
ಖಾಸಗಿ ಬಸ್‌ನಲ್ಲಿ ಹಗಲು ಹೊತ್ತಲ್ಲೇ ಕಳ್ಳತನ ಮಾಡಿದ ಪ್ರಕರಣದಲ್ಲಿ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕದ ಕೊಪ್ಪ ಮೂಲದ ರಾಧಾ (49) ಬಂಧಿತ ಮಹಿಳೆ. ಪೆರುಂಬಾವೂರ್ ಪೊಲೀಸರು ಈಕೆಯನ್ನು ಅರೆಸ್ಟ್ ಮಾಡಿದ್ದಾರೆ.
ಕಳೆದ ದಿನ ಸಂಜೆ ಸುಮಾರು 4:30ಕ್ಕೆ ಈ ಘಟನೆ ನಡೆದಿದೆ. ಕೊಂಬನಾಡ್ ತೆಕ್ಕುಪುರಂ ನಿವಾಸಿಯೊಬ್ಬರ ಬ್ಯಾಗ್‌ನಲ್ಲಿದ್ದ ಹಣ, ಎಟಿಎಂ ಕಾರ್ಡ್ ಮತ್ತು ಪೆನ್‌ಡ್ರೈವ್ ಇದ್ದ ಪರ್ಸ್ ಅನ್ನು ರಾಧಾ ಕದ್ದಿದ್ದಳು. ಪೆರುಂಬಾವೂರ್ ಪ್ರೈವೇಟ್ ಬಸ್ ಸ್ಟ್ಯಾಂಡ್‌ನಲ್ಲಿ ಬಸ್ ನಿಂತಾಗ, ಪ್ರಯಾಣಿಕರು ಇಳಿಯುತ್ತಿದ್ದ ವೇಳೆ ಈ ಕಳ್ಳತನ ನಡೆದಿದೆ. ಬಸ್ಸು ಐಮುರಿಯಿಂದ ಪೆರುಂಬಾವೂರ್‌ಗೆ ಬರುತ್ತಿತ್ತು. ಈ ಕಳ್ಳತನದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.
ಬಸ್‌ನ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳು ವೈರಲ್ ಆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಹಿಡಿದಿದ್ದಾರೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ತನ್ನ ಸ್ಟಾಪ್‌ನಲ್ಲಿ ಇಳಿಯಲು ನಿಂತಿದ್ದಾಗ ರಾಧಾ ಈ ಕೃತ್ಯ ಎಸಗಿದ್ದಾಳೆ. ಪ್ರಯಾಣಿಕರ ಪಕ್ಕ ಬಂದು ನಿಂತು, ಅವರ ಮೈಮೇಲೆ ಒರಗಿಕೊಂಡಂತೆ ನಟಿಸಿ, ಯಾರಿಗೂ ಗೊತ್ತಾಗದಂತೆ ಕಳ್ಳತನ ಮಾಡಿದ್ದಳು.
ತನ್ನ ಚೂಡಿದಾರದ ಶಾಲಿನಿಂದ ಕೈಯನ್ನು ಮುಚ್ಚಿಕೊಂಡು, ಪ್ರಯಾಣಿಕರ ಬ್ಯಾಗಿನೊಳಗೆ ಕೈ ಹಾಕಿ ಪರ್ಸ್ ಎಗರಿಸಿದ್ದಳು. ನಂತರ ಏನೂ ಗೊತ್ತಿಲ್ಲದವಳಂತೆ ನಿಂತುಕೊಂಡಿದ್ದಳು. ಬಸ್ ನಿಂತಾಗ, ಮೊದಲು ಸಂತ್ರಸ್ತ ಮಹಿಳೆ ಇಳಿದು, ಅವರ ಹಿಂದೆಯೇ ಆರೋಪಿ ರಾಧಾ ಕೂಡ ಇಳಿದು ಹೋಗಿದ್ದಾಳೆ.
ಬಸ್‌ನಿಂದ ಇಳಿದ ನಂತರ ಸಂತ್ರಸ್ತ ಮಹಿಳೆ ತನ್ನ ಬ್ಯಾಗ್ ಪರಿಶೀಲಿಸಿದಾಗ ಪರ್ಸ್ ಕಳ್ಳತನವಾಗಿರುವುದು ಗೊತ್ತಾಗಿದೆ. ತಕ್ಷಣವೇ ಅವರು ಪೆರುಂಬಾವೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು, ಮೊದಲು ಆ ಬಸ್‌ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಆಗ, ಮಹಿಳೆ ಕಳ್ಳತನ ಮಾಡಿದ್ದು ಮತ್ತು ಕಳ್ಳಿಯ ಗುರುತು ಸ್ಪಷ್ಟವಾಗಿ ಪತ್ತೆಯಾಗಿದೆ. ನಂತರ ತನಿಖೆ ಚುರುಕುಗೊಳಿಸಿದ ಪೊಲೀಸರು, ಕರ್ನಾಟಕದ ಕೊಪ್ಪ ಮೂಲದ ರಾಧಾಳನ್ನು ಕಾಕ್ಕನಾಡ್‌ನಲ್ಲಿರುವ ಆಕೆಯ ನಿವಾಸದಿಂದ ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ