G7 Summit ಹುಡುಕಿಕೊಂಡು ಬಂದು ಪ್ರಧಾನಿ ಮೋದಿ ಆಲಿಂಗಿಸಿ ಶುಭಾಶಯ ವಿನಿಮಯ ಮಾಡಿದ ಬೈಡನ್!

Published : May 20, 2023, 02:44 PM ISTUpdated : May 20, 2023, 06:00 PM IST
G7 Summit ಹುಡುಕಿಕೊಂಡು ಬಂದು ಪ್ರಧಾನಿ ಮೋದಿ ಆಲಿಂಗಿಸಿ ಶುಭಾಶಯ ವಿನಿಮಯ ಮಾಡಿದ ಬೈಡನ್!

ಸಾರಾಂಶ

ಜಿ7 ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯನ್ನು ಹುಡುಕಿಕೊಂಡು ಬಂದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹಸ್ತಲಾಘವ ಮಾಡಿ ಶುಭಾಶಯ ಮಿನಿಮಯ ಮಾಡಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.  

ಹಿರೋಶಿಮಾ(ಮೇ.20): ಜಪಾನ್‌ನ ಹಿರೋಶಿಮಾದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದಾರೆ. ಶೃಂಗಸಭೆ ಆರಂಭಕ್ಕೂ ಮುನ್ನ ವಿಶ್ವ ನಾಯಕರ ಜೊತೆ ಕುಳಿತಿದ್ದ ಪ್ರಧಾನಿ ಮೋದಿಯನ್ನು ಹುಡುಕಿಕೊಂಡು ಬಂದ ಜೋ ಬೈಡನ್ ಶುಭಾಶಯ ವಿನಿಮಯ ಮಾಡಿದ್ದಾರೆ. ಈಗಾಗಲೇ ಹಲವು ವಿಶ್ವ ವೇದಿಕೆಗಳಲ್ಲಿ ಜೋ ಬೈಡೆನ್ ಹಲವು ಬಾರಿ ಮೋದಿ ಬಳಿ ಬಂದು ಶುಭಾಶಯ ವಿನಿಮಯ ಮಾಡಿದ್ದಾರೆ. ಇದೀಗ ಜಿ7 ಶೃಂಗಸಭೆಯಲ್ಲಿ ಈ ದೃಶ್ಯ ವೈರಲ್ ಆಗಿದೆ.

ನಾಯಕರ ಜೊತೆ ಕುಳಿತಿದ್ದ ಮೋದಿ ಬಳಿಗೆ ಜೋ ಬೈಡೆನ್ ಬಂದಿದ್ದಾರೆ. ಬೈಡೆನ್ ನೋಡಿ ತಕ್ಷಣ ಆಸನದಿಂದ ಎದ್ದ ಮೋದಿ ಹಸ್ತಲಾಘವ ನೀಡಿದರು. ಆಲಂಗಿಸಿಕೊಂಡ ಮೋದಿ ಶುಭಾಶಯ ವಿನಿಮಯ ಮಾಡಿದರು. ಜೂನ್ ತಿಂಗಳಲ್ಲಿ ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಮಾಡಲಿದ್ದಾರೆ. ಜೂನ್ 21 ರಿಂದ 24 ವರೆಗೆ ಅಮೆರಿಕ ಪ್ರವಾಸ ಮಾಡಲಿರುವ ಮೋದಿ, ಹಲವು ಮಹತ್ವದ ಚರ್ಚೆ ಹಾಗೂ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲೂ ಇಂದಿನ ಭೇಟಿ ಮಹತ್ವದ ಪಡೆದುಕೊಂಡಿದೆ. 

 

 

ಮೋದಿಗೆ ಹಿರೋಶಿಮಾದಲ್ಲಿ ಭರ್ಜರಿ ಸ್ವಾಗತ: ಮೇ. 22ಕ್ಕೆ ಪಪುವಾ, ಆಸ್ಪ್ರೇಲಿಯಾಗೆ ಭೇಟಿ

ಜಿ7 ಶೃಂಗಸಭೆಗಾಗಿ ಪ್ರಧಾನಿ ಮೋದಿ ಮೇ.19 ರಂದು ಜಪಾನ್‌ಗೆ ತೆರಳಿದ್ದರು. ಇಂದು ಮಹತ್ವದ ಸಭೆಯಲ್ಲಿ ಮೋದಿ ಪಾಲ್ಗೊಂಡಿದ್ದಾರೆ.  ಜಪಾನ್‌, ಪಪುವಾ ನ್ಯೂಗಿನಿಯಾ ಮತ್ತು ಆಸ್ಪ್ರೇಲಿಯಾಗಳಿಗೆ ಭೇಟಿ ನೀಡಲಿದ್ದಾರೆ. ಒಟ್ಟು 6 ದಿನಗಳ ಕಾಲದ ಈ ಪ್ರವಾಸದಲ್ಲಿ ಅವರು 40ಕ್ಕೂ ಹೆಚ್ಚು ಮಾತುಕತೆಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ತಿಳಿಸಿದೆ. ಮೇ 19ರಿಂದ 21ರವರೆಗೆ ಜಪಾನ್‌ನ ಹಿರೋಶಿಮಾ ನಗರದಲ್ಲಿ ನಡೆಯುವ ಜಿ7 ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ನ್ಯೂಗಿನಿಯಾಗೆ ಭೇಟಿ ನೀಡಲಿದ್ದು, ಇಂಡೋ ಪೆಸಿಫಿಕ್‌ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಆಸ್ಪ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಮೋದಿ, ಆಸ್ಪ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೀಸ್‌ ಜೊತೆ ಹಲವು ವಿಷಯಗಳ ಕುರಿತು ಚರ್ಚಿಸಲಿದ್ದಾರೆ ಎಂದು ಸಚಿವಾಲಯ ಹೇಳಿದೆ.

ಕ್ವಾಡ್‌ ಶೃಂಗಸಭೆ ರದ್ದಾದ್ರೂ ಆಸ್ಪ್ರೇಲಿಯಾಗೆ ಪ್ರಧಾನಿ ಮೋದಿ ಭೇಟಿ; ಜೋ ಬೈಡೆನ್‌ ಭೇಟಿಯಾಗ್ತಾರಾ ಮೋದಿ?

ಹಿರೋಶಿಮಾಗೆ ಮೋದಿ ಬಂದಿಳಿಯುತ್ತಿದ್ದಂತೆಯೇ ಭರ್ಜರಿ ಸ್ವಾಗತ ನೀಡಲಾಗಿತ್ತು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಾರತೀಯ ಸಂಜಾತರು ಸಾಂಪ್ರದಾಯಿಕ ಭಾರತೀಯ ಉಡುಗೆಯಲ್ಲಿ ತ್ರಿವರ್ಣಧ್ವಜ ಹಿಡಿದು ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಮೋದಿ ಅವರನ್ನು ಹತ್ತಿರದಿಂದ ನೋಡಿದ್ದಲ್ಲದೆ, ಅವರ ಕೈಕುಲುಕಿ ಸಂಭ್ರಮಿಸಿದರು.  ವಿಶ್ವ ಎದುರಿಸುತ್ತಿರುವ ಸವಾಲುಗಳ ಗಗೆ ಅವರ ಜತೆ ಚರ್ಚಿಸಲಿದ್ದೇನೆ. ಇದೇ ವೇಳೆ ಕೆಲವು ನಾಯಕರ ಜತೆ ದ್ವಿಪಕ್ಷೀಯ ಮಾತುಕತೆಯನ್ನೂ ನಡೆಸುತ್ತೇನೆ ಎಂದು ಮೋದಿ ಹೇಳಿದ್ದರು. ನಂತರ ಮೇ 22ರಂದು ಪಪುವಾ ನ್ಯೂಗಿನಿಯಾ ದೇಶಕ್ಕೆ ಮೋದಿ ಭೇಟಿ ನೀಡಿ, ಅಲ್ಲಿನ ಭಾರತೀಯ ವೇದಿಕೆಯ 3ನೇ ಶೃಂಗದಲ್ಲಿ ಪಾಲ್ಗೊಂಡು, ಪಪುವಾ ಪ್ರಧಾನಿ ಜೇಮ್ಸ್‌ ಮಾರೇಪ್‌ ಅವರನ್ನು ಭೇಟಿ ಆಗಲಿದ್ದಾರೆ. ಪಪುವಾಗೆ ಭೇಟಿ ನೀಡುವ ಮೊದಲ ಪ್ರಧಾನಿ ಎಂಬ ಖ್ಯಾತಿಗೆ ಮೋದಿ ಪಾತ್ರರಾಗಲಿದ್ದಾರೆ. ಪ್ರವಾಸದ 3ನೇ ಚರಣದಲ್ಲಿ ಅವರು ಆಸ್ಪ್ರೇಲಿಯಾಗೆ ಮೇ 22ರಿಂದ 24ರವರೆಗೆ ಪ್ರವಾಸ ಕೈಗೊಲ್ಳಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​
ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana