ರಬ್ಬರ್ ತೋಟದಲ್ಲಿ ಇಂಗು ಗುಂಡಿ ತೆಗೆಯುತ್ತಿದ್ದಾಗ 200 ವರ್ಷಗಳಿಗೂ ಹಳೆಯ ನಿಧಿ ಪತ್ತೆ

By Anusha Kb  |  First Published Jul 14, 2024, 4:42 PM IST

ಮಳೆನೀರನ್ನು ಶೇಖರಿಸುವುದಕ್ಕಾಗಿ ಇಂಗು ಗುಂಡಿ ತೆಗೆಯುತ್ತಿದ್ದ ಕಾರ್ಮಿಕರಿಗೆ ಪುರಾತನ ನಿಧಿಯೊಂದು ಸಿಕ್ಕಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾರ್ಮಿಕರು ಇಂಗು ಗುಂಡಿ ತೆಗೆಯುತ್ತಿದ್ದಾಗ ಈ ಘಟನೆ ನಡೆದಿದೆ. 


ಕಣ್ಣೂರು: ಮಳೆನೀರನ್ನು ಶೇಖರಿಸುವುದಕ್ಕಾಗಿ ಇಂಗು ಗುಂಡಿ ತೆಗೆಯುತ್ತಿದ್ದ ಕಾರ್ಮಿಕರಿಗೆ ಪುರಾತನ ನಿಧಿಯೊಂದು ಸಿಕ್ಕಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾರ್ಮಿಕರು ಇಂಗು ಗುಂಡಿ ತೆಗೆಯುತ್ತಿದ್ದಾಗ ಈ ಘಟನೆ ನಡೆದಿದೆ. ಕೇರಳ ಕಣ್ಣೂರು ಜಿಲ್ಲೆಯ ಛೆಂಗಲೈ ಎಂಬಲ್ಲಿ ಇರುವ ಸರ್ಕಾರಿ ಶಾಲೆಯ ಆವರಣದಲ್ಲಿ ಇದ್ದ ರಬ್ಬರ್ ತೋಟದಲ್ಲಿ ಇಂಗು ಗುಂಡಿಯನ್ನು ತೆಗೆಯುತ್ತಿದ್ದಾಗ ಈ ಅಪರೂಪದ ನಿಧಿ ಕಾರ್ಮಿಕರಿಗೆ ಸಿಕ್ಕಿದೆ. 

ಆರಂಭದಲ್ಲಿ ಹೊಳೆಯುತ್ತಿದ್ದ ಈ ನಿಧಿಯನ್ನು ನೋಡಿದ ಕಾರ್ಮಿಕರು ಬಾಂಬ್ ಆಗಿರಬಹುದು ಎಂದು ಆತಂಕಗೊಂಡಿದ್ದಾರೆ. ಆದರೆ ನಿಧಿ ಇದ್ದ ಮಡಕೆ ಒಡೆದಾಗ ಅದರಲ್ಲಿ ಚಿನ್ನ ಹಾಗೂ ಬೆಳ್ಳಿ ನಾಣ್ಯಗಳು ಇರುವುದು ಗೊತ್ತಾಗಿದೆ. ಇದರಲ್ಲಿ ಒಟ್ಟು 177 ಮುತ್ತಿನ ಮಣಿಗಳು, 13 ಚಿನ್ನದ ಪದಕಗಳು, ಹಾಗೂ ಕಾಶಿ ಮಾಲಾ ಎಂದು ಕರೆಯಲಾಗುವ ಸಾಂಪ್ರದಾಯಿಕ ಆಭರಣದ ಭಾಗವೆಂದು ನಂಬಲಾಗಿರುವ ಇನ್ನೂ 4 ಪದಕಗಳು ಸಿಕ್ಕಿವೆ. ಇದರ ಜೊತೆಗೆ ಕಿವಿಯೋಲೆ ಉಂಗುರ ಹಾಗೂ ಬೆಳ್ಳಿ ನಾಣ್ಯಗಳ ಒಂದು ಸೆಟ್ ಪತ್ತೆಯಾಗಿದೆ. 

Latest Videos

undefined

ಭೂಮಿ ಆಗೆಯುವಾಗ ಪವಾಡ, ತ್ರಿಶೂಲ, ಉಂಗುರ ಸೇರಿ ಚಿನ್ನದ ನಿಧಿಗೆ ಕಾವಲಿತ್ತು ನಾಗರ ಹಾವು!

ಮಳೆನೀರಿನ ಮರುಪೂರಣಕ್ಕಾಗಿ ಹೊಂಡ ತೋಡುತ್ತಿದ್ದ ಕಾರ್ಮಿಕರಲ್ಲಿ ಒಬ್ಬರಾದ ಆಯೇಷಾ ಎಂಬುವವರಿಗೆ ಇದು ಮೊದಲಿಗೆ ಕಾಣಿಸಿದೆ. ಈ ಬಗ್ಗೆ ಮಾತನಾಡಿದ ಅವರು, ಹೊಂಡ ತೆಗೆಯುತ್ತಿದ್ದಾಗ ಹಳೆಯದಾದ ಪೆಟ್ಟಿಗೆಯೊಂದು ಕಾಣಿಸಿತ್ತು, ಅದನ್ನು ಪಕ್ಕಕ್ಕಿಟ್ಟು  ನಾನು ಕೆಲಸ ಮುಂದುವರೆಸಿದೆ. ಆದರೆ ನಮ್ಮ ಜೊತೆಗೆ ಇದ್ದ ಒಬ್ಬರು ಇದು ಮಾಟ ಮಂತ್ರಕ್ಕೆ ಬಳಸಿದ ವಸ್ತು ಏನಾದರೂ ಇರಬಹುದ ಎಂದು ಭಯಗೊಂಡರು ಎಂದರು. ಮತ್ತೊಬ್ಬ ಕೆಲಸಗಾರ್ತಿ ಸುಲೋಚನ ಎಂಬುವವರು ಮಾತನಾಡಿ, ನಾವು ಈ ಪೆಟ್ಟಿಗೆಯ ಪಕ್ಕದಲ್ಲೇ ಹೊಳೆಯುವ ವಸ್ತುಗಳನ್ನು ಕಂಡೆವು. ನಂತರ ಈ ಪೆಟ್ಟಿಗೆಯನ್ನು ತೆಗೆದು ನೋಡಿದಾಗ ಅದರಲ್ಲಿ ನಿಜವಾದ ಆಭರಣ ಹಾಗೂ ಪದಕಗಳಿದ್ದವು. ಕೂಡಲೇ ನಾವು ಪಂಚಾಯತ್ ಅಧಿಕಾರಿಗಳಿಗೆ ವಿಚಾರ ತಿಳಿಸಿದೆವು. ಈ ವೇಳೆ ಅವರು ಬಾಕ್ಸನ್ನು ಮುಟ್ಟದೇ ಹಾಗೆ ಬಿಡುವಂತೆ ನಮಗೆ ಸೂಚಿಸಿದರು.

ಈ ಮಧ್ಯೆ ಶ್ರೀಕಂದಪುರಂ ಪೊಲೀಸರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಈ ವಿಚಾರಕ್ಕೆ ಸಂಬಂಧಿಸಿದಂತೆ ನಾವು ರಾಜ್ಯ ಪುರಾತತ್ವ ಇಲಾಖೆಗೆ ಪತ್ರ ಬರೆದಿದ್ದು, ಈ ನಿಧಿಯನ್ನು ಸುಪರ್ದಿಗೆ ಪಡೆಯುವಂತೆ ಸೂಚಿಸಿದ್ದೇವೆ. ಅವರ ಸೂಚನೆಯಂತೆ ಈ ನಿಧಿಯನ್ನು ತಲಿಪರಂಭಾ ಆರ್‌ಡಿಒ ಕೋರ್ಟ್‌ ಮುಂದೆ ಹಾಜರುಪಡಿಸಿದ್ದೇವೆ ಎಂದರು. ಇದಾದ ನಂತರವೂ ಇದೇ ಜಾಗದ ಸಮೀಪದಲ್ಲೇ ಇನ್ನೂ 3 ಬೆಳ್ಳಿ ನಾಣ್ಯಗಳು, ಮುತ್ತುಗಳು ಕಾಣಿಸಿವೆ ಎಂದು ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಛೆಂಗಲೈ ಪಂಚಾಯತ್ ಅಧ್ಯಕ್ಷ ವಿ.ಪಿ. ಮೋಹನನ್  ಶನಿವಾರ ಮತ್ತೆ ಸಿಕ್ಕಂತಹ ಆಭರಣಗಳು ಬಹುಶಃ ಶುಕ್ರವಾರ ಸಿಕ್ಕಂತಹ ಪೆಟ್ಟಿಗೆಯಿಂದ ಬಿದ್ದಂತಹದ್ದಾಗಿರಬಹುದು ಎಂದಿದ್ದಾರೆ. 

ಈಶ್ವರ ದೇವಾಲಯ ಆವರಣದಲ್ಲಿ ನಿಧಿ ಪತ್ತೆ: ಸರ್ಕಾರದ ಪಾಲಾದ ಚಿನ್ನದ ನಾಣ್ಯ, ಸರ, ಮಾಲೆಗಳು

ಇಲ್ಲಿ ಸಿಕ್ಕಂತಹ ನಿಧಿಯೂ 200 ವರ್ಷಗಳ ಹಿಂದಿನ ಕಾಲಘಟ್ಟಕ್ಕೆ ಸೇರಿದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ. ನಾಣ್ಯಗಳಲ್ಲಿರುವ ಗುರುತುಗಳನ್ನು ಗಮನಿಸಿ ಪುರಾತತ್ವ ಇಲಾಖೆ ಇದು 18ನೇ ಶತಮಾನಕ್ಕಿಂತಲೂ ಹಿಂದಿನದ್ದಾಗಿರಬಹುದು ಎಂದು ಅಂದಾಜಿಸಿದೆ. ಇಲ್ಲಿ ಸಿಕ್ಕ ಕೆಲ ನಾಣ್ಯಗಳು ಪುದುಚೇರಿ ಇಂಡೋ ಫ್ರೆಂಚ್‌ ನಾಣ್ಯಗಳನ್ನು ಹೋಲುತ್ತವೆ. ಹಾಗೆಯೇ ಉಳಿದವರು ಛಿರಕ್ಕಲ ಸಾಮ್ರಾಜ್ಯದ ಅಲಿ ರಾಜನ ಕಾಲಘಟಕ್ಕೆ ಸೇರಿದಂತೆ ಕಾಣುತ್ತಿದೆ. ಸಿಕ್ಕಂತಹ ನಿಧಿಯ ಸತ್ಯಾಸತ್ಯತೆ ಬಗ್ಗೆ ಯಾವುದೇ ಸಂಶಯವಿಲ್ಲ ಎಂದು ಕೋಜಿಕ್ಕೋಡ್‌ನ  ಪಝಸ್ಸಿ ರಾಜಾ ಪುರಾತತ್ವ ಇಲಾಖೆಯ  ಮ್ಯೂಸಿಯಂನ ಕೆ ಕೃಷ್ಣರಾಜ ಎಂಬುವವರು ಹೇಳಿದ್ದಾರೆ. 

click me!