ಕೇಮ್‌ಛೋ ಟ್ರಂಪ್‌’ ಗುಜರಾತಲ್ಲಿ ಬೇಡ, ದಿಲ್ಲಿಯಲ್ಲಾಗಲಿ: ಅಮೆರಿಕ ಪಟ್ಟು

By Kannadaprabha NewsFirst Published Jan 24, 2020, 10:46 AM IST
Highlights

‘ಕೇಮ್‌ಛೋ ಟ್ರಂಪ್‌’ ಗುಜರಾತಲ್ಲಿ ಬೇಡ, ದಿಲ್ಲಿಯಲ್ಲಾಗಲಿ: ಅಮೆರಿಕ ಪಟ್ಟು|  ಭಾರತಕ್ಕೆ ಫೆಬ್ರವರಿಯಲ್ಲಿ ಭೇಟಿ ನೀಡಲು ಉದ್ದೇಶಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 

ನವದೆಹಲಿ[ಜ.24]: ಭಾರತಕ್ಕೆ ಫೆಬ್ರವರಿಯಲ್ಲಿ ಭೇಟಿ ನೀಡಲು ಉದ್ದೇಶಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ಭಾರತೀಯರನ್ನು ಉದ್ದೇಶಿಸಿ ಸಾರ್ವಜನಿಕ ಭಾಷಣ ಮಾಡುವ ಸಾಧ್ಯತೆ ಇದೆ. ಆದರೆ ಈ ಭಾಷಣ ಕಾರ್ಯಕ್ರಮವನ್ನು ಗುಜರಾತ್‌ನಲ್ಲಿ ಆಯೋಜಿಸಬೇಕೋ ಆಥವಾ ದಿಲ್ಲಿಯಲ್ಲೋ ಎಂಬ ಗೊಂದಲ ಸೃಷ್ಟಿಯಾಗಿದೆ.

ಕಳೆದ ವರ್ಷ ಅಮೆರಿಕದ ಹೂಸ್ಟನ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾಗ ‘ಹೌಡಿ ಮೋದಿ’ ಎಂಬ ಮೋದಿ ಅವರ ಸಾರ್ವಜನಿಕ ಭಾಷಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕೆ ತಲೆದೂಗಿದ್ದ ಟ್ರಂಪ್‌ ಅವರು ಗುಜರಾತ್‌ನಲ್ಲಿ ‘ಕೇಮ್‌ಛೋ ಟ್ರಂಪ್‌’ (ಹೇಗಿದ್ದೀರಿ ಟ್ರಂಪ್‌?) ಎಂಬ ಸಾರ್ವಜನಿಕ ಭಾಷಣ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು.

ಆದರೆ, ಟ್ರಂಪ್‌ ಅವರಿಗೆ ಸಮಯಾಭಾವ ಇರುವ ಕಾರಣ ಅವರು ದಿಲ್ಲಿ ಹೊರತಾಗಿ ಬೇರೆಲ್ಲೂ ಹೋಗಲು ಇಚ್ಛಿಸುತ್ತಿಲ್ಲ. ‘ಕೇಮ್‌ಛೋ ಟ್ರಂಪ್‌’ ದಿಲ್ಲಿಯಲ್ಲೇ ನಡೆಯಲಿ ಎಂಬ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ.

ಆದರೆ, ‘ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ಕಾರಣ ಭಾರತವು ದಿಲ್ಲಿಯಲ್ಲಿ ಇದರ ಆಯೋಜನೆಗೆ ಒಪ್ಪುತ್ತಿಲ್ಲ. ಗುಜರಾತ್‌ನಲ್ಲೇ ನಡೆಯಲಿ ಎಂಬ ಆಶಾಭಾವ ಹೊಂದಿದೆ.

ಅಲ್ಲದೆ, ಅಮೆರಿಕದಲ್ಲಿ ಗುಜರಾತ್‌ ಮೂಲದ ಮತದಾರರು ಸಾಕಷ್ಟುಇದ್ದಾರೆ. ಮುಂಬರುವ ಚುನಾವಣೆಯಲ್ಲಿ ಇವರನ್ನು ಓಲೈಸಲು ಗುಜರಾತ್‌ನಲ್ಲೇ ‘ಕೇಮ್‌ಛೋ ಟ್ರಂಪ್‌’ ಆಯೋಜನೆಯಾಗಲಿ ಎಂಬುದು ಭಾರತ ಸರ್ಕಾರದ ಅನಿಸಿಕೆ ಎಂದು ಮೂಲಗಳು ಹೇಳಿವೆ.

click me!