ವಿಮಾನ ಹತ್ತಿದ ಸಂಸದನಿಗೆ ಅಚ್ಚರಿ; ಕಾರಣ ಪೈಲಟ್ ಕೂಡ ಸಂಸದ!

Published : Jul 14, 2021, 08:53 PM ISTUpdated : Jul 14, 2021, 08:55 PM IST
ವಿಮಾನ ಹತ್ತಿದ ಸಂಸದನಿಗೆ ಅಚ್ಚರಿ; ಕಾರಣ ಪೈಲಟ್ ಕೂಡ ಸಂಸದ!

ಸಾರಾಂಶ

ದೆಹಲಿಯಿಂದ-ಚೆನ್ನೈ ವಿಮಾನ ಹತ್ತಿದ ಸಂಸದ ದಯಾನಿಧಿ ಮಾರನ್  ಪೈಲೆಟ್ ನೋಡಿದ ದಯಾನಿಧಿ ಮಾರನ್‌ಗೆ ಕಾದಿತ್ತುಅಚ್ಚರಿ  ಪೈಲಟ್ ಕೂಡ ಸಂಸದ, ಇಂದು ಇದು ಅಪರೂಪದಲ್ಲಿ ಅಪರೂಪ

ನವದೆಹಲಿ(ಜು.14): ಡಿಎಂಕೆ ಸಂಸದ ದಯಾನಿದಿ ಮಾರನ್ ದೆಹಲಿಯಿಂದ ಚೆನ್ನೈ ವಿಮಾನ ಪ್ರಯಾಣ ಅತ್ಯಂತ ಸ್ಮರಣೀಯವಾಗಿಸಿದೆ. ಇದಕ್ಕೆ ಕಾರಣವನ್ನೂ ಮಾರನ್ ಬಹಿರಂಗ ಪಡಿಸಿದ್ದಾರೆ. ಸಂಸದೀಯ ಸಮಿತಿಯ ಸಭೆಯಲ್ಲಿ ಭಾಗವಹಿಸಿದ ಮಾರನ್, ಬಳಿಕ ದೆಹಲಿಯಿಂದ ಚೆನ್ನೈಗೆ ಪ್ರಯಾಣಿಸಲು ಇಂಡಿಗೋ ವಿಮಾನ ಹತ್ತಿದ್ದಾರೆ. ಈ ವಿಮಾನದ ಕ್ಯಾಪ್ಟನ್ ಸಂಸತ್ ಹಿರಿಯ ಸದಸ್ಯ, ಮಾಜಿ ಸಚಿವ ತಿರು ರಾಜೀವ್ ಪ್ರತಾಪ್ ರೂಡಿ. ಇದೇ ಮಾರನ್ ಅಚ್ಚರಿಗೆ ಕಾರಣವಾಗಿತ್ತು.

ಯುದ್ಧ ವಿಮಾನ ಏರಿದ ಕಣಿವೆ ರಾಜ್ಯದ ಮೊದಲ ಮಹಿಳಾ ಫೈಟರ್ ಪೈಲಟ್..!

ವಿಮಾನ ಹತ್ತಿದ ಮಾರನ್‌ಗೆ ಕ್ಯಾಪ್ಟನ್ ನೀವು ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೀರಿ ಎಂದಿದ್ದಾರೆ. ಈ ಧ್ವನಿ ಪರಿಚಿತವಾಗಿದೆ. ಆದರೆ ಮಾಸ್ಕ್ ಧರಿಸಿದ ಕಾರಣ ಯಾರು ಎಂದು ತಿಳಿಯದ ಮಾರನ್ ಕುತೂಹಲ ಮತ್ತಷ್ಟು ಹೆಚ್ಚಾಯಿತು.  ಕ್ಯಾಪ್ಟನ್ ನಗು ಹಾಗೂ ಮತ್ತೊಮ್ಮೆ ಧ್ವನಿ ಕೇಳಿದಾಗ ತಾನು ಪ್ರಯಾಣಿಸುತ್ತಿರುವ ವಿಮಾನದ ಕ್ಯಾಪ್ಟನ್ ನನ್ನ ಸಹೋದ್ಯೋಗಿ, ಆತ್ಮೀಯ  ಸಂಸದ ತಿರು ರಾಜೀವ್ ಪ್ರತಾಪ್ ರೂಡಿ. ಇದು ಕಲ್ಪಿಸಲು ಅಸಾಧ್ಯವಾಗುತ್ತಿದೆ ಎಂದು ದಯಾನಿಧಿ ಮಾರನ್ ಸಾಮಾಜಿಕ ಮಾಧ್ಯಮದಲ್ಲಿ ಈ ಘಟನೆ ಕುರಿತು ವಿವರವಾಗಿ ಹೇಳಿದ್ದಾರೆ. 

 

ಪೈಲೆಟ್‌ ಆಗಿ ಆಯ್ಕೆಯಾದ ಹಾವೇರಿಯ ಹಳ್ಳಿ ಯುವಕ

ಕೇವಲ 2 ಗಂಟೆಗಳ ಹಿಂದೆ, ನಾನು ಹಾಗೂ ರೂಡಿ ಸಂಸತ್ ಸಮಿತಿಯಲ್ಲಿ ತೀವ್ರವಾದ ಚರ್ಚೆಯ ಭಾಗಿಯಾಗಿದ್ದೆವು. ಇದೀಗ ಅವರೆ ವಿಮಾನದ ಕ್ಯಾಪ್ಟನ್. ನನ್ನ ಕಣ್ಣುಗಳನ್ನೇ ನಂಬಲು ಸಾಧ್ಯವಾಗಲಿಲ್ಲ. ರಾಜಕಾರಾಣಿ ಪೈಲೆಟ್ ಆಗಿ ರೂಪಾಂತಗೊಂಡಿದ್ದರು. ಈ ಪ್ರಯಾಣವನ್ನು ನೆನಪಿಡುವ ವಿಮಾನ ಎಂದು ಮಾರನ್ ಕರೆದಿದ್ದಾರೆ.

ಪ್ರತಿ ಗಂಟೆಗೆ 14 ಸಾವಿರ ಕೀ.ಮಿ ವೇಗದ ವಿಮಾನ; ಭೂಮಿಯ ಯಾವುದೇ ಮೂಲೆ ತಲುಪಲು 1 ಗಂಟೆ ಸಾಕು!

ಸಂಸತ್ ಸದಸ್ಯರೊಬ್ಬರು ವಾಣಿದ್ಯ ವಿಮಾನದ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಾರೆ ಎಂದರೆ ನಿಜಕ್ಕೂ ಆಶ್ಚರ್ಯ ಎಂದು ಮಾರನ್ ಹೇಳಿದ್ದಾರೆ. ಸಂಸದರನ್ನು ಕರೆದೊಯ್ದ ಮತ್ತೊರ್ವ ಸಂಸದ ಸುದ್ದಿ ಭಾರಿ ವೈರಲ್ ಆಗಿದೆ.

ರಾಜೀವ್ ಪ್ರತಾಪ್ ರೂಡಿ ಬಿಹಾರದ ಸರನ್ ಚಪ್ರ ಸಂಸದರಾಗಿದ್ದಾರೆ. ಇಷ್ಟೇ ಅಲ್ಲ ಬಿಜೆಪಿಯ ವಕ್ತಾರ ಕೂಡ ಹೌದು. ವೃತ್ತಿಯಲ್ಲಿ ಕಮರ್ಷಿಯಲ್ ಪೈಲೈಟ್ ಆಗಿರುವ ರೂಡಿ, ಇಂಡಿಗೋ ವಿಮಾನಯಾನದ ಏರ್‌ಬಸ್ 320 ಹಾರಾಟ ನಡೆಸಿದ ಏಕೈಕ ಸಂಸದ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಷ್ಟೇ ಅಲ್ಲ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ರೂಢಿ ಹೆಸರು ದಾಖಲಾಗಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮುಂಬೈ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಬಿಜೆಪಿ ಮೇಯರ್‌? ಕೇಸರಿ ಪಕ್ಷದ ಬಹುದೊಡ್ಡ ಕನಸು ನನಸಾಗುತ್ತಾ..
BMC Exit Poll: ಬಿಜೆಪಿ-ಶಿಂಧೆ ಸೇನೆಗೆ ಮುಂಬೈ ಅಧಿಕಾರ, ಮಣ್ಣುಮುಕ್ಕಿದ ಠಾಕ್ರೆ!