ತ್ರಿಶೂರ್‌ನಲ್ಲಿ ಹಾಡಹಗಲೇ ಚಿನ್ನದ ವ್ಯಾಪಾರಿಯನ್ನು ಅಡ್ಡಗಟ್ಟಿ 12 ಜನರ ಗುಂಪು 1.84 ಕೋಟಿ ರೂ. ಮೌಲ್ಯದ ಚಿನ್ನ ದೋಚಿ ಪರಾರಿಯಾಗಿದೆ. ಈ ದೃಶ್ಯ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ತ್ರಿಶೂರ್: ಕೇರಳದ ತ್ರಿಶ್ಯೂರ್‌ನಲ್ಲೇ ಹಾಡ ಹಗಲೇ ಬೆಚ್ಚಿ ಬೀಳಿಸುವ ದರೋಡೆಯೊಂದು ನಡೆದಿದೆ. ಚಿನ್ನದ ವ್ಯಾಪಾರಿ ಹಾಗೂ ಆತನ ಸಹಾಯಕನನ್ನು ಮೂರು ಕಾರಲ್ಲಿ ಬಂದ 12 ದರೋಡೆಕೋರರ ಗುಂಪೊಂದು ನಡುರಸ್ತೆಯಲ್ಲೇ ಅಡ್ಡಗಟ್ಟಿ, ಆತನ ಬಳಿ ಇದ್ದ ಚಿನ್ನಾಭರಣವನ್ನು ದೋಚಿದ್ದಾರೆ. ಈ ಆಘಾತಕಾರಿ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರೋಪಿಗಳು ಮೂರು ಎಸ್‌ಯುವಿ ಕಾರಿನಲ್ಲಿ ಚಿನ್ನದ ವ್ಯಾಪಾರಿಯನ್ನು ಹಿಂದಿಕ್ಕಿ ನಿರ್ಮಾಣ ಹಂತದಲ್ಲಿದ್ದ ಪ್ಲೈಓವರ್ ಸಮೀಪದ ರಸ್ತೆಯಲ್ಲಿ ಕಾರನ್ನು ಅಡ್ಡಗಟ್ಟಿ ದರೋಡೆ ಮಾಡಿದ್ದಾರೆ. ಮೊದಲಿಗೆ ಇಬ್ಬರನ್ನು ಕಿಡ್ನ್ಯಾಪ್ ಮಾಡಿದ ಖದೀಮರು ಅವರ ಬಳಿ ಇದ್ದ ಚಿನ್ನಾಭರಣವನ್ನು ದೋಚಿ, ನಂತರ ಬಿಟ್ಟು ಕಳುಹಿಸಿದ್ದಾರೆ. ಕೇರಳದ ಕುತ್ತಿರನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.
ಬುಧವಾರ ಬೆಳಗ್ಗೆ 11.15ರ ಸುಮಾರಿಗೆ ಮಾಸ್ಕ್ ಧರಿಸಿದ್ದ ಖದೀಮರು ಈ ಕೃತ್ಯ ನಡೆಸಿದ್ದಾರೆ. ಕೊಯಂಬತ್ತೂರಿನಲ್ಲಿ ರೆಡಿಯಾದ ಚಿನ್ನವನ್ನು ಸಾಗಿಸುತ್ತಿದ್ದ ಸ್ವಿಫ್ಟ್ ಡಿಸೈರ್ ಗಾಡಿಯನ್ನು ಎರಡು ಇನ್ನೋವಾ ಹಾಗೂ ರೆನಾಲ್ಟ್ ಟ್ರೈಬರ್ ಕಾರಿನಲ್ಲಿ ಬಂದ ಖದೀಮರು ಅಡ್ಡಗಟ್ಟಿ, ಈ ದೃಷ್ಕೃತ್ಯ ನಡೆಸಿದ್ದಾರೆ.
ಧೂಮ್ 2 ಸಿನಿಮಾ ಸ್ಟೈಲ್‌ನಲ್ಲಿ ಮ್ಯೂಸಿಯಂ ದರೋಡೆಗೆ ಯತ್ನ, ಆದರೆ ಹೃತಿಕ್ ರೀತಿ ಹಾರಲಾಗದೇ ಸಿಕ್ಕಿಬಿದ್ದ ಕಳ್ಳ!
ಚಿನ್ನದ ವ್ಯಾಪಾರಿ ಅರುಣ್ ಸನ್ನಿ ಹಾಗೂ ಆತನ ಸಹಾಯಕ ರೋಜಿ ಥಾಮಸ್ ದರೋಡೆಗೊಳಗಾದವರು. ಇವರಿಗೆ ಆರೋಪಿಗಳು ಚಾಕು ಹಾಗೂ ಕೈಮಚ್ಚು ತೋರಿಸಿ ಬೆದರಿಸಿದ್ದಾರೆ. ನಂತರ ಸಂತ್ರಸ್ತರು ಕಾರಿನಿಂದ ಇಳಿದಿದ್ದು, ಅವರನ್ನು ಇನ್ನೊಂದು ಕಾರಿನಲ್ಲಿ ಕೂರಿಸಿಕೊಂಡು ಆರೋಪಿಗಳು ಚಿನ್ನ ಹಾಗೂ ಕಾರಿನ ಸಮೇತ ಪರಾರಿಯಾಗಿದ್ದಾರೆ. ಅಲ್ಲದೇ ಸಂತ್ರಸ್ತರಲ್ಲಿ ಒಬ್ಬರಾದ ಅರುಣ್ ಸನ್ನಿಯನ್ನು ಪುತ್ತೂರಲ್ಲಿ ಇಳಿಸಿ ಹೋಗಿದ್ದಾರೆ. ಹಾಗೆಯೇ ರೋಜಿ ಥಾಮಸ್ ಅವರನ್ನು ಪಲ್ಲಿಯೇಕ್ಕರ್‌ನಲ್ಲಿ ಕಾರಿನಿಂದ ಇಳಿಸಿ ಹೋಗಿದ್ದಾರೆ. ಈ ಘಟನೆ ಈ ರಸ್ತೆಯಲ್ಲೇ ಈ ಕಾರುಗಳ ಹಿಂದೆ ಸಾಗುತ್ತಿದ್ದ ವಾಹನವೊಂದರ ಡ್ಯಾಶ್‌ಕ್ಯಾಮ್‌ನಲ್ಲಿ ರೆಕಾರ್ಡ್ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಹಲವು ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಿಸಲಾಗಿದೆ. ಒಟ್ಟು 1.84 ಕೋಟಿ ಮೊತ್ತದ ಚಿನ್ನದ ಆಭರಣವನ್ನು ಆರೋಪಿಗಳು ಲೂಟಿ ಮಾಡಿದ್ದಾರೆ.
ವಡಾಪಾವ್ ತಿನ್ನಲು ಸ್ಕೂಟಿ ನಿಲ್ಲಿಸಿದ್ದ ವೃದ್ಧ ದಂಪತಿಗೆ ಶಾಕ್: 5 ಲಕ್ಷ ಮೌಲ್ಯದ ಜ್ಯುವೆಲರಿ ಎಗರಿಸಿದ ಖದೀಮರು
🚨 Movie style Gold theft in Kerala, India
Gang in Kerala blocks cars on highway and kidnaps, looting 2.5 kg gold (worth 2.4 million USD).
The masked team robbed the gold when it was brought to Thrissur from Coimbatore in a car. pic.twitter.com/22Efjw5cjt