ಕೇಂದ್ರದ ಬಿಜೆಪಿ ಸರ್ಕಾರ ವಿರುದ್ಧ ಸದಾ ಗುಡುಗುವ ಜಮ್ಮ ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರುಖ್ ಅಬ್ದುಬಲ್ಲಾ ಇದೀಗ ಭಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಿಜೆಪಿ ಸರ್ಕಾರ ಕಾಶ್ಮೀರ ನೀತಿಗಳ ವಿರುದ್ಧ ಮಾತನಾಡುವ ವೇಳೆ, ಕಾಶ್ಮೀರ ಜನತೆ ಭಾರತಕ್ಕಿಂತ ಚೀನಾ ಆಳ್ವಿಕೆಯನ್ನು ಬಯಸುತ್ತಿದ್ದಾರೆ ಎಂದಿದ್ದಾರೆ.
ಜಮ್ಮ ಮತ್ತು ಕಾಶ್ಮೀರ(ಸೆ.24): ಕೇಂದ್ರದ ಬಿಜಿಪಿಯನ್ನು ಟೀಕಿಸುವ, ಕೇಂದ್ರ ಕಾಶ್ಮೀರದ ಮೇಲೆ ತಾಳಿರುವ ನಿಲುವುಗಳನ್ನು ಕಟು ಶಬ್ದಗಳಲ್ಲಿ ವಿರೋಧಿಸಲು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾಶ್ಮೀರ ಜನತೆಗೆ ಭಾರತದಲ್ಲಿದ್ದೇವೆ ಎಂದು ಅನಿಸುತ್ತಿಲ್ಲ. ಇದಕ್ಕಿಂತ ಚೀನಾ ಆಳ್ವಿಕೆಯನ್ನು ಕಾಶ್ಮೀರ ಜನತೆ ಬಯಸುತ್ತಿದ್ದಾರೆ ಎಂದು ಜಮ್ಮ ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ವಿವಾದದ ಕಿಡಿ ಹೊತ್ತಿಸಿದ್ದಾರೆ.
7 ತಿಂಗಳ ಬಳಿಕ ಕಾಶ್ಮೀರ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಬಿಡುಗಡೆ!...
undefined
ವೈಯರ್ ಮಾಧ್ಯಕ್ಕೆ ನೀಡಿದ ಸಂದರ್ಶನದಲ್ಲಿ ಕೇಂದ್ರದ ವಿರುದ್ಧ ಗುಡುಗಿದ್ದಾರೆ. ಕಾಶ್ಮೀರ ಜನತೆಯನ್ನು ಜೀತದಾಳುಗಳಂತೆ ನೋಡಲಾಗುತ್ತಿದೆ. ಇಲ್ಲಿನ ಜನತೆ 2ನೇ ದರ್ಜೆ ನಾಗರೀಕರಂತೆ ಪರಿಗಣಿಸಲಾಗಿದೆ ಎಂದು ಅಬ್ದುಲ್ಲಾ ಹೇಳಿದ್ದಾರೆ. ಕಾಶ್ಮೀರದ ಆರ್ಟಿಕಲ್ 370 ವಿಶೇಷ ಸ್ಥಾನ ರದ್ದು ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಮತ್ತೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಿನಿಯರ್ ಮತ್ತು ಜ್ಯೂನಿಯರ್ ಅಬ್ದುಲ್ಲಾರನ್ನು ಭೇಟಿಯಾದ ಎನ್‌ಸಿ ನಿಯೋಗ!.
ಕಾಶ್ಮೀರ ಜನತೆ ಆರ್ಟಿಕಲ್ 370 ರದ್ದತಿಯನ್ನು ಸಂತಸದಿಂದ ಸ್ವೀಕರಿಸಿದ್ದಾರೆ. ಈಗ ಕಾಶ್ಮೀರದಲ್ಲಿ ಪ್ರತಿಭಟನೆ ಕಲ್ಲು ತೂರಾಟ ನಡೆಯುತ್ತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ಕಾಶ್ಮೀರದ ಬೀದಿಗಳಲ್ಲಿನ ಸೇನಾ ತುಕಡಿಯನ್ನು ವಾಪಸ್ ಕರೆಸಿಕೊಂಡರೆ, ಜನರು ಬೀದಿ ಬೀದಿಗೆ ಇಳಿದು ಪ್ರತಿಭಟನೆ ನಡೆಸಲಿದ್ದಾರೆ.ಕೇಂದ್ರದ ನಿಲುವಿನ ವಿರುದ್ಧ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಜನರಿಗೆ ಅವಕಾಶವೇ ಇಲ್ಲ ಎಂದು ಫಾರುಖ್ ಅಬ್ದುಲ್ಲ ಹೇಳಿದ್ದಾರೆ.
ಆರ್ಟಿಕಲ್ 370 ರದ್ದತಿ ಬಳಿಕ ಕಾಶ್ಮೀರ ಜನತೆ ಕೇಂದ್ರ ಸರ್ಕಾರದ ಮೇಲಿನ ಭರವಸೆ ಕಳೆದುಕೊಂಡಿದ್ದಾರೆ. ಇದೀಗ ಕಾಶ್ಮೀರ ಜನತೆಗೆ ತಾವು ಭಾರತದ ಭಾಗ ಎಂದು ಅನಿಸುತ್ತಿಲ್ಲ. ಕಾಶ್ಮೀರ ಜನ ಭಾರತದ ಬದಲು ಚೀನಾ ಆಳ್ವಿಕೆಯನ್ನು ಆಯ್ಕೆ ಮಾಡಲಿದ್ದಾರೆ ಎಂದು ಅಬ್ದುಲ್ಲಾ ಹೇಳಿದ್ದಾರೆ.