
ನವದೆಹಲಿ: ಮಧ್ಯಪ್ರಾಚ್ಯ ಯುದ್ಧದಿಂದ ದೇಶ ಕಚ್ಚಾತೈಲದ ಜತೆ ನೈಸರ್ಗಿಕ ಇಂಧನದ ಕೊರತೆಯನ್ನೂ ಎದುರಿಸುತ್ತಿರುವ ಹೊತ್ತಿನಲ್ಲಿ ಅಂಡಮಾನ್ ಸಮುದ್ರದಲ್ಲಿ ನೈಸರ್ಗಿಕ ಅನಿಲವಿರುವ ಇನ್ನೊಂದು ಬಾವಿಯನ್ನು ಆಯಿಲ್ ಇಂಡಿಯಾ ಲಿ. ಪತ್ತೆ ಮಾಡಿದೆ.
ಈ ಬಗ್ಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಪುರಿ ಅವರು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ಅಂಡಮಾನ್ ದ್ವೀಪದ ಪೂರ್ವ ಕರಾವಳಿಯಿಂದ 15 ಕಿ.ಮೀ. ದೂರದಲ್ಲಿ ತೋಡಲಾದ ಶ್ರೀ ವಿಜಯಪುರಂ-3 ಬಾವಿಯಲ್ಲಿ ನೈಸರ್ಗಿಕ ಅನಿಲ ಪತ್ತೆಯಾಗಿದೆ. 1900 ಮೀಟರ್‌ಗಿಂತಲೂ ಹೆಚ್ಚು ಆಳದಲ್ಲಿರುವ ಬಾವಿಯಲ್ಲಿ ಅನಿಲದ ಉಪಸ್ಥಿತಿಯನ್ನು ಉರಿಯುವಿಕೆಯ ಮೂಲಕ ಖಚಿತಪಡಿಸಿಕೊಳ್ಳಲಾಯಿತು’ ಎಂದು ಬರೆದುಕೊಂಡಿದ್ದಾರೆ.
ಅನಿಲ ಪತ್ತೆಗೆಂದು ಅಂಡಮಾನ್ ಸಮುದ್ರದಲ್ಲಿ 3 ಬಾವಿಗಳನ್ನು ತೋಡಲಾಗಿದ್ದು, ಅನಿಲ ಪತ್ತೆಯಾದ 2ನೇ ಬಾವಿ ಇದಾಗಿದೆ.
Congratulations @OilIndiaLimited !
An ocean of energy opportunities reinforced in the Andaman Sea!
Very happy to report the presence of natural gas in Sri Vijayapuram-3 an exploratory well drilled by Oil India Ltd. 15 km off the east coast of the Andaman Islands at a water… pic.twitter.com/j6QvWqZkFx— Hardeep Singh Puri (@HardeepSPuri) June 5, 2026
India Strikes Natural Gas in Andaman Sea! Major Energy Discovery
Union Petroleum and Natural Gas Minister Hardeep Singh Puri announced that the discovery was made in waters approximately 355 meters deep, marking another important milestone in India's offshore energy exploration… pic.twitter.com/UO5CPeTCcV— Global Frontline News (@OmeyLad23) June 5, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ