂರ್ (Kizhavallor)ಈ ಅವಘಡ ಸಂಭವಿಸಿದೆ.  ಕಾರಿಗೆ ಡಿಕ್ಕಿ ಹೊಡೆ ಬಳಿಕ ಬಸ್‌, ಸಮೀಪದ ಚರ್ಚ್‌ಗೋಡೆಗೆ ಡಿಕ್ಕಿ ಹೊಡೆದಿದೆ.  ಈ ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು,  ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ವೇಗವಾಗಿ ಬರುತ್ತಿದ್ದ ಬಸ್‌ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರಿಗೆ ಡಿಕ್ಕಿ ಹೊಡೆದು ಉಲ್ಟಾ ತಿರುಗಿದ ಬಸ್ ಸಮೀಪದ ಚರ್ಚ್‌ನ ಕಾಂಪೌಂಡ್‌ಗೆ ಗುದ್ದಿ, ಅದನ್ನು ಕ್ಷಣದಲ್ಲಿ ನೆಲಕ್ಕೆ ಕೆಡವಿದೆ.  ಮಧ್ಯಾಹ್ನ 1.50 ರ ಸುಮಾರಿಗೆ ಈ ಘಟನೆ ನಡೆದಿದ್ದು,  ವರದಿಯ ಪ್ರಕಾರ, ಈ ಅಪಘಾತದಲ್ಲಿ 15 ಜನ ಗಾಯಗೊಂಡಿದ್ದಾರೆ. ಈ ಬಸ್‌ ಪತ್ತನತಿಟ್ಟದಿಂದ ತಿರುವನಂತಪುರಕ್ಕೆ (Thiruvananthapuram)ಕ್ಕೆ ತೆರಳುತ್ತಿದ್ದು, ಕೊಚ್ಚಿ ಪ್ರದೇಶದ ಅಲುವಾದ ಜನರನ್ನು ಕರೆದೊಯ್ಯುತ್ತಿತ್ತು.  ಘಟನೆಯಲ್ಲಿ ಬಸ್‌ ಚಾಲಕ ಹಾಗೂ ಕೆಲವು ಮಹಿಳಾ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮತ್ತೆ ಕೆಲವು ಪ್ರಯಾಣಿಕರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. 

ರಸ್ತೆ ಬದಿ ನಿಂತಿದ್ದ ಟ್ರಕ್‌ಗೆ ಬಸ್ ಡಿಕ್ಕಿ: ನಾಲ್ವರ ಸಾವು, 15ಕ್ಕೂ ಹೆಚ್ಚು ಜನರಿಗೆ ಗಾಯ

| Kerala: A Kerala State Road Transport Corporation bus met with an accident after colliding with a car near Kizhavallor in Pathanamthitta district. Thereafter, the bus rammed into the wall of a church. Injured passengers were rushed to hospital. pic.twitter.com/SiFjOvDLsR

— ANI (@ANI)

 

click me!