
ನವದೆಹಲಿ(ಫೆ. 11): ರಾಜ್ಯದಲ್ಲಿ ಹಿಜಾಬ್ (Hijab Row) ಪ್ರಕರಣದ ಕುರಿತು ಹೈಕೋರ್ಟ್ ನಲ್ಲಿ ತ್ರಿಸದಸ್ಯ ಪೀಠ ವಿಚಾರಣೆ ನಡೆಸುತ್ತಿರುವಾಗಲೇ, ಹೈಕೋರ್ಟ್ (High Court) ನೀಡಿದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ಯುವ ಮುಖಂಡ (Congress Youth Leader B V Srinivas ) ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿವಿ ಶ್ರೀನಿವಾಸ್ (Youth Congress president BV Srinivas) ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರಲು ತೀರ್ಮಾನಿಸಿದ್ದಾರೆ. ಮುಸ್ಲಿಂ ಹುಡುಗಿರುವ ತಲೆಗೆ ಹಿಜಾಬ್ ಧರಿಸುವುದು ಅವರ ಮೂಲಭೂತ ಹಕ್ಕು ಎಂದು ಬಿವಿ ಶ್ರೀನಿವಾಸ್ ಹೇಳಿದ್ದಾರೆ.
ಯಾವುದೇ ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ತಡೆಯುವುದಿಲ್ಲ ಮತ್ತು ಧರ್ಮದ ಹೆಸರಿನಲ್ಲಿ ಬೆದರಿಕೆ ಹಾಕದಂತೆ ರಾಜ್ಯಗಳಿಗೆ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ಹೇಳಲಾಗಿದೆ. ಸೋಮವಾರದ ವಿಚಾರಣೆ ಮುಂದುವರಿಯಲಿದ್ದು ಅಲ್ಲಿಯವರೆಗೂ ಶಾಲೆ ಕಾಲೇಜುಗಳಲ್ಲಿ ಧಾರ್ಮಿಕ ಉಡುಪುಗಳನ್ನು ತೊಡಬೇಡಿ ಎಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೊರೆ ಹೋದ ದಿನವೇ ಯುವ ಕಾಂಗ್ರೆಸ್ ಈ ನಿರ್ಧಾರ ಮಾಡಿದೆ. ಇನ್ನೊಂದೆಡೆ ಸುಪ್ರೀಂ ಕೋರ್ಟ್ ಕೂಡ, ಪರೀಕ್ಷೆಗಳಿಗೆ ಇದರಿಂದ ಅಡ್ಡಿಯಾಗುತ್ತಿದೆ ಎನ್ನುವ ಸಂದರ್ಭಗಳಿದ್ದರೆ ಮಾತ್ರವೇ ಈ ವಿಷಯದ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದೆ. ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿ ಸಲ್ಲಿಸಿದ ಮನವಿಯಲ್ಲಿ ಮೂಲಭೂತ ಹಕ್ಕುಗಳ ನೇರ ಉಲ್ಲಂಘನೆಯಾಗುತ್ತಿದೆ ಮತ್ತು ಹಲವಾರು ರಾಜ್ಯಗಳಲ್ಲಿ ಘಟನೆಗಳು ನಡೆಯುತ್ತಿವೆ ಮತ್ತು ಮತ್ತಷ್ಟು ಹರಡುವ ಸಾಧ್ಯತೆಯಿರುವುದರಿಂದ ಈ ಸಮಸ್ಯೆಯ ಕುರಿತು ಸುಪ್ರೀಂ ಕೋರ್ಟ್ ಗಮನ ಹರಿಸುವುದು ಉತ್ತಮ ಹಾಗೂ ಸರಿಯಾದುದಾಗಿರುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
“ದೇಶದಲ್ಲಿ ಅತಿ ಹೆಚ್ಚು ಯುನಿಕಾರ್ನ್‌ಗಳನ್ನು ಹುಟ್ಟುಹಾಕುವ ಮತ್ತು ದೇಶದ ಐಟಿ ಹಬ್ ಎಂದು ಕರೆಯಲ್ಪಡುವ ಕರ್ನಾಟಕ (Karnataka) ರಾಜ್ಯವು ಅತ್ಯಂತ ದುಃಖಕರವಾಗಿ ಧಾರ್ಮಿಕ ಮತಾಂಧತೆಗೆ ಇಳಿದಿದೆ, ಅಲ್ಲಿ ಮುಸ್ಲಿಂ ಯುವತಿಯರ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ. ಕರ್ನಾಟಕದ ಉಡುಪಿಯಂತಹ ಸೇರಿದಂತೆ ಇತರ ಸ್ಥಳಗಳಲ್ಲಿ ಎಲ್ಲಾ ಧರ್ಮದ ಜನರು ಶಾಂತಿ ಮತ್ತು ಸೌಹಾರ್ದತೆಯಿಂದ ಒಟ್ಟಿಗೆ ವಾಸಿಸುವ ಅತ್ಯಂತ ಶ್ರೀಮಂತ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ಹೊಂದಿವೆ. ಆ ಸಂಸ್ಕೃತಿ ಮತ್ತು ಸಾಮಾಜಿಕ ರಚನೆಯೇ ಈಗ ಕದಡುತ್ತಿದೆ. ಎಷ್ಟರಮಟ್ಟಿಗೆ ಎಂದರೆ ಶಾಲಾ-ಕಾಲೇಜುಗಳಂತಹ ಕಲಿಕಾ ಮಂದಿರಗಳನ್ನೂ ಇದರ ಕೇಂದ್ರವನ್ನಾಗಿ ಮಾಡಿಕೊಳ್ಳಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳು ಈ ಸಮಸ್ಯೆಗಳಲ್ಲಿ ಭಾಗಿಯಾಗಬಾರದು. ನಮ್ಮ ಸಂವಿಧಾನವನ್ನು ಉಳಿಸಲು ಮತ್ತು ನಮ್ಮ ದೇಶದ ಜಾತ್ಯತೀತ ಫ್ಯಾಬ್ರಿಕ್ ಅನ್ನು ಉಳಿಸಲು ನಾವು ಈ ಹೋರಾಟವನ್ನು ಕೈಗೆತ್ತಿಕೊಳ್ಳುತ್ತೇವೆ ಮತ್ತು ಈ ಸಮಸ್ಯೆಯನ್ನು ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್‌ನಲ್ಲಿ ಮುಂದುವರಿಸುತ್ತೇವೆ" ಎಂದು ಬಿವಿ ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Karnataka Hijab Row : 'ವಿಳಾಸ, ಪೋನ್ ನಂಬರ್ ಕಾಲೇಜಿನಿಂದಲೇ ಲೀಕ್ ಆಗಿದೆ.. SPಗೆ ವಿದ್ಯಾರ್ಥಿನಿಯರ ದೂರು
ಕರ್ನಾಟಕ ರಾಜ್ಯದಲ್ಲಿ ಇತ್ತೀಚೆಗೆ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಹೇಳಿರುವ ಶ್ರೀನಿವಾಸ್ ಬಿವಿ, ಹಿಜಾಬ್ ವಿಚಾರದಲ್ಲಿ ಆಗಿರುವ ಘಟನೆಗಳಿಗೆ ತೀವ್ರ ಕಳವಳ ಹಾಗೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಉಡುಪಿ, ಮಂಡ್ಯ, ಚಿಕ್ಕಮಗಳೂರು ಸೇರಿದಂತೆ ಕರ್ನಾಟಕ ರಾಜ್ಯದ ಇತರ ಸ್ಥಳಗಳಲ್ಲಿ ಅನೇಕ ಸಂದರ್ಭಗಳಲ್ಲಿ, ಅನೇಕ ಸಂಸ್ಥೆಗಳಲ್ಲಿ ಹಿಜಾಬ್ ಅಥವಾ ತಲೆಗೆ ಸ್ಕಾರ್ಫ್ ಧರಿಸಿದ್ದಕ್ಕಾಗಿ ಮುಸ್ಲಿಂ ಹೆಣ್ಣುಮಕ್ಕಳಿಗೆ ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಪ್ರವೇಶ ನಿರಾಕರಿಸಿದ ಘಟನೆಗಳು ನಡೆದಿವೆ. ಇದು ಪುದುಚೇರಿ ಸೇರಿದಂತೆ ದೇಶದ ಇತರ ಭಾಗಗಳಿಗೂ ಹರಡಿದೆ. ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ಬುರ್ಖಾ ಧರಿಸಿದ್ದ ಮುಸ್ಲಿಂ ಯುವತಿಯೊಬ್ಬಳ ಮುಂದೆ ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾ ದೊಡ್ಡ ಗುಂಪು ಬೆದರಿಸಿರುವ ಘಟನೆ ವರದಿಯಾಗಿದೆ. ಘಟನೆಗಳು, ಮೇಲ್ನೋಟಕ್ಕೆ, ಭಾರತದ ಸಂವಿಧಾನದ 1950 ರ 21, 21A, 14 ಮತ್ತು 25 ನೇ ವಿಧಿಗಳನ್ನು ಉಲ್ಲಂಘಿಸುತ್ತದೆ, ಅದು ಬದುಕುವ ಹಕ್ಕು, ಶಿಕ್ಷಣದ ಹಕ್ಕು, ಸಮಾನತೆಯ ಹಕ್ಕು ಮತ್ತು ಧರ್ಮದ ಸ್ವಾತಂತ್ರ್ಯದ ಉಲ್ಲಂಘನೆ' ಎಂದು ತಿಳಿಸಿದ್ದಾರೆ.
Hijab Row: ಮಂಡ್ಯದ ಮುಸ್ಕಾನ್‌ಗೆ ಮದನಿ ಧೈರ್ಯಕ್ಕೆ ಸಿಎಂ ಇಬ್ರಾಹಿಂ ಶಹಭ್ಭಾಸ್..!
ಮೇಲಿನ ಸಾಂವಿಧಾನಿಕ ಸಮಸ್ಯೆಗಳನ್ನು ಗೌರವಾನ್ವಿತ ಅಪೆಕ್ಸ್ ನ್ಯಾಯಾಲಯದ ಮುಂದೆ ಪ್ರಶ್ನಿಸಲಾಗಿದ್ದು, ಬಿವಿ ಶ್ರೀನಿವಾಸ್ ಅವರೊಂದಿಗೆ ಸುಪ್ರೀಂ ಕೋರ್ಟ್ ವಕೀಲರಾದ ಮಾರೀಶ್ ಪ್ರವಿರ್ ಸಹಾಯ್, ರೂಪೇಶ್ ಸಿಂಗ್ ಬಧೂರಿಯಾ, ಉಮೇಶ್ ಪ್ರತಾಪ್ ಸಿಂಗ್ ಅವರೊಂದಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಇದನ್ನು ಸುಪ್ರೀಂ ಕೋರ್ಟ್ ಯಾವುದೇ ಸಮಯದಲ್ಲಿ ಬೇಕಾದರೂ ವಿಚಾರಣೆಗೆ ಕೈಗೆತ್ತಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ