ಇನ್ನು ಕೊರೋನಾ ಇಲ್ಲದ ಪ್ರದೇಶಗಳ ಬಗ್ಗೆ ಹೆಚ್ಚು ಗಮನ!

By Kannadaprabha NewsFirst Published Apr 16, 2020, 11:52 AM IST
Highlights

ಇನ್ನು ಕೊರೋನಾ ಇಲ್ಲದ ಪ್ರದೇಶಗಳ ಬಗ್ಗೆ ಹೆಚ್ಚು ಗಮನ| ಸೋಂಕು ತಗುಲದ ಜಿಲ್ಲೆಗಳ ಮೇಲೆ ನಿಗಾ

ನವದೆಹಲಿ(ಏ.16): ದೇಶದಲ್ಲಿ ಜಾರಿಯಾಗಿರುವ 2ನೇ ಲಾಕ್‌ಡೌನ್‌ ವೇಳೆ ಕೊರೋನಾ ಸೋಂಕು ಇಲ್ಲದ ಪ್ರದೇಶಗಳಿಗೆ ಹೊಸತಾಗಿ ಸೋಂಕು ಹರಡದಂತೆ ಹೆಚ್ಚು ಎಚ್ಚರ ವಹಿಸಲು ಸರ್ಕಾರ ನಿರ್ಧರಿಸಿದೆ.

ಮೊದಲ ಲಾಕ್‌ಡೌನ್‌ ವೇಳೆಯಲ್ಲೇ ದೇಶದ ಎಲ್ಲಾ ಜಿಲ್ಲೆಗಳ ಗಡಿ ಬಂದ್‌ ಮಾಡಲಾಗಿದೆ. ಹೀಗಾಗಿ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಸೋಂಕು ಹರಡುತ್ತಿಲ್ಲ. ಜಿಲ್ಲೆಯೊಳಗೆ ಇರುವ ಸೋಂಕು ಗುಣಪಡಿಸಲು ಮತ್ತು ಹರಡದಿರುವಂತೆ ನೋಡಿಕೊಳ್ಳಲು ಸಾಕಷ್ಟುಕ್ರಮ ಕೈಗೊಳ್ಳಲಾಗಿದೆ. ದೇಶದ ಅರ್ಧದಷ್ಟುಜಿಲ್ಲೆಗಳಲ್ಲಿ ಇಲ್ಲಿಯವರೆಗೆ ಒಂದೂ ಕೊರೋನಾ ಪ್ರಕರಣ ವರದಿಯಾಗಿಲ್ಲ. ಹಾಗಾಗಿ ಈ ಜಿಲ್ಲೆಗಳಿಗೆ ಹೊಸತಾಗಿ ಸೋಂಕು ಹರಡದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಡಾ. ಕಜೆ ಔಷಧಿ 10 ಮಂದಿಗೆ ನೀಡಲು ಸರ್ಕಾರದ ಒಪ್ಪಿಗೆ!

ಇನ್ನು, ಕೊರೋನಾಪೀಡಿತ 25 ಜಿಲ್ಲೆಗಳಲ್ಲಿ ಕಳೆದ 14 ದಿನಗಳಿಂದ ಒಂದೂ ಹೊಸ ಸೋಂಕು ವರದಿಯಾಗಿಲ್ಲ. 28 ದಿನಗಳ ಕಾಲ ಒಂದೂ ಸೋಂಕು ಪತ್ತೆಯಾಗದಿದ್ದರೆ ಮಾತ್ರ ಆ ಪ್ರದೇಶವನ್ನು ಕೊರೋನಾಮುಕ್ತ ಎಂದು ಪರಿಗಣಿಸಲಾಗುತ್ತದೆ.

click me!