
ಮುಂಬೈ(ಏ.16): ತವರಿಗೆ ತೆರಳಲು ಅವಕಾಶ ಮಾಡಿಕೊಡುವಂತೆ ಆಗ್ರಹಿಸಿದ ಸಾವಿರಾರು ವಲಸಿಗ ಕಾರ್ಮಿಕರು ಮಂಗಳವಾರ ಮುಂಬೈನಲ್ಲಿ ಬೀದಿಗಿಳಿದ ಪ್ರಕರಣಕ್ಕೆ ವದಂತಿ ಅವಾಂತರವೇ ಕಾರಣ ಎಂದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಮೂರು ಎಫ್‌ಐಆರ್ ದಾಖಲಿಸಿ, ಖಾಸಗಿ ಸುದ್ದಿವಾಹಿನಿಯ ಓರ್ವ ಪತ್ರಕರ್ತನನ್ನು ವಶಕ್ಕೆ ಪಡೆದಿದ್ದು, ಮತ್ತು ಪ್ರಚೋದನಾಕಾರಿ ಟ್ವೀಟ್ ಮಾಡಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ವಶಕ್ಕೆ ಪಡೆಯಲ್ಪಟ್ಟಒಸ್ಮಾನಾಬಾದ್ ಮೂಲದ ಪತ್ರಕರ್ತ 2 ದಿನಗಳ ಹಿಂದೆ, ವಲಸಿಗರ ಕಾರ್ಮಿಕರನ್ನು ತವರು ರಾಜ್ಯಗಳಿಗೆ ಕರೆದೊಯ್ಯಲು ಶೀಘ್ರವೇ ರೈಲು ಸಂಚಾರ ಆರಂಭಿಸಲಾಗುತ್ತದೆ ಎಂದು ಸುದ್ದಿ ಮಾಡಿದ್ದ. ಇದನ್ನು ನಂಬಿಯೇ ಮಂಗಳವಾರ ಸಾವಿರಾರು ಜನ ರೈಲ್ವೆ ನಿಲ್ದಾಣದ ಬಳಿ ಜಮಾಯಿಸಿದ್ದರು.
ಲಾಕ್‌ಡೌನ್ ಎಫೆಕ್ಟ್: ಮುಂಬೈ, ಸೂರತ್‌ನಲ್ಲಿ ವಲಸಿಗರ ‘ದಂಗೆ’!
ಇನ್ನು ಲಾಕ್‌ಡೌನ್‌ನಿಂದ ಕೂಲಿ ಕೆಲಸವಿಲ್ಲದೆ ನಿರ್ಗತಿಕರಾದ ಕೆಲಸಗಾರರು ಅವರವರ ರಾಜ್ಯಗಳಿಗೆ ಮರಳಲು ಏ.18ರ ಒಳಗಾಗಿ ರೈಲು ಸೇವೆ ಆರಂಭಿಸದಿದ್ದರೆ, ರಾಷ್ಟ್ರ ವ್ಯಾಪ್ತಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಟ್ವೀಟ್ ಮಾಡಿದ್ದ ವಿನಯ್ ದುಬೆ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ