ಟೆರೇಸ್‌ನಿಂದ ಕೆಳಕ್ಕೆ ಬೀಳುತ್ತಿದ್ದ ತಮ್ಮನ ಪಾಲಿಗೆ ಹೀರೋ ಆದ ಅಣ್ಣ..! ವಿಡಿಯೋ ನೋಡಿ..

By BK AshwinFirst Published Aug 5, 2022, 5:50 PM IST
Highlights

ಟೆರೇಸ್‌ನಿಂದ ಕೆಳಗೆ ಬೀಳುತ್ತಿದ್ದ ತಮ್ಮನ ಪಾಲಿಗೆ ಅಣ್ಣ ಸೂಪರ್‌ ಹೀರೋ ಆಗಿರುವ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿದೆ. ಇತ್ತೀಚೆಗೆ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 

ಕೆಲವೊಂದು ಆಕಸ್ಮಿಕ, ವಿಚಿತ್ರ ಘಟನೆಗಳು ವರದಿಯಾಗುತ್ತಿರುತ್ತದೆ. ಅಲ್ಲದೆ, ಇಂಟರ್‌ನೆಟ್‌ನಲ್ಲಿ ಅದರಲ್ಲೂ ಪ್ರಮುಖವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ವಿಚಿತ್ರ ಘಟನೆಗಳ ವಿಡಿಯೋಗಳು ಆಗಾಗ ವೈರಲ್‌ ಆಗುತ್ತಿರುತ್ತವೆ. ಇದೇ ರೀತಿ, ಕೇರಳದ ಮಲಪ್ಪುರಂನಲ್ಲಿ ಇತ್ತೀಚೆಗೆ ನಡೆದ ಘಟನೆಯ ವಿಡಿಯೋವೊಂದನ್ನು ನೀವು ನೋಡಲೇಬೇಕು. ಇದನ್ನು ನೋಡಿದರೆ ನಿಮಗೆ ಒಂದು ಕ್ಷಣ ಗಾಬರಿಯಾಗುವುದಂತೂ ನಿಜ. 

ಕೇರಳದ ಬಾಲಕನೊಬ್ಬ ಟೆರೇಸ್‌ ಅನ್ನು ಕ್ಲೀನ್‌ ಮಾಡುತ್ತಿದ್ದ ವೇಳೆ ಆಯ ತಪ್ಪಿ ಕೆಳಕ್ಕೆ ಬೀಳುತ್ತಾನೆ. ಆದರೆ, ಅಲ್ಲೇ ಇದ್ದ ಅಣ್ಣ ತನ್ನ ತಮ್ಮ ಕೆಳಕ್ಕೆ ಬೀಳದಂತೆ ನೋಡಿಕೊಂಡಿದ್ದಾನೆ. ಹೇಗೆ ಗೊತ್ತಾ..? ಆತನನ್ನು ಹಿಡಿಯುವ ಮೂಲಕ. ಹೌದು, ಕೇರಳದ ಮಲಪ್ಪುರಂನಲ್ಲಿ ಈ ಘಟನೆ ನಡೆದಿದ್ದು, ಸಿಸಿ ಕ್ಯಾಮೆರಾದಲ್ಲಿ ಈ ಘಟನೆ ಸೆರೆಯಾಗಿದೆ. ನಂತರ, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗುತ್ತಿದೆ.

ಫೋಟೋ ತೆಗೆಸಿಕೊಳ್ಳಲು ಹೋಗಿ ಜಲಪಾತಕ್ಕೆ ಬಿದ್ದ ಯುವಕ: ರಕ್ಷಣಾ ಪಡೆಯಿಂದ ಶೋಧ ಕಾರ್ಯಾಚರಣೆ

pic.twitter.com/wJjBad1kuT

— Vishal Dharm (@VishalDharm1)

ತಮ್ಮನ ಪಾಲಿಗೆ ಸೂಪರ್‌ ಮ್ಯಾನ್‌ ಆದ ಅಣ್ಣ
ಅಣ್ಣ ಪೈಪ್‌ ಮೂಲಕ ಟೆರೇಸ್‌ಗೆ ನೀರು ಬಿಡುತ್ತಿರುತ್ತಾನೆ, ಇನ್ನೊಂದೆಡೆ, ಆರಂಭದ ವಿಡಿಯೋದಲ್ಲಿ ಕಾಣಿಸಿಕೊಳ್ಳದ ತಮ್ಮ ಅದೇ ಟೆರೇಸ್‌ನಲ್ಲಿ ಕ್ಲೀನ್‌ ಮಾಡುತ್ತಿರುತ್ತಾನೆ ಎಂಬುವುದನ್ನು ನಾವು ಈ ವಿಡಿಯೋ ಫೂಟೇಜ್‌ ಮೂಲಕ ಗಮನಿಸಬಹುದು. ನಂತರ ಅಣ್ಣ, ಪೈಪ್‌ ಅನ್ನು ಇದ್ದಕ್ಕಿದ್ದಂತೆ ಬಿಸಾಡಿ, ಮೇಲೆ ನೋಡುತ್ತಾ ಪರದಾಡುವುದನ್ನು ಗಮನಿಸಬಹುದು. ಅಲ್ಲಿ ಏನಾಗುತ್ತಿದೆ ಎಂಬುದು ನಮಗೆ ಗೊತ್ತಾಗುವಷ್ಟರಲ್ಲಿ ಅಂದರೆ ಕೆಲವೇ ಸೆಕೆಂಡುಗಳ ಬಳಿಕ ಟೆರೇಸ್‌ ಮೇಲಿದ್ದ ತಮ್ಮ, ಅಣ್ಣ ನಿಂತಿರುವ ಜಾಗದ ಬಳಿ ಕೆಳಕ್ಕೆ ಬೀಳುವುದನ್ನು ನೋಡಬಹುದು. ಅಲ್ಲದೆ, ಅಣ್ಣ ಆತನನ್ನು ಹಿಡಿದುಕೊಂಡಿದ್ದು, ಬಳಿಕ ಇಬ್ಬರೂ ನೆಲದ ಮೇಲೆ ಬೀಳುತ್ತಾರೆ. ಅವರ ಮನೆಯ ಸಿಸಿ ಕ್ಯಾಮೆರಾದಲ್ಲಿ ಈ ಎಲ್ಲ ಘಟನೆಗಳು ಸೆರೆಯಾಗಿದೆ.

ಆದರೆ, ಅದೃಷ್ಟವಶಾತ್‌ ಈ ಘಟನೆಯಲ್ಲಿ ಅಣ್ಣ - ತಮ್ಮ ಇಬ್ಬರಿಗೂ ಯಾವುದೇ ಗಾಯಗಳಾಗಿಲ್ಲ ಎಂಬುದು ಸಹ ತಿಳಿದುಬರುತ್ತದೆ. ನೆಲದ ಮೇಲೆ ಬಿದ್ದ ತಮ್ಮ ಕೆಲವೇ ಕ್ಷಣಗಳಲ್ಲಿ ಎದ್ದು ಅಣ್ಣನಿಗೆ ಸಹಾಯ ಮಾಡಲು ಹೋದ. ಇನ್ನೊಂದೆಡೆ, ತಮ್ಮನನ್ನು ಕಾಪಾಡಿದ ಹಾಗೂ ಆತನ ಭಾರ ತಡೆದುಕೊಂಡು ಕೆಳಕ್ಕೆ ಬಿದ್ದ ಅಣ್ಣ ಮೇಲಕ್ಕೆ ಏದ್ದು ನಡೆದಾಡಲು ಕೆಲ ಸಮಯ ತೆಗೆದುಕೊಂಡಿದೆ. 

ಸಾವಿನಿಂದ ಜಸ್ಟ್‌ ಮಿಸ್ : ಭಯಾನಕ ವಿಡಿಯೋ ವೈರಲ್‌

ಇದೇ ರೀತಿ, 2021 ಅಂದರೆ ಕಳೆದ ವರ್ಷ ನಡೆದ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ಸಹೋದ್ಯೋಗಿಯ ಜೀವವನ್ನು ಉಳಿಸಿದ್ದರು. ತಲೆಸುತ್ತಿ ಮೊದಲನೇ ಮಹಡಿಯಿಂದ ಬಿದ್ದ ಸಹೋದ್ಯೋಗಿಯನ್ನು ಬಚಾವ್‌ ಮಾಡಿ ಆತನ ಪ್ರಾಣ ಕಾಪಾಡಿದ್ದರು. ಕೇರಳ ಬ್ಯಾಂಕ್‌ನ ವಡಾಕಾರಾ ಶಾಖೆಯಲ್ಲಿ ಈ ಘಟನೆ ವರದಿಯಾಗಿದ್ದು, ಕ್ಯಾಮೆರಾದಲ್ಲಿ ಆ ಸಂಪೂರ್ಣ ಘಟನೆ ಸೆರೆಯಾಗಿತ್ತು.  

ತಲೆಸುತ್ತಿ ಕೆಳಕ್ಕೆ ಬಿದ್ದವರನ್ನು ಬಿನು ಅಲಿಯಾಸ್‌ ಬಾಬು ಎಂದು ಗುರುತಿಸಲಾಗಿದ್ದು, ಆತನನ್ನು ಕಾಪಾಡಿದ ವ್ಯಕ್ತಿಯನ್ನು 45 ವರ್ಷ ವಯಸ್ಸಿನ ಥಯ್ಯಿಲ್‌ ಮಿತ್ತಲ್ ಬಾಬುರಾಜ್‌ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಅಲ್ಲದೆ, ಆ ಕಟ್ಟಡದ ಕೆಳಗೆ ಸಜೀವ ವೈರ್‌ ಸಹ ಇತ್ತು. ಈ ಹಿನ್ನೆಲೆ ಆತನ ದೇಹ ವೈರ್‌ಗೆ ತಾಗಿದ್ದರೆ ಆತನ ಪ್ರಾಣ ಹೋಗುವ ಸಾಧ್ಯತೆ ಹೆಚ್ಚಿತ್ತು. ಇನ್ನು, ಅವರಿಬ್ಬರೂ ವಡಾಕರಾದ ಕೇರಳ ಬ್ಯಾಂಕ್‌ ಶಾಖೆಯಲ್ಲಿ ಉದ್ಯೋಗಿಗಳಾಗಿದ್ದು, ಪ್ರಾವಿಡೆಂಟ್‌ ಫಂಡ್‌ ಕಟ್ಟಲು ಅವರಿಬ್ಬರೂ ಕಾಯುತ್ತಿದ್ದ ವೇಳೆ ಬಾಬುಗೆ ತಲೆ ಸುತ್ತಿ ಬಂತು ಎಂದು ತಿಳಿದುಬಂದಿತ್ತು. 

ಇಂತಹ ಘಟನೆಗಳ ವಿಡಿಯೋಗಳನ್ನು ನೋಡಿಯೇ ನಮಗೆ ಒಂದು ಕ್ಷಣ ಗಾಬರಿಯಾಗುತ್ತದೆ. ಇನ್ನು, ಆ ಘಟನೆಗಳನ್ನು ಸ್ವತ: ಅನುಭವಿಸಿದವರಿಗೆ ಹೇಗಾಗಿರಬೇಡ ಹೇಳಿ.   

click me!