
ಕೊಚ್ಚಿ (ಫೆ.13): 17 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ದೃಶ್ಯಗಳನ್ನು ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿ ಅದನ್ನು ತನ್ನ ಸ್ನೇಹಿತನಿಗೆ ರವಾನಿಸಿದ ಪ್ರಕರಣದಲ್ಲಿ ಇಬ್ಬರು ಯುವಕರನ್ನು ಬಂಧಿಸಲಾಗಿದೆ. ಈ ಘಟನೆ ಪತ್ತನಂತಿಟ್ಟದ ಕೊನ್ನಿಯಲ್ಲಿ ನಡೆದಿದೆ. ಕೊನ್ನಿ ಪೊಲೀಸರು ತನ್ನಿಥೋಡ್ ಮೂಲದ ಅನಂತು (26) ಮತ್ತು ಅಭಿಜಿತ್ (28) ಅವರನ್ನು ಬಂಧಿಸಿದ್ದಾರೆ.
17 ವರ್ಷದ ಬಾಲಕಿಯನ್ನು ಮೊದಲು ಪ್ರೀತಿ ಮಾಡಿದ್ದು ಅಭಿಜಿತ್. ಆಕೆ ಆತ್ಮೀಯಳಾದ ನಂತರ ಬಾಲಕಿಯನ್ನು ಪತ್ತನಂತಿಟ್ಟದ ಲಾಡ್ಜ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ತಮ್ಮಿಬ್ಬರ ನಡುವಿನ ಖಾಸಗಿ ದೃಶ್ಯಗಳನ್ನು ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿದ್ದ ಅಭಿಜಿತ್ ಈ ವಿಡಿಯೋವನ್ನು ಆಪ್ತ ಸ್ನೇಹಿತ ಅನಂತುಗೆ ಕಳಿಸಿದ್ದಾನೆ.
ಈ ವಿಡಿಯೋ ನೋಡಿದ ಬಳಿಕ ಅನಂತುಗೆ ಕೂಡ ಇದ ಹುಡುಗಿಯ ಜೊತೆ ಸೆ*ಕ್ಸ ಮಾಡಬೇಕು ಎಂದು ಆಸೆಯಾಗಿದೆ. ಅಭಿಜಿತ್‌ನಿಂದ ಹುಡುಗಿಯ ವಾಟ್ಸಾಪ್ ನಂಬರ್ ಪಡೆದುಕೊಂಡ ಅನಂತು, ಸ್ನೇಹಿತ ಕಳಿಸಿದ್ದ ಬೆತ್ತಲೆ ವಿಡಿಯೋವನ್ನು ಅಕೆಗೆ ಕಳಿಸಿ ಬೆದರಿಕೆ ಹಾಕಿದ್ದಾನೆ.
ವಿಡಿಯೋ ಕಳಿಸಿದ ಅನಂತು, ನನ್ನ ಜೊತೆಗೂ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಾಯ ಮಾಡಿದ್ದೇನೆ. ಇಲ್ಲದೇ ಇದ್ದಲ್ಲಿ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಸಿದ್ದಾನೆ. ಈ ಬೆದರಿಕೆಯಿಂದ ಹೆದರಿದ ಹುಡುಗಿ, ಅನಂತು ಜೊತೆ ಲೈಂಗಿಕ ಸಂಬಂಧಕ್ಕೆ ಒಪ್ಪಿಕೊಂಡಿದ್ದಾಳೆ. ಇವರಿಬ್ಬರೂ ಕೂಡ ಪೂಂಗಾವುವಿನ ಬಾಡಿಗೆ ಮನೆಯೊಂದರಲ್ಲಿ ಆಪ್ತ ಸಮಯ ಕಳೆದಿದ್ದಾರೆ. ಇಲ್ಲೂ ಕೂಡ ಅನಂತು, ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕ್ಷಣಗಳನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದ.
ಈಗ ಕೊನ್ನಿ ಪೊಲೀಸರು ಎರ್ನಾಕುಲಂನ ಅಭಿಜಿತ್ ಮತ್ತು ಕೊಟ್ಟಾಯಂನ ಬಾಡಿಗೆ ಮನೆಯಿಂದ ಅನಂತು ಅವರನ್ನು ಬಂಧಿಸಿದ್ದಾರೆ. ಇನ್ಸ್‌ಪೆಕ್ಟರ್ ರಾಜಗೋಪಾಲ್, ಎಸ್‌ಐ ಶ್ಯಾಮ್ ಮತ್ತು ಪೊಲೀಸ್ ಅಧಿಕಾರಿಗಳಾದ ಸೈಫುದ್ದೀನ್, ಅಭಿಲಾಷ್ ಮತ್ತು ಅಮಲ್ ಅವರನ್ನೊಳಗೊಂಡ ತಂಡವು ಆರೋಪಿಗಳನ್ನು ಬಂಧಿಸಿತು. ನ್ಯಾಯಾಲಯಕ್ಕೆ ಹಾಜರುಪಡಿಸಿದ ಇಬ್ಬರೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ