
ತಿರುವನಂತಪುರಂ: ನನಗೆ ಐದು ಸಾವಿರ ಪ್ರೀತಿ ಇತ್ತು ಅಂತ ಗಣೇಶ್ ಹೇಳಿದ್ದು ನನಗೆ ಅತೀ ಹೆಚ್ಚು ನೋವು ಕೊಟ್ಟಿತ್ತು ಎಂದು ಅವರ ಪತ್ನಿ ಬಿಂದು ಮೆನನ್ ಹೇಳಿದ್ದಾರೆ. ಆದರೆ, ಗಣೇಶ್ ಮೊದಲು ನನ್ನ ಸಹೋದರಿಗೆ ಕರೆ ಮಾಡಿದ್ದರು. ನಂತರ ನನಗೆ ನೇರವಾಗಿ ನನ್ನೊಂದಿಗೆ ಮಾತನಾಡಿ ಕ್ಷಮೆ ಕೇಳಿದರು. ಸದ್ಯ ಈ ಸಮಸ್ಯೆ ಬಗೆಹರಿದಿದೆ ಎಂದು ಬಿಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ನಾನು ಗಣೇಶ್ ಅವರ ಫೋನ್ ಕಾಲ್‌ಗಾಗಿಯೇ ಕಾಯುತ್ತಿದ್ದೆ. ನನ್ನೊಂದಿಗೆ ತುಂಬಾ ಭಾವುಕರಾಗಿ ಮಾತನಾಡಿದರು. ಕಳೆದ ಕೆಲವು ದಿನಗಳಲ್ಲಿ ಈ ಘಟನೆ ಬಗ್ಗೆ ನಾನು ಕೂಡ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದೆ ಎಂದು ಬಿಂದು ಒಪ್ಪಿಕೊಂಡಿದ್ದಾರೆ. ಈ ವಿವಾದವನ್ನು ಇನ್ನು ಮುಂದೆ ಬೆಳೆಸಲು ನನಗೆ ಇಷ್ಟವಿಲ್ಲ ಎಂದು ಹೇಳಿರುವ ಬಿಂದು, ನಾನು ಅವರೊಂದಿಗೆ ಬದುಕಬೇಕಾದವಳು. ಸಚಿವರು ಸಾರ್ವಜನಿಕರ ಕ್ಷಮೆ ಕೇಳುವ ಅಗತ್ಯವಿಲ್ಲ. ಇದು ನಮ್ಮ ವೈಯಕ್ತಿಕ ವಿಷಯ ಎಂದು ಸ್ಪಷ್ಟಪಡಿಸಿದ್ದಾರೆ.
ಕೇರಳದಲ್ಲಿ ದೊಡ್ಡ ಕೋಲಾಹಲ ಸೃಷ್ಟಿಸಿದ್ದ ಗಣೇಶ್‌ಕುಮಾರ್ ವಿವಾದ ಈಗ ಸುಖಾಂತ್ಯ ಕಂಡಿದೆ. ಪತ್ನಿ ಬಿಂದು ಮೆನನ್ ಅವರನ್ನೇ ಸಂಪರ್ಕಿಸಿ ಸಚಿವರು ಕ್ಷಮೆಯಾಚಿಸಿದ್ದಾರೆ. ಪತ್ನಿಯೊಂದಿಗಿನ ಸಮಸ್ಯೆ ಬಹಿರಂಗವಾದ ನಂತರ ಗಣೇಶ್‌ಕುಮಾರ್ ತೀವ್ರ ಒತ್ತಡಕ್ಕೆ ಸಿಲುಕಿದ್ದರು. ಮಿತ್ರಪಕ್ಷಗಳು ಕೂಡ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದವು. ಈ ನಡುವೆಯೇ ಈಗ ಸಂಧಾನ ಯಶಸ್ವಿಯಾಗಿದೆ. ಈ ವಿವಾದವನ್ನು ಇಲ್ಲಿಗೆ ಮುಗಿಸಬೇಕು ಎಂದು ಗಣೇಶ್ ಕುಮಾರ್ ಅವರ ಪತ್ನಿ ಬಿಂದು ಮೆನನ್ ಮನವಿ ಮಾಡಿಕೊಂಡಿದ್ದಾರೆ.
ಸಚಿವ ಕೆ.ಬಿ. ಗಣೇಶ್ ಕುಮಾರ್ ಮತ್ತು ಅವರ ಪತ್ನಿ ನಡುವಿನ ಸಮಸ್ಯೆ ಕೇವಲ ಕ್ಷಮೆಯಾಚನೆಯಿಂದ ಬಗೆಹರಿಯುವುದಿಲ್ಲ. ಗಣೇಶ್ ಕುಮಾರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ. ರಾಜೀನಾಮೆಗೆ ಒತ್ತಾಯಿಸಿ ಕೇರಳ ಯುವ ಕಾಂಗ್ರೆಸ್ ತಿರುವನಂಪುರದಲ್ಲಿ ಪ್ರತಿಭಟನೆ ನಡೆಸಲು ಪ್ಲಾನ್ ಮಾಡಿಕೊಂಡಿದೆ. ಸಚಿವರ ಪತ್ನಿ ದೂರು ನೀಡಿದ ನಂತರವೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಪೊಲೀಸರು ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯುತ್ನಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಇದನ್ನೂ ಓದಿ: ಅಯ್ಯೋ ವಿಧಿಯೇ ಅಮ್ಮನಿಗೆ ಜೀವ ನೀಡಿ ಉಸಿರು ಚೆಲ್ಲಿದ ಮಗ ಲಿವರ್ ದಾನದ ಬಳಿಕ ಮಗ ಸಾವು ಬದುಕುಳಿದ ತಾಯಿ
ಗಣೇಶ್ ಕುಮಾರ್ ವಿವಾದದಲ್ಲಿ ಮುಖ್ಯಮಂತ್ರಿ ಪುತ್ರಿ ವೀಣಾ ವಿಜಯನ್ ಮತ್ತು ಮಾಜಿ ಡಿಜಿಪಿ ಆರ್. ಶ್ರೀಲೇಖಾ ವಿರುದ್ಧ ಯುವ ಕಾಂಗ್ರೆಸ್ ಡಿಜಿಪಿಗೆ ದೂರು ನೀಡಿದೆ. ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಬಿನು ಚುಲ್ಲಿ ಈ ದೂರು ದಾಖಲಿಸಿದ್ದಾರೆ. ಗಂಭೀರ ಅಪರಾಧ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಲಾಗಿದೆ ಎಂದ ಕಾಂಗ್ರೆಸ್ ದೂರಿನಲ್ಲಿ ಉಲ್ಲೇಖಿಸಿದೆ.
ಇದನ್ನೂ ಓದಿ: ಪೋಷಕರನ್ನು ಕರೆಸಿ ಬೈದಿದ್ದಕ್ಕೆ ನೇಣು ಬಿಗಿದುಕೊಂಡ ಅರವಿಂದ್; ವಿದ್ಯಾರ್ಥಿಗಳ ಪ್ರತಿಭಟನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ