ವೇ ಅಲ್ಲ ಆಹಾ ಅನ್ನುವ ವಾಂತಿ ಇದು: ಕೇರಳದ ಮೀನುಗಾರನಿಗೆ ಸಿಕ್ತು 28 ಕೋಟಿ ಮೌಲ್ಯದ ತಿಮಿಂಗಿಲ 'ವಾಂತಿ'

By Anusha KbFirst Published Jul 24, 2022, 6:33 PM IST
Highlights

ಕೋಟ್ಯಾಂತರ ಮೌಲ್ಯದ ತಿಮಿಂಗಿಲ ಮಾಡಿದ ವಾಂತಿಯೊಂದು ಕೇರಳದ ಮೀನುಗಾರರೊಬ್ಬರಿಗೆ ಸಿಕ್ಕಿದೆ. ಬರೋಬ್ಬರಿ 28.400 ಕೆಜಿ ತೂಗುವ ಈ ತಿಮಿಂಗಿಲದ ವಾಂತಿಯ ಮೊತ್ತ ಬರೋಬ್ಬರಿ 28 ಕೋಟಿ ರೂ. 

ಕೊಚ್ಚಿ: ವಾಂತಿ ಎಂದರೆ ಸಾಮಾನ್ಯವಾಗಿ ನಾವೆಲ್ಲರೂ ಅಸಹ್ಯಪಟ್ಟುಕೊಳ್ಳುವುದೇ ಹೆಚ್ಚು ಏಕೆಂದರೆ ಮನುಷ್ಯರು ಮಾಡುವ ವಾಂತಿ ಅಸಹ್ಯವಾಗಿರುತ್ತೆ. ಆದರೆ ಮೀನುಗಳು ಮಾಡುವ ವಾಂತಿಗೆ ಸುಗಂಧದಿಂದ ಕೂಡಿರುತ್ತದೆ. ಅಲ್ಲದೇ ಇದಕ್ಕೆ ಕೋಟಿ ಕೋಟಿ ರೂ ಮೌಲ್ಯವಿದೆ. ಈಗ ಅದೇ ರೀತಿ ಕೋಟ್ಯಾಂತರ ಮೌಲ್ಯದ ತಿಮಿಂಗಿಲ ಮಾಡಿದ ವಾಂತಿಯೊಂದು ಕೇರಳದ ಮೀನುಗಾರರೊಬ್ಬರಿಗೆ ಸಿಕ್ಕಿದೆ. ಬರೋಬ್ಬರಿ 28.400 ಕೆಜಿ ತೂಗುವ ಈ ತಿಮಿಂಗಿಲದ ವಾಂತಿಯ ಮೊತ್ತ ಬರೋಬ್ಬರಿ 28 ಕೋಟಿ ರೂ. 

ದೂರ ಸಮುದ್ರದ ಮೀನುಗಾರಿಕೆ ವೇಳೆ ಸಿಕ್ಕ ಈ ಭಾರಿ ಮೊತ್ತದ ತಿಮಿಂಗಿಲ ವಾಂತಿಯನ್ನು ಶುಕ್ರವಾರ (ಜು.22) ಮೀನುಗಾರರು ತೀರಕ್ಕೆ ಎಳೆದು ತಂದಿದ್ದು, ಕರಾವಳಿಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಂಬರ್ಗ್ರಿಸ್ ಎಂದೂ ಕೂಡ ಕರೆಯಲ್ಪಡುವ ಈ ತಿಮಿಂಗಿಲ ವಾಂತಿಯನ್ನು ಮೀನುಗಾರರು ನಮಗೆ ಹಸ್ತಾಂತರಿಸಿದ್ದಾರೆ. ನಾವು ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದೆವು ಹಾಗೂ ಅವರು ಬಂದು ನಮ್ಮಿಂದ ಅದನ್ನು ಸ್ವೀಕರಿಸಿದರು ಎಂದು ಕರಾವಳಿ ಪೊಲೀಸರು ಸುದ್ದಿಸಂಸ್ಥೆ ಪಿಟಿಐಗೆ ಹೇಳಿದ್ದಾರೆ. 

ಒಂದೇ ಮೀನಿನಿಂದ ಕೋಟ್ಯಧಿಪತಿಯಾದ ಮೀನುಗಾರ ..!

ಅರಣ್ಯ ಇಲಾಖೆಯವರು ಈ ಅಂಬರ್ಗ್ರಿಸ್ ಅನ್ನು ಇದು ತಿಮಿಂಗಿಲ ವಾಂತಿಯೇ ಎಂದು ಖಚಿತಪಡಿಸಲು ನಗರದಲ್ಲಿರುವ ರಾಜೀವ್‌ ಗಾಂಧಿ ಬಯೋಟೆಕ್ನಾಲಜಿ ಕೇಂದ್ರಕ್ಕೆ (RGCB) ಸ್ಥಳಾಂತರಿಸಿದ್ದಾರೆ. ಮೂಲಗಳ ಪ್ರಕಾರ ಈ ಅಂಬರ್ಗ್ರಿಸ್ ಅನ್ನು ಸುಗಂಧದ್ರವ್ಯ ಮಾಡಲು ತಯಾರಿಸಲಾಗುತ್ತದೆ. ಅಲ್ಲದೇ ಒಂದು ಕೆಜಿ ಅಂಬರ್ಗ್ರಿಸ್‌ಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೋಟಿ ಬೆಲೆ ಇದೆ ಎಂದು ತಿಳಿದು ಬಂದಿದೆ. ಆದಾಗ್ಯೂ ಭಾರತದ ಕಾನೂನಿನಲ್ಲಿ ಇದರ ಮಾರಾಟಕ್ಕೆ ನಿಷೇಧವಿದೆ. ಈ ರೀತಿಯ ತಿಮಿಂಗಿಲಗಳು ಅಳಿವಿನಂಚಿನಲ್ಲಿರುವ ಸಮುದ್ರ ಪ್ರಭೇದವಾಗಿದ್ದು, ಇವುಗಳನ್ನು ವನ್ಯಜೀವಿ ರಕ್ಷಣಾ ಕಾಯ್ದೆಯಡಿ ರಕ್ಷಿಸಲಾಗುತ್ತದೆ. 

ತಿಮಿಂಗಿಲ ವಾಂತಿ ಎಂದರೆ ಏನು?

ತಿಮಿಂಗಿಲಗಳು ಸ್ರವಿಸುವ ವಾಂತಿಗಳು ಮೇಣದಂತೆ ಸಮುದ್ರದ ಮೇಲೆ ತೇಲುತ್ತದೆ. ಇವುಗಳಿಗೆ ಕೋಟ್ಯಾಂತರ ರೂ ಮೌಲ್ಯವಿದ್ದು, ಇವುಗಳನ್ನು ಸುಗಂಧದ್ರವ್ಯದ ತಯಾರಿಕೆಗೆ ಬಳಸಲಾಗುತ್ತದೆ. ಇವುಗಳಿಗೆ ಕಾನೂನಿನ ಅಡಿ ಅನುಮತಿ ಇಲ್ಲದ ಕಾರಣ ಅಕ್ರಮವಾಗಿ ಈ ವಾಂತಿಯನ್ನು ಸಂಗ್ರಹಿಸುವ ತಂಡಗಳೇ ಸಾಕಷ್ಟು ಇವೆ. 

ಬಲೆಗೆ ಬಿದ್ದ ಬೃಹತ್‌ ತಿಮಿಂಗಿಲ ಮರಳಿ ಸಮುದ್ರಕ್ಕೆ

ಕೆಲ ಮೀನುಗಳು ಮಾಡುವ ಮೇಣದಂತಹ ವಾಂತಿ 2 ರಿಂದ  3 ದಿನಗಳಲ್ಲಿ ಘನರೂಪ ಪಡೆದು ನಂತರ ಮೇಣದ ರೂಪಕ್ಕೆ ತಿರುಗುತ್ತದೆ. ಇದು ಘನರೂಪಕ್ಕೆ ಬಂದಾಗ ಹೆಚ್ಚಿನ ಪ್ರಮಾಣದ ಸುಗಂಧ ಇದರಿಂದ ಹೊರಬರುತ್ತದೆ. ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಇದನ್ನು ಹೇರಳವಾಗಿ ಬಳಸುತ್ತಾರೆ. ಅಂಬರ್‌ಗ್ರೀಸ್ ಎಂದು ಕರೆಯಲ್ಪಡುವ ಈ ಸುಗಂಧ ದ್ರವ್ಯ ಬಹಳ ದೀರ್ಘಕಾಲದವರೆಗೆ ಸುಗಂಧ ಬೀರುವುದು. ಸುಗಂಧ ದ್ರವ್ಯವಲ್ಲದೇ ಆಹಾರ ಹಾಗೂ ಪಾನೀಯಗಳಲ್ಲೂ ಇವುಗಳನ್ನು ಬಳಸಲಾಗುತ್ತದೆ ಎಂದು ತಿಳಿದು ಬಂದಿದೆ. ಹೀಗಾಗಿ ಅಕ್ರಮವಾಗಿ ಇವುಗಳನ್ನು ಮಾರಾಟ ಮಾಡುವ ದೊಡ್ಡ ದಂಧೆಯೇ ಇದೆ.  ನಾಯಿಗಳು ಈ ಅಂಬರ್‌ಗ್ರಿಸ್‌ ಅನ್ನು ಸುಲಭವಾಗಿ ಗುರುತಿಸುತ್ತವೆಯಂತೆ ಇದೇ ಕಾರಣಕ್ಕೆ ಇವುಗಳ ಶೋಧನೆಗೆ ಸಮುದ್ರಕ್ಕೆ ನಾಯಿಗಳನ್ನು ಕೂಡ ಕರೆದುಕೊಂಡು ಹೋಗಲಾಗುತ್ತದೆ. ಇವು ವಿವಿಧ ಆಕಾರ ಹಾಗೂ ಗಾತ್ರಗಳಲ್ಲಿ ಕಾಣ ಸಿಗುತ್ತವೆ. 
 

click me!