1996ರಲ್ಲಿ ವಿಧವೆಯಾದ ವೃದ್ಧೆಗೆ ಹೈಕೋರ್ಟ್ ಛೀಮಾರಿ ಹಾಕಿದೆ! ಅಸಲಿಗೆ ಆಗಿದ್ದೇನು ಗೊತ್ತಾ?

Published : Oct 08, 2026, 03:59 PM IST
Mother-in-law Has No Share in Daughter-in-law's Pension

ಸಾರಾಂಶ

ಕೇರಳದಲ್ಲಿ 83 ವರ್ಷದ ವೃದ್ಧೆಯೊಬ್ಬಳು ತನ್ನ ಮೃತ ಮಗನ ಪಿಂಚಣಿಯಲ್ಲಿ ಪಾಲು ಕೇಳಿ ವಿಧವೆ ಸೊಸೆ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಳು. ಆದರೆ, ಈಗಾಗಲೇ ಎರಡು ಪಿಂಚಣಿ ಪಡೆಯುತ್ತಿರುವ ಅತ್ತೆಗೆ ಸೊಸೆಯ ಪಿಂಚಣಿಯಲ್ಲಿ ಯಾವುದೇ ಹಕ್ಕಿಲ್ಲ ಎಂದು ಕೋರ್ಟ್ ಛೀಮಾರಿ ಹಾಕಿದೆ.

ಕೇರಳ (ಅಕ್ಟೋಬರ್ 08): 1996 ರಲ್ಲಿ ವಿಧವೆಯಾದ 83 ವರ್ಷದ ಮಹಿಳೆಗೆ ಹೈಕೋರ್ಟ್ ಛೀಮಾರಿ ಹಾಕಿದೆ. ಅಸಲಿಗೆ ಆಗಿದ್ದು ಏನು ಅಂತಾ ನೋಡೋದಾದ್ರೆ, ಈ ಪ್ರಕರಣ ನಡೆದಿರೋದು ಕೇರಳದಲ್ಲಿ. ವೃದ್ಧೆಯ ಹೆಸರು ತಂಕಮ್ಮ. ಇವರು ಕೇರಳದ ಮೀನುಗಾರಿಕೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಇವರ ಪತಿ ಕೂಡ ಅದೇ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಇವರು 1996ರಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಇನ್ನು ತಂಕಮ್ಮ ಪುತ್ರ ಟಿ. ರಾಜ್ ಕುಮಾರ್ ಕೇರಳ ವಿದ್ಯುತ್ ಮಂಡಳಿಯಲ್ಲಿ ಹಿರಿಯ ಸೂಪರಿಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಕೆಲಸದಲ್ಲಿ ಇರುವಾಗಲೇ ಹಠಾತ್ ನಿಧನರಾದರು. ಮಗನ ನಿಧನ ನಂತರ ಆತನ ಪತ್ನಿ (ತಂಕಮ್ಮನ ಸೊಸೆ) ಪಿಂಚಣಿ ಪಡೆಯುತ್ತಿದ್ದಾರೆ.

ಈಗಾಗಲೇ ತನ್ನ ಪಿಂಚಣಿ, ಪತಿಯ ಪಂಚಣಿಯನ್ನೂ ಪಡೆಯುತ್ತಿರುವ ತಂಕಮ್ಮಗೆ ತನ್ನ ಮಗನ ಪಿಂಚಣಿಯೂ ಬೇಕು ಅನ್ನೋದು ವಾದವಾಗಿತ್ತು. ಸೊಸೆಗೆ ಹೋಗುತ್ತಿರುವ ಪಿಂಚಣಿಯಲ್ಲಿ ಅರ್ಧ ತನಗೆ ಸಿಗಬೇಕು ಎಂದು ಆಗ್ರಹ ಮಾಡಿದ್ದಳು. ಸೊಸೆಯ ಬಳಿ ಇದೇ ವಿಚಾರಕ್ಕೆ ಕಿತ್ತಾಡುವುದರ ಜೊತೆಗೆ ಕಾಲೇಜಿನಲ್ಲಿ ಓದುತ್ತಿದ್ದ ಮೊಮ್ಮಗಳಿಂದಲೂ 15 ಸಾವಿರ ಹಣ ಬೇಕು ಎಂದು ಹಠ ಹಿಡಿದು ಕೂತಿದ್ದಳಂತೆ.

ಸೊಸೆ ಹಾಗೂ ಮೊಮ್ಮಗಳು ಹಣ ನೀಡಲು ನಿರಾಕರಿಸಿದಾಗ.. ಕೋರ್ಟ್ ಮೆಟ್ಟಿಲೇರಿದ್ದಾಳೆ. ನ್ಯಾಯಾಲಯದಲ್ಲಿ ತನಗೆ ನ್ಯಾಯ ಸಿಗಲಿದೆ ಅಂದುಕೊಂಡು ಆಕೆ ಕೋರ್ಟ್ ಮೊರೆ ಹೋಗಿದ್ದಳು. ಆದರೆ ನ್ಯಾಯಾಲಯದಲ್ಲಿ ಪ್ರಕರಣ ಉಲ್ಟಾ ಹೊಡೆದಿದ್ದು, ವೃದ್ಧೆ ಆಘಾತಕ್ಕೆ ಒಳಗಾಗಿದ್ದಾಳೆ.

ಕೋರ್ಟ್ ಹೇಳಿದ್ದೇನು?

ಹಿರಿಯ ನಾಗರಿಕರ ಕಾನೂನಿನಲ್ಲಿ ಅತ್ತೆಯೊಬ್ಬರು ವಿಧವೆ ಸೊಸೆಯಿಂದ ಪಿಂಚಣಿ ಪಾಲನ್ನು ಪಡೆಯುವ ಯಾವುದೇ ಅವಕಾಶ ಇಲ್ಲ. ಕಾನೂನಿನಲ್ಲಿ ಅದಕ್ಕೆ ಮಾನ್ಯತೆ ಇಲ್ಲ. ಇನ್ನು ನಿಮ್ಮ ಮೊಮ್ಮಗಳು ಓದಲು ಯೂನಿಯನ್ ಬ್ಯಾಂಕ್‌ನಿಂದ ಲೋನ್ ಮಾಡಿರೋದು. ಅದು ಆಕೆ ತನ್ನ ಶಿಕ್ಷಣಕ್ಕಾಗಿ ಮಾಡಿರುವ ಸಾಲ. ಆಕೆಯಿಂದಲೂ ನೀವು ಪಾಲು ಕೇಳುವುದು ಅನ್ಯಾಯ. ಇದು ಆಕೆಯ ಆರ್ಥಿಕ ಜೀವನದ ಮೇಲೆ ದೊಡ್ಡ ಹೊಡೆತ ಬೀಳಲಿದೆ ಎಂದು ಕೋರ್ಟ್ ಹೇಳಿತು.

12.28 ಲಕ್ಷ ಹಣ ಸ್ವೀಕರಿಸಿರುವ ವೃದ್ಧೆ

ಕೋರ್ಟ್ ತಿಳಿದುಕೊಂಡಿರುವ ಪ್ರಕಾರ, ಮಗನ ನಿಧನದ ನಂತರ 12.28 ಲಕ್ಷ ಸೇವಾ ಭತ್ಯೆಯನ್ನು ಪಡೆದುಕೊಂಡಿದ್ದಾಳೆ. ಉಳಿದ ಮೊತ್ತವು ಆತನ ಹೆಂಡತಿಗೆ ಹೋಗುತ್ತಿದೆ. ನೀವು ದೊಡ್ಡವರಾಗಿರೋದ್ರಿಂದ ನಿಮ್ಮ ಸೊಸೆ ಮತ್ತು ಮೊಮ್ಮಗಳಿಂದ ಹಣ ಕೇಳುವುದು ನಿಮ್ಮ ಹಕ್ಕಲ್ಲ ಎಂದು ಕೋರ್ಟ್ ವಿವರಿಸಿದೆ.

ಆ ಮೂಲಕ ಸೊಸೆಯ ಪಿಂಚಣಿಯಲ್ಲಿ ಅತ್ತೆಗೆ ಪಾಲು ಕೇಳುವ ಯಾವುದೇ ಹಕ್ಕು ಇಲ್ಲ. ಅದು ಸಂಪೂರ್ಣವಾಗಿ ಸೊಸೆಗೆ ಸೇರಬೇಕು ಇಲ್ಲ ಮೊಮ್ಮಕ್ಕಳಿಗೆ ಸಿಗಬೇಕು ಅನ್ನೋದನ್ನು ಕೋರ್ಟ್ ಒತ್ತಿ ಹೇಳಿದೆ. ಅಪರೂಪದಲ್ಲೇ ಅಪರೂಪದ ಪ್ರಕರಣ ಇದಾಗಿದ್ದು, ತನಿಗೆ ಕೋರ್ಟ್‌ನಲ್ಲಿ ನ್ಯಾಯ ಸಿಗಬಹುದು ಎಂದು ಹುಮ್ಮಸ್ಸಿನಿಂದ ಹೋಗಿದ್ದ ವೃದ್ಧೆಗೆ ಶಾಕ್ ಆಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಾಲಕ್ಕೆ ಎಮ್ಮೆ ಜಪ್ತಿ ಮಾಡ್ತೀರಾ? ತಗೊಳ್ಳಿ ನೀವೇ ಸಾಕಿ!; ಬ್ಯಾಂಕ್ ಮ್ಯಾನೇಜರ್ ಕ್ಯಾಬಿನ್‌ಗೆ ಎಮ್ಮೆ ನುಗ್ಗಿಸಿದ ರೈತ!
ಸಿನಿಮಾದ ನಕಲಿ ದೇಶಭಕ್ತಿ ಬಿಟ್ಟು ಕಾರ್ಗಿಲ್​ ಯುದ್ಧಭೂಮಿಗಿಳಿದಿದ್ದ ನಾನಾ ಪಾಟೇಕರ್​: ಅಂದು ನಡೆದದ್ದೇ ರೋಚಕ ಸ್ಟೋರಿ