Delhi: ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಹಲ್ಲೆ; ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ವಿರುದ್ಧ FIR ದಾಖಲು

Published : Oct 08, 2026, 12:58 PM IST
Rahul Gandhi

ಸಾರಾಂಶ

ಮುಖ್ಯ ಚುನಾವಣಾಧಿಕಾರಿ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಪ್ರತಿಭಟಿಸಿದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಬಿಡುಗಡೆ ಮಾಡಿದ್ದಾರೆ. ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಕಾಂಗ್ರೆಸ್ ದೇಶಾದ್ಯಂತ ಕರಾಳ ದಿನಾಚರಣೆಗೆ ಕರೆ ನೀಡಿದೆ.

ದೆಹಲಿ: ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನೇತೃತ್ವದ ಒಕ್ಕೂಟ 'ಇಂಡಿಯಾ' ಹೋರಾಟ ತೀವ್ರಗೊಳಿಸಿದೆ. ದೆಹಲಿಯ ಜಂತರ್ ಮಂತರ್‌ನತ್ತ ಬುಧವಾರ ತೆರಳಲು ಮುಂದಾದ ಕಾಂಗ್ರೆಸ್, ವಿಪಕ್ಷ ಸಂಸದರಿಗೆ ಪೊಲೀಸರು ತಡೆಯೊಡ್ಡಿದಾಗ ನಡುರಸ್ತೆಯಲ್ಲಿ ಹೈಡ್ರಾಮಾವೇ ನಡೆಯಿತು. ಸಂಸದೆ ಪ್ರಿಯಾಂಕಾ ವಾದ್ರಾ ಅವರು ಸಂವಿಧಾನದ ಪ್ರತಿ ಹಿಡಿದು ಕೆಲವು ಮಹಿಳೆಯರ ಜೊತೆ ರಸ್ತೆಯಲ್ಲೇ ಮಲಗಿದರು, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಸಹೋದರಿಗೆ ಬೆಂಗಾವಲಾಗಿ ನಿಂತರು. ಬಳಿಕ ಪೊಲೀಸರು ರಾಹುಲ್ ರನ್ನು ದರದರನೆ ಎಳೆದೊಯ್ದರು. ಪ್ರಿಯಾಂಕಾರನ್ನು ಹೊತ್ತೊಯ್ದು ಜಾಗ ತೆರವುಗೊಳಿಸಿದರು.

ದೇಶಾದ್ಯಂತ ಕಾಂಗ್ರೆಸ್‌ನಿಂದ ಇಂದು ಕರಾಳ ದಿನಾಚರಣೆ

ದೆಹಲಿಯಲ್ಲಿ ಪ್ರತಿಭಟಿಸಿದ ಮುಖಂಡರನ್ನು ವಶಕ್ಕೆ ಪಡೆದು ಪೊಲೀಸರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷ ಗುರುವಾರ ದೇಶಾದ್ಯಂತ ಕರಾಳ ದಿನ ಆಚರಿಸಲು ನಿರ್ಧರಿಸಿದೆ. ಇನ್ನು, ರಾಜಧಾನಿಯಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧ ದೆಹಲಿ ಪೊಲೀಸರು ಮೂರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ, ಸಾರ್ವಜನಿಕ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಪೊಲೀಸ್ ಅಧಿಕಾರಿಗಳೊದಿಗೆ ಅನುಚಿತ ವರ್ತನೆ ತೋರಿದ ಆರೋಪ ಮೇರೆಗೆ ವಿವಿಧ ಆರೋಪಗಳ ಮೇಲೆ ಎಫ್‌ಐಆರ್ ದಾಖಲು ಮಾಡಲಾಗಿದೆ.

ಪ್ರತಿಯೊಂದು ಎಫ್‌ಐಆರ್ ನನಗೆ ಪದಕ: ರಾಹುಲ್

ತಮ್ಮ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಕ್ಕೆ ರಾಹುಲ್ ಗಾಂಧಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. 'ನನ್ನ ವಿರುದ್ಧ 45 ಕೇಸ್ ಇವೆ. ಅವುಗಳ ಸಂಖ್ಯೆ 100 ಆಗಬೇಕೆಂಬುದು ನನ್ನ ಗುರಿ. ಪ್ರತಿ ಎಫ್‌ಐಆರ್ ಕೂಡ ನನಗೆ ಪದಕ' ಎಂದಿದ್ದಾರೆ. ದೇಶಾದ್ಯಂತ ಎಸ್‌ಆರ್‌ಆರ್‌ ವೇಳೆ ಕೃತ್ರಿಮಗಳಾಗಿರುವ 13 ಕೋಟಿ ಮತದಾರರ ಪತ್ತೆಹಚ್ಚಲು ಪ್ರತಿ ಬೂತ್‌ನಲ್ಲೂ ಮತರಕ್ಷಕರನ್ನು ನೇಮಿಸಲು ಕಾಂಗ್ರೆಸ್ ನಿರ್ಧರಿಸಿದೆ. ಆ.25ರಿಂದ ನ.25ರವರೆಗೆ ಇದಕ್ಕಾಗಿ ಅಭಿಯಾನ ನಡೆಸಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗಂಡನನ್ನು ಮಣ್ಣುಮಾಡಿದ ಬಳಿಕ ಸಿಕ್ಕ ಫೋನ್... ಆ ಒಂದು ಸುಳಿವು ಕೊ*ಲೆಯ ರಹಸ್ಯ ಬಿಚ್ಚಿಟ್ಟಿತು!
64 km ಹತ್ತಿರದ ಅರೇಬಿಯನ್ ಸಮುದ್ರ ಬಿಟ್ಟು 1400 km ದೂರದ ಬಂಗಾಳಕೊಲ್ಲಿಗೆ ಹರಿಯುವುದೇಕೆ?