ಕೇರಳ(ಜು.14): ವಿರೋಧ ಪಕ್ಷದ ಪ್ರತಿಭಟನೆ, ಆಡಳಿತ ಪಕ್ಷದ ಧರಣೆ, ಜನಪ್ರತಿನಿಧಿಗಳ ಹೋರಾಟಗಳು ಸಾಮಾನ್ಯ. ಆದರೆ ರಾಜ್ಯಪಾಲರೇ ಹೋರಾಟ ನಡೆಸುತ್ತಿರುವುದು ಅಪರೂಪ. ಇದೀಗ ಕೇರಳದಲ್ಲಿ ವರದಕ್ಷಿಣೆ ಪದ್ದತಿ, ಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯ ತೊಲಗಿಸಲು ಖುದ್ದು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಒಂದು ದಿನದ ಉಪವಾಸ ನಡೆಸಿದ್ದಾರೆ.
ಗಂಡನ ಮನೆ ಕಾಟ ತಾಳಲಾರೆ, ಮೆಸೇಜ್ ಕಳಿಸಿ ನೇಣಿಗೆ ಶರಣಾದ ನವವಿವಾಹಿತೆಕೇರಳದಲ್ಲಿ ಇತ್ತೀಚೆಗೆ ವರದಕ್ಷಿಣೆ ಕಿರುಕುಳದಿಂದ ಆತ್ಮಹತ್ಯೆ, ಕಿರುಕುಳ ನೀಡಿ ಕೊಲೆ ಸೇರಿದಂತೆ ಹಲವು ಪ್ರಕರಣಗಳು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಈ ಮೂಲಕ ಕೇರಳದಲ್ಲಿ ವರದಕ್ಷಿಣೆ, ಮಹಿಳೆ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ಸರ್ಕಾರವೇ ಅಧೀಕೃತ ವರದಿ ನೀಡಿತ್ತು. ಈ ಸಾಮಾಜಿಕ ಪಿಡುಗು ತೊಲಗಿಸಲು, ಸಾಮಾಜಿಕ ಜಾಗೃತಿ ಮೂಡಿಸಲು ರಾಜ್ಯಪಾಲರು ಇಂದು(ಜು.14) ಒಂದು ದಿನದ ಉಪಾವಸ ಕೈಗೊಂಡರು.
ಆರಿಫ್ ಮೊಹಮ್ಮದ್ ಖಾನ್ ಬೆಳಗ್ಗೆ 8 ರಿಂದ ಸಂಜೆ 6ರ ವರೆಗೆ ಉಪವಾಸ ಮಾಡಿದ್ದರು. ಈ ಉಪವಾಸದಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ರಾಜ್ಯಪಾಲರು ಸ್ಪಷ್ಟಪಡಿಸಿದ್ದರು. ಗಾಂಧಿ ಸ್ಮರ ನಿಧಿ ಸೇರಿದಂತೆ ಹಲವು ಸಂಘಟನೆಗಳು ಕೇಳದಲ್ಲಿ ವರದಕ್ಷಿಣೆ, ದೌರ್ಜನ್ಯ ವಿರುದ್ಧ ಅರಿವು ಮೂಡಿಸಿ ಉಪವಾಸ ಕೈಗೊಂಡಿತ್ತು. ಈ ಸಾಮಾಜಿಕ ಜಾಗೃತಿಗೆ ಬೆಂಬಲ ಸೂಚಿಸಲು ಕೇರಳ ರಾಜ್ಯಪಾಲ ಆರಿಫ್ ಖಾನ್ ಕೂಡ ಉಪವಾಸ ಮಾಡಿದ್ದಾರೆ.
6 ವರ್ಷದ ಬಾಲಕಿಯ 3 ವರ್ಷ ರೇಪ್ ಮಾಡಿ ಕೊಂದ CPI(M) ಕಾರ್ಯಕರ್ತರಾಜ್ಯಪಾಲರ ಉಪವಾಸದಿಂದ ಕೇರಳ ಸರ್ಕಾರಕ್ಕೆ ಮುಜುಗರವಾಗಿದೆ. ಕೇರಳದಲ್ಲಿ ವರದಕ್ಷಿಣೆ ಸೇರಿದಂತೆ ಹಲವು ಸಾಮಾಜಿಕ ಪಿಡುಗುಗಳ ತೀವ್ರವಾಗಿ ಮಹಿಳೆಯನ್ನು ಭಾದಿಸುತ್ತಿದ್ದರೂ ಸರ್ಕಾರ ಕೈಕಟ್ಟಿ ಕುಳಿತಿರುವುದೇ ಇದಕ್ಕೆ ಕಾರಣವಾಗಿದೆ. ರಾಜ್ಯಪಾಲರು ಉಪವಾಸ ಮಾಡುವಂತ ಪರಿಸ್ಥಿತಿಗೆ ಕೇರಳ ತಲುಪಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯಪಾಲರ ಉಪವಾಸ ಸತ್ಯಾಗ್ರಹಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ಸೂಚಿಸಿತ್ತು. ಕೇರಳದಲ್ಲಿನ ನಡೆಯುತ್ತಿರವ ಘಟನೆಗಳೇ ರಾಜ್ಯಪಾಲರ ಉಪವಾಸ ಸತ್ಯಾಗ್ರಹಕ್ಕೆ ಕಾರಣವಾಗಿದೆ. ಸರ್ಕಾರ ಈ ಕುರಿತು ಇನ್ನಾದರೂ ಎಚ್ಚೆತ್ತುಕೊಳ್ಳಲಿ ಎಂದು ಕೇರಳ ಬಿಜೆಪಿ ಹೇಳಿದೆ. ರಾಜ್ಯಪಾಲ ಉಪವಾಸಕ್ಕೆ ಕೇರಳ ಕಾಂಗ್ರೆಸ್ ಬೆಂಬಲ ಸೂಚಿಸಿಲ್ಲ. ಆದರೆ ಈ ಪರಿಸ್ಥಿತಿಗೆ ಸರ್ಕಾರದ ವೈಫಲ್ಯ ಕಾರಣ ಎಂದು ಕಾಂಗ್ರೆಸ್ ಅಧ್ಯಕ್ಷ ಕೆ ಸುಧಾಕರ್ ಹೇಳಿದ್ದಾರೆ.