ಕೇರಳ ರಾಜ್ಯಪಾಲರಿಗೆ ಕಪ್ಪುಬಾವುಟ ಪ್ರದರ್ಶಿಸಿದ SFI, ರಸ್ತೆಯಲ್ಲೇ ಧರಣಿ ಕುಳಿತ ಆರೀಫ್ ಮೊಹಮ್ಮದ್!

By Suvarna NewsFirst Published Jan 27, 2024, 4:29 PM IST
Highlights

ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಹಾಗೂ ಪಿಣರಾಯಿ ಸರ್ಕಾರದ ನಡುವಿನ ತಿಕ್ಕಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದೀಗ ಪಿಣರಾಯಿ ಪಕ್ಷದ ವಿದ್ಯಾರ್ಥಿ ಘಟಕ ಎಸ್‌ಎಫ್ಐ ರಾಜ್ಯಪಾಲರು ತೆರಳುತ್ತಿದ್ದ ಕಾರನ್ನು ಅಡ್ಡಗಟ್ಟಿ ಕಪ್ಪುಬಾವುಟ ಪ್ರದರ್ಶಿಸಿದ್ದಾರೆ. ರೊಚ್ಚೆಗ್ದದ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ನಡು ರಸ್ತೆಯಲ್ಲಿ ಧರಣಿ ಕುಳಿತಿದ್ದು, ಕೇರಳ ಸರ್ಕಾರ ತೀವ್ರ ಹಿನ್ನಡೆ ಅನುಭವಿಸಿದೆ.

ತಿರುವನಂತಪುರಂ(ಜ.27) ಕೇರಳದಲ್ಲಿ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ತಿಕ್ಕಾಟ ಹೆಚ್ಚಾಗಿದೆ.  ಆಡಳಿತ ಪಕ್ಷ ಸಿಪಿಐ(ಎಂ) ವಿರುದ್ಧ ಗುಡುಗಿದ್ದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ಧ ಇದೀಗ ಸಿಎಂ ಪಿಣರಾಯಿ ವಿಜಯನ್ ಪಕ್ಷದ ವಿದ್ಯಾರ್ಥಿ ಘಟಕ ಪ್ರತಿಭಟನೆ ಮಾಡಿದೆ. ರಾಜ್ಯಪಾಲರು ತೆರಳುತ್ತಿದ್ದ ಕಾರನ್ನು ಅಡ್ಡಗಟ್ಟಿ ಕಪ್ಪುಬಾವುಟ ಪ್ರದರ್ಶಿಸಿದೆ. ಇದು ಆರೀಫ್ ಖಾನ್ ರೊಚ್ಚಿಗೆಬ್ಬಿಸಿದೆ. ಕಾರಿನಿಂದ ಇಳಿದ ಆರಿಫ್ ಮೊಹಮ್ಮದ್, ಪಕ್ಕದ ಟಿ ಅಂಗಡಿಯಿಂದ ಕುರ್ಚಿ ಪಡೆದು ರಸ್ತೆಯಲ್ಲೇ ಧರಣಿ ಕುಳಿತಿದ್ದಾರೆ. ಎಸ್‌ಎಫ್ಐ ಕಪ್ಪುಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸುತ್ತಿದ್ದರೆ, ಪೊಲೀಸರು ಕೈಕಟ್ಟಿ ಅವರಿಗೆ ಬೆಂಬಲ ನೀಡುತ್ತಿದ್ದೀರಿ. ಕಾನೂನು ಕಾಪಾಡಬೇಕಾದ ನೀವು ಸರ್ಕಾರದ ಅಣತಿಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಆರೀಫ್ ಮೊಹಮ್ಮದ್ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಸಾಗುತ್ತಿದ್ದ ರಾಜ್ಯಾಪಾಲರ ಕಾರು ಹಾಗೂ ಬೆಂಗಾವಲು ವಾಹನ ತಡೆದ ಎಸ್‌ಎಫ್ಐ ಕಾರ್ಯಕರ್ತರು ಭಾರಿ ಪ್ರತಿಭಟನೆ ನಡೆಸಿದ್ದಾರೆ. ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ರಸ್ತೆ ತಡೆದು ರಾಜ್ಯಪಾಲರನ್ನು ಸಂಚರಿಸಲು ಅವಕಾಶವೇ ನೀಡಲಿಲ್ಲ. ಇತ್ತ ಪೊಲೀಸರು ಕೂಡ ಯಾವುದೇ ಕ್ರಮ ಕೈಗೊಳ್ಳದೆ ಮೂಕ ಪ್ರೇಕ್ಷಕರಾಗಿ ನಿಂತಿದ್ದರು. 

Latest Videos

ನನ್ನ ಮೇಲೆ ದಾಳಿಗೆ ಸಿಎಂ ಪಿಣರಾಯಿ ಸಂಚು: ಕೇರಳ ರಾಜ್ಯಪಾಲ ಗಂಭೀರ ಆರೋಪ

ಪೊಲೀಸರ ನಡೆ ಆರೀಫ್ ಮೊಹಮ್ಮದ್ ಖಾನ್ ಆಕ್ರೋಶ ಹೆಚ್ಚಿಸಿತು. ಕಾರಿನಿಂದ ಇಳಿದು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ನೇರವಾಗಿ ಪೊಲೀಸರು ಹಾಗೂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ಸಂಘರ್ಷ ಸುದೀರ್ಘ ದಿನಗಳಿಂದ ನಡೆಯುತ್ತಿದೆ. ನಿನ್ನೆಯಷ್ಟೇ ಸರ್ಕಾರದ ವಿರುದ್ದಧ ಸೇಡನ್ನು ಒಂದೂವರೆ ನಿಮಿಷ ಭಾಷಣದಲ್ಲಿ ಮುಗಿಸಿ ಅಕ್ರೋಶ ಹೊರಹಾಕಿದ್ದರು.

 

| "I will not leave from here. Police is giving them protection, " says Governor Arif Mohammed Khan after SFI activists held a protest against him in Kollam. Police present on the spot https://t.co/nQHF9PWqpr pic.twitter.com/RHFFBRCh9s

— ANI (@ANI)

 

ಕೇರಳ ವಿಧಾನಸಭೆಯ ಬಜೆಟ್‌ ಅಧಿವೇಶನದ ಮೊದಲ ದಿನ ಆರಿಫ್ ಮೊಹಮ್ಮದ್ ಖಾನ್, ಸರ್ಕಾರದ ವಿರುದ್ದ ಪರೋಕ್ಷವಾಗಿ ಆಕ್ರೋಶ ಹೊರಹಾಕಿದ್ದರು.  ವಿಧಾನಸಭೆಯ ಮೊದಲ ದಿನ ಸರ್ಕಾರ ಸಿದ್ಧಪಡಿಸಿದ ಭಾಷಣ ಓದುವ ಸಂಪ್ರದಾಯವನ್ನು ರಾಜ್ಯಪಾಲ ಆರಿಫ್ ಮೊಹಮ್ಮದ್‌ ಖಾನ್‌ ಕೇವಲ ಒಂದೂವರೆ ನಿಮಿಷದಲ್ಲಿ ಮುಗಿಸಿ ತೆರಳಿದ್ದರು. ಬೆಳಗ್ಗೆ 9 ಗಂಟೆಗೆ ವಿಧಾನಸಭೆಗೆ ಬಂದ ರಾಜ್ಯಪಾಲರು, 9.02ಕ್ಕೆ ಭಾಷಣ ಓದಲು ಆರಂಭಿಸಿ 9.04ಕ್ಕೆ ಮೊದಲೇ ಭಾಷಣ ಮುಗಿಸಿ ತೆರಳಿದರು. ಸರ್ಕಾರ ಸಿದ್ಧಪಡಿಸಿದ 62 ಪುಟಗಳ ಭಾಷಣದ ಮೊದಲ ಮತ್ತು ಕೊನೆಯ ಪ್ಯಾರಾವನ್ನು ಮಾತ್ರವೇ ಅವರು ಓದಿದರು. 

 

ಭಾರತದ ಅನ್ನ ತಿಂದವರು, ನೀರು ಕುಡಿದವರೆಲ್ಲರೂ ಹಿಂದುಗಳೇ, ನಾನೂ ಕೂಡ ಹಿಂದು: ಆರಿಫ್‌ ಮೊಹಮದ್‌!

click me!