
ಕೊಚ್ಚಿ (ಜೂ.14): ಮೇ 26ರಂದು ವಾಯುದಾಳಿಗೆ ತುತ್ತಾಗಿದ್ದ ನೌಕೆಯೊಂದರ ಇಂಧನ ಟ್ಯಾಂಕ್‌ನಲ್ಲಿ ಸ್ಫೋಟಿಸದೆ ಇದ್ದ ಕ್ಷಿಪಣಿ(Missile)ಯ ಸಿಡಿತಲೆಯನ್ನು ಭಾರತೀಯ ನೌಕಾಪಡೆ(Indian Navy) ಯಶಸ್ವಿಯಾಗಿ ಹೊರತೆಗೆದಿದೆ.
ಯುಎಇಯಿಂದ ತೈಲ ಹೊತ್ತು ಕೇರಳದ ಕೊಚ್ಚಿ ಕಡೆ ಹೊರಟಿದ್ದ ಮಾರ್ಶಲ್ ದ್ವೀಪದ ಧ್ವಜವಿದ್ದ ಎಂಪಿ ಒಲಿಂಪಿಕ್ ಲೈಫ್ ಹಡಗಿನ ಮೇಲೆ ಒಮಾನ್ ಕರಾವಳಿಯಲ್ಲಿ ದಾಳಿಯಾಗಿತ್ತು. ಕ್ಷಿಪಣಿಯೊಂದು ಹಲವು ವಿಭಾಗಗಳನ್ನು ಭೇದಿಸಿ ಇಂಧನ ಸಂಗ್ರಹಿಸಿಟ್ಟಿದ್ದ ವಿಭಾಗವನ್ನು ಹೊಕ್ಕಿತ್ತು. ಇದರ ಹೊರತಾಗಿಯೂ ನೌಕೆ 2 ಸಾವಿರ ಕಿ.ಮೀ. ಪ್ರಯಾಣಿಸಿ ಕೊಚ್ಚಿಯನ್ನು ತಲುಪಿತ್ತು.
ಇದನ್ನೂ ಓದಿ: US-Iran war updates: 'ಇಂಧನ ಮಾರುಕಟ್ಟೆಯನ್ನೇ ಉಡೀಸ್ ಮಾಡ್ತೇವೆ' ಟ್ರಂಪ್ ಬೆದರಿಕೆಗೆ ಇರಾನ್ ತಿರುಗೇಟು
ವಿಶೇಷ ಸ್ಫೋಟಕ ವಿಲೇವಾರಿ ತಂಡ(Special Explosive Ordnance Disposal Team)
ಇಲ್ಲಿ ವಿಶೇಷ ಸ್ಫೋಟಕ ವಿಲೇವಾರಿ ತಂಡ(Special Explosive Ordnance Disposal Team)ದ ಸಿಬ್ಬಂದಿ ಸಿಡಿತಲೆಯನ್ನು ಜತನದಿಂದ ಹೊರತೆಗೆದು ನಿಷ್ಕ್ರಿಯಗೊಳಿಸಿದ್ದಾರೆ. ಈ ಬಗ್ಗೆ ರಕ್ಷಣಾ ಸಚಿವಾಲಯ ಜೂ.11ರಂದು ಮಾಹಿತಿ ನೀಡಿದ್ದು, ‘ವಿಶೇಷ ಕಾಳಜಿಯಿಂದ ಯೋಜಿಸಿ ಕೈಗೊಳ್ಳಲಾದ ಅಪಾಯಕಾರಿ ಕಾರ್ಯಾಚರಣೆ’ ಎಂದು ಇದನ್ನು ಬಣ್ಣಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ