
ಬಿಹಾರ ಚುನಾವಣೆಗೆ ಇಂದು 2ನೇ ಹಂತದ ಮತದಾನ ನಡೆದಿದ್ದು, ಇಂದು ದಾಖಲೆಯ ಶೇ.67.14ರಷ್ಟು ಮತದಾನ ನಡೆದಿದೆ. ಇಂದು 20 ಜಿಲ್ಲೆಗಳ 122 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ಇಂದಿನ ಮತದಾನವು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಂಪುಟದ 12 ಸಚಿವರ ಭವಿಷ್ಯವನ್ನು ನಿರ್ಧರಿಸಲಿದೆ. ನವೆಂಬರ್ 6 ರಂದು ನಡೆದ ಮೊದಲ ಹಂತದ ಮತದಾನದಲ್ಲಿ ದಾಖಲೆಯ ಶೇ. 65.08ರಷ್ಟು ಮತದಾನವಾಗಿತ್ತು. ಇದು ಬಿಹಾರದ ಚುನಾವಣಾ ಇತಿಹಾಸದಲ್ಲಿ ಅತಿ ಹೆಚ್ಚು ಒಟ್ಟಾಗಿ 243 ಸದಸ್ಯಬಲದ ಬಿಹಾರ ವಿಧಾನಸಭೆಯ ಚುನಾವಣೆಯ ಮತ ಎಣಿಕೆ ಕಾರ್ಯ ನವೆಂಬರ್ 14 ರಂದು ನಡೆಯಲಿದೆ. ಈ ನಡುವೆ ಮತಬೇಟೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ವೀಡಿಯೋದಲ್ಲಿ ರಾಜಕಾರಣಿಯೊಬ್ಬರು ಹೆಂಗಸ್ಸರು ಸೆರಗೊಡ್ಡಿ ಮತ ಕೇಳುವಂತೆ ತಾವು ತಮ್ಮ ಪೈಜಾಮದ ಟಾಪನ್ನು ಎತ್ತಿ ಮತ ಕೇಳಲು ಮುಂದಾಗಿದ್ದಾರೆ. ಈ ರಾಜಕಾರಣಿ ಹೀಗೆ ಪೈಜಾಮ ಎತ್ತಿ ಮತ ಕೇಳುವುದನ್ನು ನೋಡಿದ ಅಲ್ಲೇ ಇದ್ದ ವೃದ್ಧರೊಬ್ಬರು ಅವರ ಪೈಜಾಮದ ಮೇಲೆ ಒಂದು ರೂಪಾಯಿ ನಾಣ್ಯವನ್ನು ಹಾಕಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ವೀಡಿಯೋದಲ್ಲಿ ಕಾಣುವಂತೆ ಪೈಜಾಮ ಧರಿಸಿದ್ದ ರಾಜಕಾರಣಿ ವೇದಿಕೆ ಮೇಲೆ ನಿಂತು ಮತ ನೀಡುವಂತೆ ಮೈಕ್‌ನಲ್ಲಿ ಜೋರಾಗಿ ಭಾಷಣ ಮಾಡುತ್ತಿದ್ದಾರೆ. ಆತ ಎರಡು ಕೈಗಳಲ್ಲಿ ಪೈಜಾಮವನ್ನು ಎತ್ತಿ ವೋಟು ಕೇಳುತ್ತಿದ್ದರೆ ಪಕ್ಕದಲ್ಲಿ ಇದ್ದ ಆತನ ಸಹಾಯಕ ಆತನ ಬಾಯಿಯ ಬಳಿ ಮೈಕ್ ಹಿಡಿದಿದ್ದಾನೆ. ಈ ವೇಳೆ ಸ್ಟೇಜ್ ಕೆಳಗೆ ಇದ್ದ ಅಜ್ಜ ಅಲ್ಲಿಗೆ ಬಂದು ಅವರ ಪೈಜಾಮದ ಮೇಲೆ ಒಂದು ರೂಪಾಯಿ ನಾಣ್ಯವನ್ನು ಹಾಕಿದ್ದಾರೆ. ಆದರೆ ಆ ನಾಯಕ ಯಾರೋ ಹಿರಿಯರು ಆ ಒಂದು ರೂಪಾಯಿ ನಾಣ್ಯವನ್ನು ಕೊಟ್ಟಿದ್ದಾರೆ ಎಂದು ಸಮಾಧಾನದಿಂದ ತೆಗೆದುಕೊಳ್ಳುವ ಬದಲು ಕೋಪಗೊಂಡ ಪೈಜಾಮದಿಂದ ನಾಣ್ಯ ತೆಗೆದು ಕೆಳಗೆ ಹಾಕಿ ಪೈಜಾಮವನ್ನು ಕೆಳಗೆ ಬಿಟ್ಟಿದ್ದಾನೆ.
ವೀಡಿಯೋ ಭಾರಿ ವೈರಲ್: ಸಾಮಾಜಿಕ ಜಾಲತಾಣದಲ್ಲಿ ಹಲವು ಕಾಮೆಂಟ್:
ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ವೀಡಿಯೋ ನೋಡಿದ ಅನೇಕರು ಹಲವು ಕಾಮೆಂಟ್ ಮಾಡಿದ್ದಾರೆ. ಬ್ರೋ 1 ರೂಪಾಯಿ ನೀಡುವ ಮೂಲಕ ತಮ್ಮ ವೋಟನ್ನು ಖಚಿತಪಡಿಸಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಈ ನಾಯಕರು ಬರೀ ಒಂದು ರೂಪಾಯಿಗಷ್ಟೇ ಲಾಯಕ್ ಎಂದಿದ್ದಾರೆ. ಮತ್ತೆ ಕೆಲವರು ಆ ನಾಯಕ ಒಂದು ರೂಪಾಯಿ ನಾಣ್ಯವನ್ನು ದೂರ ಎಸೆದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದು, ಅವರು ಅದನ್ನು ಅದೃಷ್ಟ ಅಂತ ಇಟ್ಟುಕೊಳ್ಳಬೇಕಿತ್ತು...ಪರಿಸ್ಥಿತಿಗೆ ತಕ್ಕಂತೆ ಇಂಪ್ರೂವೈಸ್ ಮಾಡುವ ಗುಣ ನಿಮಗಿರಬೇಕು. ಅದನ್ನು ಎಸೆಯುವ ಬದಲು, ವಿಶಿಷ್ಟ ಬಿಹಾರಿ ಗುಂಡಾ ರಾಜಕಾರಣಿಯ ವರ್ತನೆ ತೋರಿಸುವ ಬದಲು ಚೆನ್ನಾಗಿ ಕಾಣಬಹುದಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಭಿಕಾರಿಗೆ ಪೈಸೆ ನೀಡಬೇಕು ವೋಟಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಜ್ಜ ಒಳ್ಳೆಯ ಕೆಲಸ ಮಾಡಿದ್ದಾರೆ ಅಜ್ಜ ಏನ್ ಕೇಳಿದ್ದಾರೋ ಅದನ್ನೇ ಕೊಟ್ಟಿದ್ದಾ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.ಈ ವೀಡಿಯೋ ನೋಡಿದ ಮೇಲೆ ನಿಮಗೇನನಿಸಿತು ಕಾಮೆಂಟ್ ಮಾಡಿ.
ವೀಡಿಯೋ ಲಿಂಕ್ ಕೆಳಗಿದೆ ನೋಡಿ:
ಇದನ್ನೂ ಓದಿ: ಬೈ ಮಿಸ್ಕೇಟ್ ಕಂಪನಿ ಸಿಇಒ ಸೇರಿ ಎಲ್ಲಾ ಉದ್ಯೋಗಿಗಳಿಗೆ ಟರ್ಮಿನೇಷನ್ ಲೆಟರ್ ಕಳುಹಿಸಿದ ಹೆಚ್‌ಆರ್
ಇದನ್ನೂ ಓದಿ: ಭಾರತದಿಂದ ದತ್ತು ಪಡೆದ ಮಗಳಿಗೆ ಹಿಂಸೆ: ಅಮೆರಿಕನ್ ಪೋಷಕರಿಂದ ರಕ್ಷಿಸುವಂತೆ ಸಿಎಂಗೆ ಮನವಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ