
ರಿಯಾದ್[ಜ.24]: ನೆರೆಯ ರಾಷ್ಟ್ರ ಚೀನಾದಲ್ಲಿ 17 ಮಂದಿಯನ್ನು ಬಲಿಪಡೆದಿರುವ ಕೊರೊನಾ ವೈರಾಣು, ಇದೀಗ ಸೌದಿ ಅರೇಬಿಯಾದಲ್ಲಿ ಶುಶ್ರೂಷಕಿ(ನರ್ಸ್)ಆಗಿ ಕಾರ್ಯ ನಿರ್ವಹಿಸುತ್ತಿರುವ ಕೇರಳ ಮೂಲದ ಮಹಿಳೆಯೊಬ್ಬರಲ್ಲಿ ಕಾಣಿಸಿಕೊಂಡಿದೆ ಎಂಬ ಆತಂಕದ ಸುದ್ದಿ ಹೊರಬಿದ್ದಿದೆ. ಈ ಮೂಲಕ ಕೊರೊನಾ ವೈರಸ್‌ಗೆ ತುತ್ತಾದ ಭಾರತದ ಮೊದಲ ಮಹಿಳೆಯಾಗಿದ್ದಾರೆ.
ಆಸಿರ್ ಅಭಾ ಅಲ್ ಹಯಾತ್ ನ್ಯಾಷನಲ್ ಹಾಸ್ಪಿಟಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇರಳದ ಕೊಟ್ಟಾಯಂ ಮೂಲದ ನರ್ಸ್, ಸೋಂಕಿಗೆ ತುತ್ತಾದವರು ಎಂದು ತಿಳಿದುಬಂದಿದೆ. ಆದರೆ ಅವರ ಹೆಸರನ್ನು ಬಹಿರಂಗಪಡಿಸಲಾಗಿಲ್ಲ. ಆಸ್ಪತ್ರೆಗೆ ದಾಖಲಾಗಿದ್ದ ಫಿಲಿಪ್ಪೀನ್ಸ್ ಮೂಲದ ಮಹಿಳೆಯೊಬ್ಬರಿಂದ ನರ್ಸ್‌ಗೆ ಸೋಂಕು ತಗುಲಿದೆ ಎನ್ನಲಾಗಿದೆ.
ಕರೋನಾ ವೈರಸ್: ಏರ್ಪೋರ್ಟಲ್ಲಿ 493 ಪ್ರಯಾಣಿಕರ ತಪಾಸಣೆ
ಮತ್ತೊಂದೆಡೆ, ಕೊರೊನಾ ವೈರಸ್‌ಗೆ ತುತ್ತಾಗಿರಬಹುದು ಎಂಬ ಗುಮಾನಿ ಮೇರೆಗೆ ಸೌದಿಯಲ್ಲಿರುವ ಕೇರಳದ ಇತರ 30 ನರ್ಸ್‌ಗಳನ್ನು ಪ್ರತ್ಯೇಕ ಕೋಣೆಯಲ್ಲಿಟ್ಟು, ತೀವ್ರ ನಿಗಾವಹಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಏತನ್ಮಧ್ಯೆ, ಸೌದಿಯಲ್ಲಿ ಕೊರೊನಾ ವೈರಸ್‌ಗೆ ತುತ್ತಾಗಿರುವ ಕೇರಳ ನರ್ಸ್‌ಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಅವರ ರಕ್ಷಣೆಗಾಗಿ ಮಧ್ಯಸ್ಥಿಕೆ ವಹಿಸಬೇಕು ಎಂದು ಕೋರಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಕೇಂದ್ರ ವಿದೇಶಾಂಗ ಇಲಾಖೆಗೆ ಪತ್ರ ಬರೆದಿದ್ದಾರೆ.
ಜಗತ್ತಿನ ನಿದ್ದೆಗೆಡಿಸಿದೆ ಮಾರಕ ಕರೋನಾ ವೈರಸ್: ಏನಿದು ಕಾಯಿಲೆ? ಗುಣಲಕ್ಷಣಗಳೇನು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ