
ಕೊಲ್ಲಂ: ನಾಯಿಗಿರುವಷ್ಟು ನಿಯತ್ತು ಬೇರೆ ಯಾರಿಗೂ ಇರುವುದಿಲ್ಲ, ಒಂದು ಹೊತ್ತು ಊಟ ಕೊಟ್ಟರೂ ನಾಯಿ ಅನ್ನ ಕೊಟ್ಟವನನ್ನು ಚಿರ ಕಾಲ ನೆನಪಿಟ್ಟುಕೊಳ್ಳುತ್ತದೆ. ಹೀಗಿರುವಾಗ ಕೇರಳದ ಊರೊಂದರಲ್ಲಿ ನಾಯಿಯ ಸಾವಿಗೆ ಇಡೀ ಗ್ರಾಮವೇ ಕಂಬನಿ ಮಿಡಿದಿದೆ. ಅಂದಹಾಗೆ ಈ ಘಟನೆ ನಡೆದಿರುವುದು ಕೇರಳದ ಕೊಲ್ಲಂನಲ್ಲಿ ಕೊಲ್ಲಂನ ಪೂವಟೂರಿನಲ್ಲಿ ಬೀದಿನಾಯಿಯಾಗಿದ್ದ ಈ ಶ್ವಾನ ಪಾರ್ಲೇಜಿ ಸುರೇಶ್ ಎಂದೇ ಖ್ಯಾತಿ ಪಡೆದಿತ್ತು, ಊರಿಗೆ ಕಾವಲುಗಾರನಂತಿದ್ದ ಈ ಶ್ವಾನ ಊರವರ ಅಚ್ಚುಮೆಚ್ಚಿನ ನಾಯಿಯಾಗಿತ್ತು. ಆದರೆ ಒಂದು ದಿನ ಇದ್ದಕ್ಕಿದಂತೆ ಈ ಪಾರ್ಲೆ ಜಿ ಸುರೇಶ್ ಹೆಸರಿನ ಶ್ವಾನ ಕಾಣೆಯಾಗಿದ್ದು, ಕೆಲ ದಿನಗಳ ನಂತರ ಅದರ ಶವ ಪತ್ತೆಯಾಗಿದೆ. ಹೀಗಾಗಿ ಊರಿನ ಜನರ ನೆಚ್ಚಿನ ಶ್ವಾನದ ಸಾವಿಗೆ ಇಡೀ ಊರೇ ಕಂಬನಿ ಮಿಡಿದಿದೆ.
ಜನ ಬೀದಿ ನಾಯಿಯಾಗಿದ್ದ ಪಾರ್ಲೇಜಿ ಸುರೇಶ್ ಹೆಸರಲ್ಲಿ ಊರಿನಲ್ಲಿ ಶ್ರದ್ಧಾಂಜಲಿಯ ಫ್ಲೆಕ್ಸ್ ಹಾಕಿದ್ದು, ಶ್ವಾನದ ಆತ್ಮಕ್ಕೆ ಶಾಂತಿ ಕೋರಿ ಬೇಸರಿಸುತ್ತಿದ್ದಾರೆ. ಪಾರ್ಲೆಜಿ ಸುರೇಶ್ ಕೇವಲ ನಾಯಿಯಾಗಿರಲಿಲ್ಲ, ನಾವು ಆತನನ್ನು ಓರ್ವ ಗೆಳೆಯ, ಮನೆಯ ಸದಸ್ಯನಂತೆ ನೋಡ್ತಿದ್ವಿ, ಈ ಊರಿನ ಎಲ್ಲಾ ಮನೆಗೂ ಹೋಗೋ ಸ್ವಾತಂತ್ರ್ಯ ಸುರೇಶ್‌ಗೆ ಇತ್ತು ಎಂದು ಆ ಊರಿನ ನಿವಾಸಿಯಾದ ಮಣಿ ಎಂಬುವವರು ಶ್ವಾನ ಸುರೇಶ್ ಬಗ್ಗೆ ಹೇಳಿದ್ದಾರೆ. ಎಲ್ಲರ ಮೇಲೂ ಅವನಿಗೆ ತುಂಬಾ ಪ್ರೀತಿ ಇತ್ತು. ಅಲ್ಲಿನ ಜನರನ್ನು ಕಂಡಾಗಲೆಲ್ಲಾ ಆತ ಬಾಲ ಆಡಿಸಿ ಪ್ರೀತಿ ತೋರಿಸ್ತಿದ್ದ. ಅದನ್ನ ಯಾರು ಮರೆಯೋಕೆ ಆಗಲ್ಲ. ಯಾರಿಗೂ ಯಾವ ತೊಂದರೆಯನ್ನೂ ಆತ ಕೊಟ್ಟಿಲ್ಲ ಅಂತ ಊರಿನ ಕುಂಞಕುಟ್ಟಿ ಹೇಳಿದ್ದಾರೆ.
ಈತ ಊರಿನ ಬಟ್ಟೆ ಅಂಗಡಿಗೆ ಕೆಲಸಕ್ಕೆ ಹೋಗುತ್ತಿದ್ದ ಹೆಂಗಸರನ್ನು ಮನೆಗೆ ಕರೆದುಕೊಂಡು ಬಂದು ಬಿಡುತ್ತಿದ್ದ. ಎಲ್ಲರಿಗೂ ಬಾಡಿಗಾರ್ಡ್ ಆಗಿದ್ದ, ಅವರು ನೀಡುವ ಬಿಸ್ಕೆಟ್ ಜೊತೆ ವಾಪಸ್ ಬರ್ತಿದ್ದ ಬಿಸ್ಕೆಟ್ ಅಂದ್ರೆ ಸುರೇಶ್‌ಗೆ ತುಂಬಾ ಇಷ್ಟ. ದಿನವೂ 10 ಪಾರ್ಲೆಜಿ ಬಿಸ್ಕೆಟ್ ತಿಂತಿದ್ದ ಅಂತ ಊರಿನವರು ಶ್ವಾನದ ಗುಣಗಾನ ಮಾಡಿದ್ದಾರೆ. ಇಷ್ಟು ಮನುಷ್ಯ ಪ್ರೀತಿ ಇರೋ ನಾಯಿ ಇನ್ನೊಂದು ಸಿಗೋದಿಲ್ಲ ಅಂತ ಚಹಾ ಅಂಗಡಿಯ ಸುದರ್ಶನ್ ಹೇಳಿದ್ದಾರೆ. ನಾಯಿ ಮತ್ತು ಊರಿನ ನಡುವಿನ ಈ ಅಪರೂಪದ ಪ್ರೀತಿಯ ಬಗ್ಗೆ ಊರಿನವರಿಗೆ ಎಷ್ಟು ಹೇಳಿಕೊಂಡರೂ ತೃಪ್ತಿ ಇಲ್ಲ. ಆದರೆ ಜನ ಇಷ್ಟು ಪ್ರೀತಿ ತೋರಿದ್ದ ಶ್ವಾನ ಒಂದು ದಿನ ಸಡನ್ನಾಗಿ ಕಾಣೆಯಾಗಿದ್ದು, ನಂತರ ನಂತರ ಸತ್ತ ಸ್ಥಿತಿಯಲ್ಲಿ ಸಿಕ್ಕಿದ್ದ. ಇದರಿಂದ ಇಡೀ ಊರೇ ಈಗ ಸುರೇಶ್ ಸಾವಿಗೆ ಮಿಡಿಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ