
ಮುಂಬೈ(ಜೂ.14): ವೈದ್ಯಕೀಯ ಶಿಕ್ಷಣದ ವೇಳೆ ಅಧ್ಯಯನಕ್ಕೆ ಬಳಸುವ ಪುರುಷ ಶವಗಳ(Male corpses) ಕುರಿತು ಸ್ಟ್ಯಾಂಡ್-ಅಪ್ ಕಾಮಿಡಿ ಶೋ(Stand-up comedy show)ನಲ್ಲಿ ಅಸಭ್ಯಕರವಾಗಿ ಮಾತನಾಡಿದ್ದ ವೈದ್ಯಕೀಯ ವಿದ್ಯಾರ್ಥಿನಿ ಸೇಜಲ್ ಪವಾರ್(Sejal Pawar)ಗೆ 15 ದಿನಗಳ ಕಡ್ಡಾಯ ರಜೆ ನೀಡಲಾಗಿದೆ.
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರ ವೇಳೆ ನಿರೂಪಕ ಕೇಳಿದ ಪ್ರಶ್ನೆಗೆ ಸೇಜಲ್ ವಿವಾದಿತ ಉತ್ತರ ನೀಡಿದ್ದರು. ಇದು ಭಾರೀ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ ಆಕೆ ಬಹಿರಂಗವಾಗಿ ಕ್ಷಮೆ ಕೇಳಿದ್ದರು. ಅದರ ನಡುವೆಯೇ ಮುಂಬೈನ ಕೆಇಎಂ ಆಸ್ಪತ್ರೆ(mumbai KEM Hospital)ಯು 15 ದಿನಗಳ ಕಾಲ ಬರದಂತೆ ಸೂಚಿಸಿದೆ.
ಇದೇ ಕಾರ್ಯಕ್ರಮದಲ್ಲಿ, ಇನ್ನಿಬ್ಬರು ಯುವಕರು ಹೆಣ್ಣುಮಕ್ಕಳ ಬಗ್ಗೆ ಅಶ್ಲೀಲವಾಗಿ ಮಾತನಾಡಿದ ಘಟನೆಯೂ ನಡೆದಿದೆ. ಈ ಹೇಳಿಕೆಗಳು ಭಾರಿ ವೈರಲ್ ಆಗಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿವೆ.
ಪ್ರಣೀತ್ ಮೋರೆ ನಡೆಸುವ ಸ್ಟ್ಯಾಂಡ್-ಅಪ್ ಕಾಮಿಡಿ ಶೋನಲ್ಲಿ ಭಾಗವಹಿಸಿದ್ದ ಸೇಜಲ್ ಪುರುಷ ಶವಗಳ ಜನನಾಂಗದ ಬಗ್ಗೆ ಮತ್ತು ಹಿಮಾಂಶು ಜಂಗ್ರಾ, ಡೇಟ್‌ಗೆ ತೆರಳುವ ಹೆಣ್ಣುಮಕ್ಕಳ ಜತೆ ಶಾರೀರಿಕ ಸಂಬಂಧ ಬೆಳೆಸುವ ವಿಚಾರವಾಗಿ ಅಶ್ಲೀಲವಾಗಿ ಮಾತಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
AIMSA strongly condemns the insensitive and disrespectful portrayal of cadavers and body donors for entertainment or comedy.@Rj_pranit ,#Sejal Pawar (MBBS Student).
Every cadaver represents a noble individual who chose to contribute to medical education through body donation,… pic.twitter.com/fc8mQnj3Bk— ALL INDIA MEDICAL STUDENTS' ASSOCIATION (@official_aimsa) June 11, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ