ಕಾವ್ಯ ಮಾರನ್-ಅನಿರುದ್ದ್ ಮದುವೆ ಡೇಟ್ ಫಿಕ್ಸ್‌; ಪ್ರಧಾನಿ ಮೋದಿ, ಸಿಎಂ ವಿಜಯ್‌ಗೂ ಬಂದು ಆಹ್ವಾನ..!

Published : Oct 17, 2026, 03:21 PM IST
kavya maran anirudh ravichander

ಸಾರಾಂಶ

ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಹ ಒಡತಿ ಕಾವ್ಯಾ ಮಾರನ್ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ನವೆಂಬರ್ 21ರಂದು ಚೆನ್ನೈನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ವಿವಾಹ ಮಹೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ.

ಬೆಂಗಳೂರು: ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಹ ಒಡತಿ ಕಾವ್ಯಾ ಮಾರನ್ ಮತ್ತು ಮ್ಯೂಸಿಕ್ ಕಂಪೋಸರ್ ಅನಿರುದ್ಧ್ ರವಿಚಂದರ್ ಮುಂಬರುವ ನವೆಂಬರ್‌ನಲ್ಲಿ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಮದುವೆ ಕಾರ್ಯಕ್ರಮಕ್ಕೆ ದೇಶದ ಅಗ್ರಗಣ್ಯ ನಾಯಕರು ಸಾಕ್ಷಿಯಾಗಲಿದ್ದಾರೆ.

ಹೌದು, ಸನ್‌ ಗ್ರೂಪ್ ಚೇರ್ಮನ್‌ ಕಲಾನಿಧಿ ಮಾರನ್ ಹಾಗೂ ಅವರ ಪತ್ನಿ ಕಾವೇರಿ ಮಾರನ್ ಈಗಾಗಲೇ ತಮ್ಮ ಮಗಳ ಮದುವೆಗೆ ಪ್ರಧಾನಿ ನರೇಂದ್ರ ಮೋದಿ, ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಹಾಗೂ ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್‌ಗೆ ಆಹ್ವಾನ ಪತ್ರಿಕೆಯನ್ನು ನೀಡಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದ್ದಾರೆ.

ಕಾವ್ಯಾ ಮಾರನ್ ಮದುವೆ ಅರತಕ್ಷತೆ ನವೆಂಬರ್ 21ಕ್ಕೆ ನಿಗದಿ:

ಅಂದಹಾಗೆ ಕಾವ್ಯಾ ಮಾರನ್ ಹಾಗೂ ಅನಿರುದ್ದ ರವಿಚಂದರ್ ಅವರ ಮದುವೆಯು ಮುಂಬರುವ ನವೆಂಬರ್ 21ರಂದು ಚೆನ್ನೈನಲ್ಲಿ ನಡೆಯಲಿದೆ. ಅರತಕ್ಷತೆ ಕಾರ್ಯಕ್ರಮದಲ್ಲಿ ಹಲವು ದಿಗ್ಗಜ ರಾಜಕೀಯ ನಾಯಕರು, ಸಿನಿಮಾ ತಾರೆಯರು ಹಾಗೂ ಸ್ಟಾರ್ ಕ್ರಿಕೆಟರ್ಸ್ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕಲಾನಿಧಿ ಹಾಗೂ ಕಾವ್ಯಾ ಮಾರನ್ ಜತೆಗೆ ಅನಿರುದ್ದ್ ಅವರ ಪೋಷಕರಾದ ನಟ ರವಿ ರಾಘವೇಂದ್ರ ಹಾಗೂ ಲಕ್ಷ್ಮಿ ರವಿಚಂದರ್ ಕೂಡಾ ಒಟ್ಟಾಗಿ ಪ್ರಧಾನಿ ಮೋದಿಯನ್ನು ಭೇಟಿಯಾಗಿ ತಮ್ಮ ಮಕ್ಕಳ ಮದುವೆಗೆ ಆಹ್ವಾನಿಸಿದ್ದಾರೆ.

ಐಪಿಎಲ್‌ ಸ್ಟ್ಯಾಂಡ್‌ನಿಂದ ಸ್ಪಾಟ್‌ಲೈಟ್‌ಗೆ ಬಂದ ಕಾವ್ಯಾ ಮಾರನ್:

ಕಲಾನಿಧಿ ಮಾರನ್ ಅವರ ಮಗಳು ಕಾವ್ಯಾ ಮಾರನ್ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಹ ಒಡತಿಯಾಗಿದ್ದಾರೆ. ಐಪಿಎಲ್ ಹರಾಜಿನಲ್ಲಿ ಮಾತ್ರವಲ್ಲದೇ ತಮ್ಮ ತಂಡ ಆಡುವಾಗಲೆಲ್ಲಾ ಮೈದಾನಕ್ಕೆ ಬಂದು ಕಾವ್ಯಾ ಮಾರನ್ ಹುರಿದುಂಬಿಸುತ್ತಲೇ ಇರುತ್ತಾರೆ. ಇದು ಅವರ ಕ್ರಿಕೆಟ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇನ್ನು ಕಾವ್ಯಾ ಮಾರನ್ ಅವರ ಕೈಹಿಡಿಯುತ್ತಿರುವ ಅನಿರುದ್ದ್ ರವಿಚಂದರ್, ಭಾರತೀಯ ಸಿನಿಮಾದ ಪ್ರಮುಖ ಸಂಗೀತ ಸಂಯೋಜಕರಾಗಿ ಗುರುತಿಸಕೊಂಡಿದ್ದಾರೆ. ಅನಿರುದ್ದ್ ರವಿಚಂದರ್, ಇತ್ತೀಚೆಗಷ್ಟೇ ತೆರೆಕಂಡ ರಜಿನಿಕಾಂತ್ ನಟನೆಯ ಜೈಲರ್-2 ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೋಡ್ಲಾ ಹಾಲಿನಲ್ಲಿ ಡಿಟರ್ಜೆಂಟ್ ಕ್ಲಾಸ್ಟಿಕ್ ಸೋಡಾ ಪತ್ತೆ, ಕುಡಿಯಲು ಯೋಗ್ಯವಲ್ಲ ಎಂದ FSSAI
ದೀಪಾವಳಿಗೂ ಮುನ್ನವೇ ಮಹಿಳೆಯರಿಗೆ ಹಬ್ಬ? ವಿಶೇಷ ಅಧಿವೇಶನ ಕರೆದ ಸರ್ಕಾರ- ಏನಿರತ್ತೆ ಇದರಲ್ಲಿ