ಗಾಂಜಾ ಬೀಡಿ ಹಚ್ಚಲು ಅಬಕಾರಿ ಅಧಿಕಾರಿ ಬಳಿಯೇ ಬೆಂಕಿಕಡ್ಡಿ ಕೇಳಿದ ವಿದ್ಯಾರ್ಥಿಗಳು, ಆಮೇಲೆ ಆಗಿದ್ದೇನು?

By Santosh NaikFirst Published Oct 25, 2024, 8:01 PM IST
Highlights

ತ್ರಿಶೂರ್‌ನಿಂದ ಮುನ್ನಾರ್‌ಗೆ ಶಾಲಾ ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿಗಳ ಗುಂಪೊಂದು ಗಾಂಜಾ ಮತ್ತು ಗಾಂಜಾ ಎಣ್ಣೆಯೊಂದಿಗೆ ಸಿಕ್ಕಿಬಿದ್ದ ಘಟನೆ ನಡೆದಿದೆ. ಮ್ಯಾಚ್‌ಬಾಕ್ಸ್‌ ಕೇಳಲು ಹೋದ ಬಿಲ್ಡಿಂಗ್‌ ಅಬಕಾರಿ ಇಲಾಖೆಯ ಕಚೇರಿ ಎಂದು ತಿಳಿದು ವಿದ್ಯಾರ್ಥಿಗಳು ಓಟಕಿತ್ತಿದ್ದಾರೆ. ಅಬಕಾರಿ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್‌ ನೀಡಿ ಶಿಕ್ಷಕರಿಗೆ ಹಸ್ತಾಂತರಿಸಿದ್ದಾರೆ.

ಕೊಚ್ಚಿ (ಅ.25):ಶಾಲೆಯ ವತಿಯಿಂದ ತ್ರಿಶೂರ್‌ನಿಂದ ಹಿಲ್‌ ಸ್ಟೇಷನ್‌ ಮುನ್ನಾರ್‌ಗೆ ಟ್ರಿಪ್‌ ನಿಗದಿ ಮಾಡಲಾಗಿತ್ತು.ಇದರಲ್ಲಿ ಒಂದು ಅಪ್ರಾಪ್ತ ವಿದ್ಯಾರ್ಥಿಗಳ ಗುಂಪೊಂದು ಎಡವಟ್ಟು ಮಾಡಿಕೊಂಡಿದೆ. ಐದು ಗ್ರಾಮ್‌ ಗಾಂಜಾ ಹಾಗೂ ಗಾಂಜಾ ಎಣ್ಣೆಯೊಂದಿಗೆ ಅಬಕಾರಿ ಇಲಾಖೆಯ ಅಧಿಕಾರಿಗಳ ಕೈಯಲ್ಲಿಯೇ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ಈ ವಿಚಾರವಾಗಿ ಇಬ್ಬರು ಅಪ್ರಾಪ್ತ ಬಾಲಕರ ಮೇಲೆ ಕೇಸ್‌ಅನ್ನೂ ದಾಖಲು ಮಾಡಲಾಗಿದೆ. ಗಾಂಜಾ ಹಾಗೂ ಗಾಂಜಾ ಎಣ್ಣೆಯನ್ನು ಇರಿಸಿಕೊಂಡಿದ್ದ ಆರೋಪವನ್ನು ಇವರ ಮೇಲೆ ಹೊರಿಸಲಾಗಿದೆ. ಹಿಲ್‌ಸ್ಟೇಷನ್‌ಗೆ ಪ್ರಯಾಣ ಮಾಡುತ್ತಿದ್ದ ವೇಳೆ ಶಾಲಾ ವಿದ್ಯಾರ್ಥಿಗಳಿದ್ದ ಬಸ್‌, ಆಹಾರಕ್ಕಾಗಿ ಒಂದು ರೆಸ್ಟೋರೆಂಟ್‌ನ ಎದುರು ನಿಂತಿದೆ. ಊಟ ಮಾಡಿದ ಬೆಳಿಕ ಕೆಲವು ವಿದ್ಯಾರ್ಥಿಗಳಿಗೆ ಗಾಂಜಾ ತುಂಬಿದ್ದ ಬೀಡಿ ಸೇದಬೇಕು ಎಂದು ಮನಸ್ಸಾಗಿದೆ. ಅವರೊಂದಿಗೆ ಸಣ್ಣ ಪ್ರಮಾಣದಲ್ಲಿ ಗಾಂಜಾ ಎಣ್ಣೆ ಕೂಡ ಇತ್ತು. ಆದರೆ, ಬೀಡಿ ಹಚ್ಚಲು ಯಾರ ಬಳಿಯಲ್ಲೂ ಮ್ಯಾಚ್‌ಬಾಕ್ಸ್‌ ಇದ್ದಿರಲಿಲ್ಲ. ಈ ವೇಳೆ ಸಮೀಪದಲ್ಲಿಯೇ ಇದ್ದ ಒಂದು ಬಿಲ್ಡಿಂಗ್‌ಅನ್ನು ಕಂಡಿದ್ದಾರೆ. ವರ್ಕ್‌ಶಾಪ್‌ ಎಂದುಕೊಂಡು ಅವರು ಈ ಬಿಲ್ಡಿಂಗ್‌ನ ಒಳಹೊಕ್ಕಿದ್ದಾರೆ.

ಬಿಲ್ಡಿಂಗ್‌ನ ಒಳ ಹೊಕ್ಕ ಬಳಿಕ ಅಲ್ಲಿದ್ದ ವ್ಯಕ್ತಿಯೊಬ್ಬನ ಬಳಿ ಮ್ಯಾಚ್‌ ಬಾಕ್ಸ್‌ ಕೇಳಿದ್ದಾರೆ. ಅವರ ದುರಾದೃಷ್ಟಕ್ಕೆ ಇವರು ಯಾರ ಬಳಿ ಮ್ಯಾಚ್‌ ಬಾಕ್ಸ್‌ ಕೇಳಿದ್ದರೋ, ಆತ ಅಬಕಾರಿ ಇಲಾಖೆಯ ಅಧಿಕಾರಿಯಾಗಿದ್ದ. ಮುಂದಾಗುವ ಅಪಾಯವನ್ನು ಅರಿತ ವಿದ್ಯಾರ್ಥಿಗಳು ಅಲ್ಲಿಂದ ಓಟಕಿತ್ತಿದ್ದಾರೆ. ಆದರೆ, ಅವರನ್ನು ಹಿಡಿಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದರು.ಆ ಬಳಿಕವೇ ಅವರಿಗೆ ತಾವು ಹೊಕ್ಕಿದ್ದು ಯಾವುದೇ ವರ್ಕ್‌ಶಾಪ್‌ ಬಿಲ್ಡಿಂಗ್‌ ಅಲ್ಲ, ಅದು ಅಬಕಾರಿ ಇಲಾಖೆಯ ಆಫೀಸ್‌ ಎನ್ನುವುದು ಗೊತ್ತಾಗಿದೆ.

Latest Videos

ಅಕ್ರಮ ಮದ್ಯ, ಡ್ರಗ್ಸ್‌ ಹಾಗೂ ನಿಷೇಧಿತ ಮಾದಕವಸ್ತುಗಳಿಗೆ ದೇಶದ ಅಬಕಾರಿ ಇಲಾಖೆಗಳೇ ವಾಚ್‌ಡಾಗ್‌ ಆಗಿ ಕೆಲಸ ಮಾಡುತ್ತದೆ. ಅಬಕಾರಿ ಅಧಿಕಾರಿಗಳು ಬಾಲಕರನ್ನು ವಶಕ್ಕೆ ತೆಗೆದುಕೊಂಡ ನಂತರ, ಅಪ್ರಾಪ್ತರಿಗೆ ಕೌನ್ಸೆಲಿಂಗ್ ನೀಡಲಾಯಿತು. ನಂತರ ವಿದ್ಯಾರ್ಥಿಗಳನ್ನು ಅವರ ಜೊತೆಗಿದ್ದ ಶಿಕ್ಷಕರಿಗೆ ಹಸ್ತಾಂತರ ಮಾಡಲಾಗಿದೆ. ಹಾಗಿದ್ದರೂ, ಅಬಕಾರಿ ಅಧಿಕಾರಿಗಳು ಇಬ್ಬರು ವಿದ್ಯಾರ್ಥಿಗಳ ವಿರುದ್ಧ ಬಾಲನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಸಂಬಂಧಪಟ್ಟ ಸಂಸ್ಥೆಗೆ ಪ್ರಕರಣವನ್ನು ಹಸ್ತಾಂತರಿಸಿದ್ದಾರೆ.

Halekai House: ಸಮುದ್ರಮುಖಿಯಾಗಿರುವ ರತನ್‌ ಟಾಟಾ ₹150 ಕೋಟಿ ಮೌಲ್ಯದ ಮನೆಗೆ ಈಗ ಇವರೇ ಮಾಲೀಕರು!

ಇತ್ತೀಚೆಗೆ ಕೇರಳದಲ್ಲಿ ಗಾಂಜಾ ಮತ್ತು ಇತರ ಮಾದಕ ದ್ರವ್ಯಗಳ ಬಳಕೆ ಹೆಚ್ಚಾಗುತ್ತಿದೆ ಎನ್ನುವ ವರದಿಗಳಿವೆ. ಅಂತೆಯೇ, ಶುಕ್ರವಾರ ಬೆಳಿಗ್ಗೆ ಅಂತಹ ಉತ್ಪನ್ನಗಳ ವಶಪಡಿಸಿಕೊಳ್ಳುವಿಕೆ ಹೆಚ್ಚಿದೆ, ಅಬಕಾರಿ ಅಧಿಕಾರಿಗಳು ಸುಳಿವಿನ ಮೇರೆಗೆ ಚೆನ್ನೈನಿಂದ ರೈಲಿನಲ್ಲಿ ಪ್ರಯಾಣಿಸಿ ವಡಕರ ರೈಲ್ವೆ ನಿಲ್ದಾಣದಲ್ಲಿ ಒಂಬತ್ತು ಕೆ.ಜಿ ಗಾಂಜಾ ಹೊಂದಿದ್ದ ಇಬ್ಬರು ವಲಸೆ ಕಾರ್ಮಿಕರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮಲಯಾಳಂ ಚಿತ್ರರಂಗದ ಮಹಿಳೆಯರ ದಯನೀಯ ಸ್ಥಿತಿಗಳ ಬಗ್ಗೆ ತನಿಖೆ ನಡೆಸಿದ ಈಗ  ಹೇಮಾ ಸಮಿತಿಯ ವರದಿಯ ಪ್ರಕಾರ, ಚಲನಚಿತ್ರೋದ್ಯಮವು ಡ್ರಗ್ಸ್ ಹಿಡಿತದಲ್ಲಿದೆ ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ.

10 ಸಾವಿರ ಕೋಟಿಯ ವಿಲ್‌ನಲ್ಲಿ ನಂಬಿಕಸ್ತ ಗೆಳೆಯ ಶಂತನು ನಾಯ್ಡುರನ್ನು ಮರೆಯದ ರತನ್‌ ಟಾಟಾ!

click me!