
ಕೇರಳ(ಮಾ.13): ಕೇರಳ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭಗೊಂಡಿದೆ. ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ, ಗಿಮಿಕ್ ಆರಂಭಿಸಿದೆ. ಇದರ ನಡುವೆ ಕೇರಳ ಕಾಂಗ್ರೆಸ್ ಇದೀಗ ತೀವ್ರ ಸಮಸ್ಯೆ ಎದುರಿಸುತ್ತಿದೆ. ಚುನಾವಣೆಗೆ ಕೆಲ ದಿನಗಳು ಬಾಕಿ ಇರುವಾಗಲೇ ಪಕ್ಷದ ಪ್ರಮುಖ ನಾಯಕರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಹಿರಿಯ ನಾಯಕ ಪಿಸಿ ಚಾಕೋ ಬೆನ್ನಲ್ಲೇ ಕೇರಳ ಕಾಂಗ್ರೆಸ್ ಮಾಜಿ ಮುಖ್ಯ ಕಾರ್ಯದರ್ಶಿ ವಿಜಯನ್ ಥೋಮಸ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡಿದ್ದಾರೆ.
ಸೋನಿಯಾಗೆ ಶಾಕ್ ಕೊಟ್ಟು ಕಾಂಗ್ರೆಸ್ ತೊರೆದ ಹಿರಿಯ ನಾಯಕ
ಪಿಸಿ ಚಾಕೋ ಕಾಂಗ್ರೆಸ್‌ಗೆ ವಿದಾಯ ಹೇಳಿದ ಮೂರೇ ದಿನಕ್ಕೆ ವಿಜಯನ್ ಥೋಮಸ್ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿ ಸೇರಿಕೊಂಡಿದ್ದಾರೆ. ಚುನಾವಣೆ ಬೆನ್ನಲ್ಲೇ ಪ್ರಮುಖ ಇಬ್ಬರು ನಾಯಕರು ಕಾಂಗ್ರೆಸ್ ತೊರೆದಿರುವುದು ಇದೀಗ ದೇಶದ ಅತ್ಯಂತ ಹಳೆ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಕೇರಳ ಕಾಂಗ್ರೆಸ್ ಇಬ್ಬಾಗವಾಗಿದೆ. ಎರಡು ಗುಂಪುಗಳಿವೆ. ಒಂದು ಮಾಜಿ ಮುಖ್ಯಮಂತ್ರಿ ಒಮ್ಮನ್ ಚಾಂಡಿ ಗುಂಪು, ಇನ್ನೊಂದು ರಮೇಶ್ ಚೆನ್ನಿತಲ ಗುಂಪು. ಈ ಎರಡು ಗಂಪುಗಳಲ್ಲಿ ಯಾವುದಾದರೂ ಒಂದು ಗಂಪಿಗೆ ಸೇರಿ ಅವರಿಗೆ ವಿಧೇಯರಾಗಿದ್ದರೆ ಮಾತ್ರ ಅವಕಾಶ. ಎರಡು ಗುಂಪುಗಳಿಂದ ಹೊರಗಿದ್ದರೆ, ಯಾರು ಕೇಳುವವರೆ ಇಲ್ಲ. ಹೈಕಮಾಂಕ್‌ಗೆ ಹಲವು ಬಾರಿ ಈ ಕುರಿತು ಸೂಚನೆ ನೀಡಿದ್ದರೂ ಪ್ರಯೋಜವಾಗಿಲ್ಲ ಎಂದು ವಿಜಯನ್ ಹೇಳಿದ್ದಾರೆ.
ಯುವಕರಿಗೆ ಹೆಚ್ಚು ಆದ್ಯತೆ ಕೊಟ್ಟು ತಪ್ಪು ಮಾಡಿದೆ: ರಾಹುಲ್ ಗಾಂಧಿ
ಇಬ್ಬಾಗವಾಗಿರುವ ಕೇರಳ ಕಾಂಗ್ರೆಸ್‌ನಲ್ಲಿ ಹಲವು ನಾಯಕರು ಅಸಮಾಧಾನಗೊಂಡಿದ್ದಾರೆ. ಪಕ್ಷವನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವ ಯಾವುದೇ ಕೆಲಸ ಆಗಿಲ್ಲ. ಹಲವು ನಾಯಕರು ಬಹಿರಂಗವಾಗಿ ಹೇಳಿಕೊಂಡಿಲ್ಲ, ಅಸಮಾಧಾನ ಸ್ಫೋಟಗೊಂಡರೆ ಕೇರಳ ಕಾಂಗ್ರೆಸ್ ಖಾಲಿಯಾಗಲಿದೆ ಎಂದು ಥಾಮಸ್ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ತೊರದು ಬಿಜೆಪಿ ಸೇರಿಕೊಂಡಿರುವ ವಿಜಯನ್ ಥೋಮಸ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮ್ಯಾಜಿಕ್ ವಿಶ್ವಾಸದಲ್ಲಿರುವ ಕೇರಳ ಬಿಜೆಪಿಗೆ ಇದೀಗ ಮತ್ತಷ್ಟು ಬಲ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ