ಕಸಬ್‌ ನ್ಯಾಯಾಂಗ ನಿಂದನೆ ಮಾಡಿಲ್ಲ, ಮನೇಕಾ ಉಲ್ಲಂಘಿಸಿದ್ದಾರೆ : ಸುಪ್ರೀಂ

Kannadaprabha News   | Kannada Prabha
Published : Jan 21, 2026, 05:37 AM IST
Maneka Gandhi

ಸಾರಾಂಶ

ಬೀದಿ ನಾಯಿಗಳ ಕುರಿತು ತನ್ನ ತೀರ್ಪಿನ ಬಗ್ಗೆ ವ್ಯತಿರಿಕ್ತ ಹೇಳಿಕೆ ನೀಡಿದ್ದ ಕೇಂದ್ರದ ಮಾಜಿ ಸಚಿವೆ ಮನೇಕಾ ಗಾಂಧಿ ವಿರುದ್ಧ ಸುಪ್ರೀಂ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ ಇಂಥ ಹೇಳಿಕೆ ನ್ಯಾಯಾಂಗ ನಿಂದನೆ ಎಂದು ಎಚ್ಚರಿಸಿದೆ.

ನವದೆಹಲಿ: ಬೀದಿ ನಾಯಿಗಳ ಕುರಿತು ತನ್ನ ತೀರ್ಪಿನ ಬಗ್ಗೆ ವ್ಯತಿರಿಕ್ತ ಹೇಳಿಕೆ ನೀಡಿದ್ದ ಕೇಂದ್ರದ ಮಾಜಿ ಸಚಿವೆ ಮನೇಕಾ ಗಾಂಧಿ ವಿರುದ್ಧ ಸುಪ್ರೀಂ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ ಇಂಥ ಹೇಳಿಕೆ ನ್ಯಾಯಾಂಗ ನಿಂದನೆ ಎಂದು ಎಚ್ಚರಿಸಿದೆ.

ಪೋಷಣಾ ಕೇಂದ್ರಗಳಿಗೆ ವರ್ಗಾಯಿಸಬೇಕು ಎಂದು ಸೂಚಿಸಿತ್ತು

ದೆಹಲಿಯ ಶೈಕ್ಷಣಿಕ ಸಂಸ್ಥೆ, ಆಸ್ಪತ್ರೆ, ಬಸ್‌, ರೈಲ್ವೆ ನಿಲ್ದಾಣದ ವ್ಯಾಪ್ತಿಯಲ್ಲಿನ ನಾಯಿಗಳನ್ನು ಸೆರೆಹಿಡಿದು ಅವುಗಳನ್ನು ಪೋಷಣಾ ಕೇಂದ್ರಗಳಿಗೆ ವರ್ಗಾಯಿಸಬೇಕು ಎಂದು ಕಳೆದ ವರ್ಷ ಸುಪ್ರೀಂಕೋರ್ಟ್‌ ಸೂಚಿಸಿತ್ತು.

ಅಪಸ್ವರ ಎತ್ತಿದ್ದ ಮನೇಕಾ

ಈ ಆದೇಶದ ಬಗ್ಗೆ ಅಪಸ್ವರ ಎತ್ತಿದ್ದ ಮನೇಕಾ, ‘ಈ ಆದೇಶ ನೋಡಿದರೆ ಯಾರೋ ಸಿಟ್ಟಿನಲ್ಲಿದ್ದ ನ್ಯಾಯಾಧೀಶರು ಆದೇಶ ಮಾಡಿದಂತಿದೆ. ಆದೇಶ ವಿಚಿತ್ರವಾಗಿದೆ. ಇದನ್ನು ಕಾರ್ಯರೂಪಕ್ಕೆ ತರುವುದು ಕಷ್ಟ. ಕೋರ್ಟ್‌ ಆದೇಶದಂತೆ ಕನಿಷ್ಠ 5000 ನಾಯಿ ಹಿಡಿದರೂ ಅವುಗಳನ್ನು ಇಡಲು ವ್ಯವಸ್ಥೆ ಎಲ್ಲಿದೆ?

ಜೊತೆಗೆ ಇದಕ್ಕೆಲ್ಲಾ ವಿವಿಧ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಇದೆ’ ಎಂದಿದ್ದರು. ಈ ಬಗ್ಗೆ ಕಿಡಿಕಾರಿದ ನ್ಯಾಯಾಲಯ ಇಂಥ ಹೇಳಿಕೆಗಳು ನ್ಯಾಯಾಂಗ ಉಲ್ಲಂಘನೆಯಾಗುತ್ತದೆ. ಸಂಸದೆಯಾಗಿದ್ದ ಅವಧಿಯಲ್ಲಿ ಮನೇಕಾ ಅವರು ಬೀದಿ ನಾಯಿಗಳ ನಿರ್ವಹಣೆಗೆ ಎಷ್ಟು ಹಣ ನೀಡಿದ್ದಾರೆ ಎಂದು ಪ್ರಶ್ನಿಸಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾಷಣ ಓದದೆ ವಿಧಾನಸಭೆಯಿಂದ ಹೊರನಡೆದ ತ.ನಾಡು ರಾಜ್ಯಪಾಲ
ಕಾಶ್ಮೀರಿ ಉಗ್ರರ ಬಂಕರ್ರಲ್ಲಿ ಮ್ಯಾಗಿ, ಅಕ್ಕಿ, ಎಲ್ಪಿಜಿ ಪತ್ತೆ!