ಮುಸ್ಲಿಂ ಮಹಿಳೆ ಎಂದು ಗೊತ್ತಾಗುತ್ತಿದ್ದಂತೆ ಕೊಟ್ಟ ಹೊದಿಕೆ ಮರಳಿ ಪಡೆದ ಮಾಜಿ ಬಿಜೆಪಿ ಶಾಸಕ

Published : Feb 23, 2026, 04:44 PM IST
Rajasthan

ಸಾರಾಂಶ

ಮುಸ್ಲಿಂ ಮಹಿಳೆ ಎಂದು ಗೊತ್ತಾಗುತ್ತಿದ್ದಂತೆ ಕೊಟ್ಟ ಹೊದಿಕೆ ಮರಳಿ ಪಡೆ ಮಾಜಿ ಬಿಜೆಪಿ ಶಾಸಕ, ಮೋದಿಗೆ ಬಯ್ಯುವವರಿಗ ಹೋದಿಕೆ ಪಡೆಯುವ ಅರ್ಹತೆ ಇಲ್ಲಾ ಎಂದು ಮರಳಿ ಪಡೆದ ಘಟನೆ ನಡೆದಿದೆ. ಇದು ಕೋಲಾಹಲಕ್ಕೆ ಕಾರಣವಾಗಿದೆ. 

ಜೈಪುರ (ಫೆ.23) ರಾಜಕಾರಣಿಗಳು ಚುನಾವಣೆ ವೇಳೆ, ಚುನಾವಣೆ ಬಳಿಕ ಮತದಾರರ ಸೆಳೆಯಲು ಕಸರತ್ತು ಮಾಡುವುದು ಹೋಸದೇನಲ್ಲ.ಯಾವುದೇ ಸಮಾಜಿಕ ಕಾರ್ಯ, ಯೋಜನೆ ಜಾರಿಗೊಳಿಸಿದರೂ ಅದರೊಳಗೆ ಒಂದು ರಾಜಕೀಯ ಅಡಗಿರುತ್ತೆ. ಇತ್ತ ಬಿಜೆಪಿಯ ಮಾಜಿ ಶಾಸಕ ಹೊದಿಕೆ ಹಂಚುವ ಕಾರ್ಯಕ್ರಮ ಆಯೋಜಿಸಿದ್ದಾರೆ. ನಿರ್ಗತಿಕರಿಗೆ, ಸಾರ್ವಜನಿಕ ಪ್ರದೇಶದಲ್ಲಿ ಕೊರೆವ ಚಳಿಯಲ್ಲಿ ಮಲಗುವ ಹಲವರಿಗೆ ಮಾಜಿ ಶಾಸಕ ಹೊದಿಕೆ ಹಂಚಿದ್ದಾರೆ. ಹೀಗೆ ಹಂಚುತ್ತಿದ್ದ ವೇಳೆ ತಾನು ಹಂಚಿದ ಹೊದಿಕೆ ಮುಸ್ಲಿಮ್ ಮಹಿಳೆಗೆ ಹೋಗಿದೆ ಎಂದು ಗೊತ್ತಾಗುತ್ತಿದ್ದಂತೆ ತಕ್ಷಣವೇ ವಾಪಸ್ ಪಡೆದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಪ್ರತಿ ದಿನ ಪ್ರಧಾನಿ ಮೋದಿಗೆ ಬೈಯ್ಯುವವರು ಹೊದಿಕೆ ಪಡೆಯಲು ಅರ್ಹರಲ್ಲ ಎಂದಿದ್ದಾರೆ.

ರಾಜಸ್ಥಾನದ ಬಿಜೆಪಿ ಮಾಜಿ ಶಾಸಕ ಸುಕ್ಬೀರ್ ಸಿಂಗ್ ಜೌನಪುರಿಯಾ ಇದೀಗ ವಿವಾದದ ಸುಳಿಗೆ ಸಿಲುಕಿದ್ದಾರೆ. ಸುಕ್ಬೀರ್ ಸಿಂಗ್ ತನ್ನ ಕ್ಷೇತ್ರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಮಂದಿಗೆ ನೆರವು ನೀಡಲು ಮುಂದಾಗಿದ್ದಾರೆ. ಪ್ರತಿ ತಿಂಗಳು ಒಂದೊಂದು ರೀತಿಯಲ್ಲಿ ಸುಕ್ಬೀರ್ ಸಿಂಗ್ ನೆರವು ನೀಡತ್ತಿದ್ದಾರೆ. ಆರ್ಥಿಕವಾಗಿ ಸೇರಿದಂತೆ ಇತರ ರೂಪಗಳಲ್ಲಿ ನರೆವು ನೀಡುತ್ತಿದ್ದಾರೆ. ಆದರೆ ಈ ಬಾರಿಯ ನೆರವು ವಿವಾದಕ್ಕೆ ಗುರಿಯಾಗಿದೆ.

ಹೆಸರು ಕೇಳಿದ ಶಾಸಕ

ಸುಕ್ಬೀರ್ ಸಿಂಗ್ ತನ್ನ ಸಿಬ್ಬಂದಿಗಳ ಜೊತೆ ನಿರ್ಗತಿಕರಿಗೆ ಹೊದಿಕೆ ಹಂಚಿದ್ದಾರೆ. ಉಚಿತವಾಗಿ ಹೊದಿಕೆ ಹಂಚುತ್ತಾ ಬಂದಿದ್ದಾರೆ. ಈ ವೇಳೆ ಅನುಮಾನಗೊಂಡ ಸುಕ್ಬೀರ್ ಸಿಂಗ್ ಹೊದಿಕೆ ಹಂಚಿದ ಮಹಿಳೆಯ ಹೆಸರು ಕೇಳುವಂತೆ ಸಿಬ್ಬಂದಿಗೆ ಸೂಚಿಸಿದ್ದಾರೆ. ಸುಕರನ್ ಖಾನ್ ಅನ್ನೋ ಮಹಿಳೆ ತನ್ನ ಹೆಸರು ಹೇಳಿದ್ದಾಳೆ. ಈ ಹೆಸರು ಕೇಳುತ್ತಿದ್ದಂತೆ ಸುಕ್ಬೀರ್ ಸಿಂಗ್ ಕೆರಳಿ ಕೆಂಡವಾಗಿದ್ದಾರೆ.

ಪ್ರಧಾನಿ ಮೋದಿ ಬಯ್ಯುವವರು ನಾನು ಕೊಡುವ ಹೊದಿಕೆ ಪಡೆಯಲು ಅರ್ಹರಲ್ಲ. ನಿಮಗೆ ಬೇಜಾರಾದರೂ ನನಗೆ ಏನೂ ಮಾಡಲು ಸಾಧ್ಯವಿಲ್ಲ. ಮೋದಿ ಯೋಜನೆ ವಿರೋಧಿಸುತ್ತೀರಿ, ಮೋದಿಗೆ ಬಯ್ಯುತ್ತೀರಿ. ಮೋದಿಗೆ ಬೈದು ಇದೀಗ ಹೊದಿಕೆ ಪಡೆಯಲು ಸಾಧ್ಯವಿಲ್ಲ ಎಂದು ಕ್ಯಾಮೆರಾ ಮುಂದೆ ಹೇಳಿದ್ದಾರೆ. ಇದು ಸರ್ಕಾರದ ಯೋಜನೆಯಲ್ಲ, ನಾನು ವೈಯುಕ್ತಿಕವಾಗಿ ನೀಡುತ್ತಿರುವ ಯೋಜನೆ. ನನ್ನ ಯೋಜನೆಯಲ್ಲಿ ಮೋದಿಗೆ ಬೈದು ಫಲಾನುಭವಿಗಳಾಗಲು ಸಾಧ್ಯವಿಲ್ಲ ಎಂದು ತಮ್ಮ ಹೇಳಿಕೆಗೆ ಸಮರ್ಥನೆಯನ್ನೂ ನೀಡಿದ್ದಾರೆ.

ಈ ವಿಡಿಯೋ ಕೋಲಾಹಲ ಸೃಷ್ಟಿಸಿದೆ. ಹಲವರು ಸುಕ್ಬೀರ್ ಸಿಂಗ್ ನಡೆಯನ್ನು ಟೀಕಿಸಿದ್ದಾರೆ. ಕಾಂಗ್ರೆಸ್ ನಾಯಕರು ಸುಕ್ಬೀರ್ ವಿರುದ್ದ ಮುಗಿ ಬಿದ್ದಿದ್ದಾರೆ.

ಉಚಿತವಾಗಿ ಹಂಚಿದ ಬಳಿಕ ಮರಳಿ ಪಡೆಯಬಾರದು. ಈ ಮಾಜಿ ಶಾಸಕರು ಮೊದಲೇ ಇದು ಹಿಂದೂಗಳಿಗೆ ಮಾತ್ರ ಎಂದು ಘೋಷಿಸಬೇಕಿತ್ತು. ಕೊಟ್ಟ ಬಳಿಕ ಮರಳಿ ಪಡೆಯುವುದು ಸರಿಯಾದ ನಿರ್ಧಾರವಲ್ಲ ಎಂದು ಹಲವರು ಸುಕ್ಬೀರ್ ಸಿಂಗ್ ನಡೆಯನ್ನು ಪ್ರಶ್ನಿಸಿದ್ದಾರೆ.

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪ್ಲಾನ್ ಮುಗಿದರೆ ಇನ್‌ಕಮಿಂಗ್ ಕಾಲ್ ಕಟ್ ಯಾಕೆ? ಸಂಸತ್ತಿನಲ್ಲಿ ಸಂಸದರ ಪ್ರಶ್ನೆಗೆ ಭಾರಿ ಬೆಂಬಲ
ಛೀ ಇದೆಂಥಾ ಅಸಹ್ಯ ! ತಂದೂರಿ ರೊಟ್ಟಿಗೆ ಎಂಜಲು ಹಾಕ್ತಿದ್ದ ಭೂಪ, ವಿಡಿಯೋ ವೈರಲ್