ಬೆಂಗಳೂರು ಫ್ಲ್ಯಾಟ್‌ನಲ್ಲಿ ಇಬ್ಬರು ಯುವತಿಯರ ಜೊತೆ ವಾಸವಾಗಿದ್ದ ಯುವಕ ಶವವಾಗಿ ಪತ್ತೆ

Published : Nov 11, 2025, 07:22 PM ISTUpdated : Nov 11, 2025, 08:38 PM IST
Youth found dead in bengaluru

ಸಾರಾಂಶ

ಬೆಂಗಳೂರು ಫ್ಲ್ಯಾಟ್‌ನಲ್ಲಿ ಇಬ್ಬರು ಯುವತಿಯರ ಜೊತೆ ವಾಸವಾಗಿದ್ದ ಯುವಕ ಶವವಾಗಿ ಪತ್ತೆ, ಇಬ್ಬರು ಯುವತಿಯರ ವಿರುದ್ದ ಪ್ರಕರಣ ದಾಖಲಾಗಿದೆ. ಒಬ್ಬಳ ಪ್ರೀತಿಯಲ್ಲಿ ಬಿದ್ದಿದ್ದೆ, ಮೂವರ ಜಗಳಕ್ಕೆ ಕಾರಣವಾಗಿದೆ. ಯುವತಿಯರ ಕಿರುಕುಳಕ್ಕೆ ಯುವಕ ಬದುಕು ಅಂತ್ಯಗೊಳಿಸಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಬೆಂಗಳೂರು (ನ.11) ಇಬ್ಬರು ಯುವತಿಯರ ಜೊತೆ ಬೆಂಗಳೂರಿನ ಫ್ಲ್ಯಾಟ್ ಒಂದರಲ್ಲಿ ವಾಸವಾಗಿದ್ದ ಯುವಕ ದುರಂತ ಅಂತ್ಯಕಂಡಿದ್ದಾನೆ. ಕೆಲಸದ ಕಾರಣದಿಂದ ಕೆಳೆದ ಕೆಲ ವರ್ಷಗಳಿಂದ ಯುವಕ ಹಾಗೂ ಇಬ್ಬರು ಯುವತಿಯರು ಬೆಂಗಳೂರಿನ ಯಲ್ಲನೇಹಳ್ಳಿಯ ಫ್ಲ್ಯಾಟ್‌ನಲ್ಲಿ ವಾಸವಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈ ಮೂವರು ಮೂಲತಃ ಕೇರಳದ ತಿರುವನಂತಪುರಂದವರು. ಹೀಗಾಗಿ ಬೆಂಗಳೂರಿನಲ್ಲಿ ಜೊತೆಯಾಗಿ ಒಂದೇ ಫ್ಲ್ಯಾಟ್‌ನಲ್ಲಿ ವಾಸವಿದ್ದರು. ಈ ಪೈಕಿ ಒಬ್ಬಳ ಜೊತೆ ಪ್ರೀತಿಯಲ್ಲಿ ಬಿದ್ದಿದ್ದೆ, ಮೂವರ ಜಗಳಕ್ಕೆ ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿದೆ. ಪರಿಣಾಮ ಇಬ್ಬರು ಯುವತಿರ ಕಿರುಕುಳ ಹೆಚ್ಚಾಗಿ, ಯುವಕ ದುರಂತ ಅಂತ್ಯಕಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇಬ್ಬರು ಯುುವತಿಯರ ವಿರುದ್ದ ಕುಟುಂಬಸ್ಥರು ಬೆಂಗಳೂರಿನ ಹುಳಿಮಾವು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇಬ್ಬರು ಯುವತಿಯರ ಜೊತೆ ಒಂದೇ ಫ್ಲ್ಯಾಟ್

ಕೇರಳದ ಶ್ರೀಕಾರ್ಯಂ ಮೂಲದ 39 ವರ್ಷದ ವಿಷ್ಣು ಮೃತ ದುರ್ದೈವಿ. ಮೂವರು ತಿರುವನಂತಪುರಂ ಮೂಲದವರಾಗಿದ್ದ ಕಾರಣ ಬೆಂಗಳೂರಿನಲ್ಲಿ ಒಂದೇ ಫ್ಲ್ಯಾಟ್‌ನಲ್ಲಿ ಕಳದೆ ಕೆಲ ವರ್ಷಗಳಿಂದ ಜೊತೆಯಾಗಿ ವಾಸವಿದ್ದರು. 38 ವರ್ಷದ ಸೂರ್ಯ ಕುಮಾರಿ ಹಾಗೂ 28 ವರ್ಷದ ಜ್ಯೋತಿ ಎಂಬ ಇಬ್ಬರು ಯುವತಿಯರು ವಿಷ್ಣು ಜೊತೆ ಒಂದೇ ಫ್ಲ್ಯಾಟ್‌ನಲ್ಲಿ ವಾಸವಿದ್ದರು.

ಏನಿದು ಘಟನೆ?

ವಿಷ್ಣು ಸಿ ಪಿ ಕಳೆದ ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಐಕೆಎಸ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಶ್ರೀಮತಿ ಸುರ್ಯಕುಮಾರಿ ಹಾಗೂ ಜ್ಯೋತಿ ಜೊತೆ ಬೆಂಗಳೂರು ನಗರದ ಎಲೆನಹಳ್ಳಿಯ ನಂ:203, 2ನೇ ಮಹಡಿ, ರೆಡಿಯಂಟ್ ಲೈನ್ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದರು. ನೆವೆಂಬರ್ 7ರಂದು ಬೆಳಗಿನ ಜಾವ 05.00ಗಂಟೆ ಸಮಯದಲ್ಲಿ ಸೂರ್ಯ ಕುಮಾರಿ, ವಿಷ್ಣುವಿನ ಸಹೋದರನಿಗೆ ಕರೆ ಮಾಡಿ ವಿಷ್ಣು ಮನೆಯ ಬಾತ್ ರೂಂನಲ್ಲಿ ನೇNU ಬಿGiದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆಸ್ಪತ್ರೆ ಸಾಗಿಸುವ ಮಾರ್ಗ ಮದ್ಯೆ ಮೃತಪಟ್ಟಿದ್ದಾನೆ ಎಂದಿದ್ದಾರೆ. ಕುಟುಂಬಸ್ಥರು ಬೆಂಗಳೂರಿನ ಸೇಂಟ್ ಜಾನ್ ಆಸ್ಪತ್ರೆಗೆ ಭೇಟಿ ನೀಡಿ ಮೃತದದೇಹ ಗುರುತಿಸಿದ್ದಾರೆ. ಇದೇ ವೇಳೆ ವಿಷ್ಣು ಸಹೋದರ ಇಬ್ಬರು ಯುವತಿಯರ ಮೇಲೆ ಗಂಭೀರ ಆರೋಪ ಮಾಡಿ ದೂರು ನೀಡಿದ್ದಾರೆ. ಎಲೆಕ್ಟ್ರಾನಿಸಿಕ್ ಸಿಟಿ ಉಪ ವಿಭಾಗದ ಹುಳಿಮಾವು ಠಾಣೆಯಲ್ಲಿ ದೂರು ನೀಡಿದ್ದಾರೆ. ಇಬ್ಬರು ಯುವತಿಯರು ಕಿರುಕುಳ ನೀಡಿದ್ದಾರೆ ಎಂದು ವಿಷ್ಮು ಸಹೋದರ ದೂರು ನೀಡಿದ್ದಾರೆ.

ಮೊದಲು ಸೂರ್ಯಳ ಜೊತೆ ಬಳಿಕ ಜ್ಯೋತಿ ಜೊತೆ ಪ್ರೀತಿ

ಒಂದೇ ಮನೆಯಲ್ಲಿ ಸೂರ್ಯ ಕುಮಾರಿ, ಜ್ಯೋತಿ ಹಾಗೂ ವಿಷ್ಣು ವಾಸವಾಗಿದ್ದರು. ಮೊದಲು ವಿಷ್ಣುವಿಗೆ ಸೂರ್ಯ ಕುಮಾರಿ ಜೊತೆ ಪ್ರೀತಿ ಶುರುವಾಗಿತ್ತು. ಇಬ್ಬರ ಪ್ರೀತಿ ಅಡೆ ತಡೆ ಇಲ್ಲದೆ ನಡೆದಿತ್ತು. ಬಳಿಕ ಬ್ರೇಕ್ ಅಪ್ ಆಗಿತ್ತು. ಈ ವೇಳೆ ಜ್ಯೋತಿ ಜೊತೆ ಪ್ರೀತಿ ಶುರುವಾಗಿತ್ತು. ಇದೇ ಈ ಮೂವರ ನಡುವಿನ ಜಗಳಕ್ಕೆ ಕಾರಣವಾಗಿತ್ತು.

ಜ್ಯೋತಿ ಫೋನ್ ಸ್ವಿಚ್ ಆಫ್

ಬೆಂಗಳೂರಿನಲ್ಲಿ ವಾಸವಾಗಿರುವ ಸೂರ್ಯ ಕುಮಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಇತ್ತ ಜ್ಯೂತಿ ಕೆಲಸದ ನಿಮಿತ್ತ ಡೆಹ್ರಡೂನ್‌ಗೆ ತೆರಳಿರುವ ಮಾಹಿತಿ ಸಿಕ್ಕಿದೆ. ಆದರೆ ಜ್ಯೋತಿ ಫೋನ್ ಸ್ವಿಚ್ ಆಫ್ ಆಗಿದೆ.

ಬದುಕು ಅಂತ್ಯಗೊಳಿಸುವುದು ಯಾವುದಕ್ಕೂ ಪರಿಹಾರವಲ್ಲ

ಯಾವುದೇ ಸಂದರ್ಭದಲ್ಲಿ ಬದುಕು ಅಂತ್ಯಗೊಳಿಸುವ ನಿರ್ಧಾರ ಯಾವ ಸಮಸ್ಯೆಗೂ ಪರಿಹಾರವೂ ಅಲ್ಲ, ಮುಕ್ತಿಯೂ ಅಲ್ಲ. ಇಂತಹ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಉಚಿತ ಸಹಾಯಾವಣಿ ಲಭ್ಯವಿದೆ. ಅಥವಾ ಹತ್ತಿರದ ಮನೋ ವೈದ್ಯರ ಸಂಪರ್ಕಿಸಿ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..